ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ನಕಲು ನಡೆಯದಂತೆನೋಡಿಕೊಳ್ಳಬೇಕು:ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ

ಬೀದರ, ಮೇ 19: ಮೇ 23 ರಿಂದ ಜೂನ್ 3 ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳಲ್ಲಿ ನಕಲು ನಡೆಯದಂತೆ ಬೀದರ ಜಿಲ್ಲೆಯಲ್ಲಿ ಪರೀಕ್ಷೆಗಳನ್ನು ಸುವ್ಯವಸ್ಥಿತವಾಗಿ ನಡೆಸಬೇಕೆಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಹೇಳಿದರು.

ಅವರು ಗುರುವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ನಡೆಸುವ ಕುರಿತು ಕರೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಒಟ್ಟು 11 ಪರೀಕ್ಷಾ ಕೇಂದ್ರಗಳಿದ್ದು ಬೀದರ ನಗರದಲ್ಲಿ ನಾಲ್ಕು, ಹುಮನಾಬಾದನಲ್ಲಿ ಎರಡು, ಬಸವಕಲ್ಯಾಣದಲ್ಲಿ ಎರಡು, ಔರಾದನಲ್ಲಿ ಒಂದು, ಭಾಲ್ಕಿ ತಾಲ್ಲೂಕಿನಲ್ಲಿ ಎರಡು ಪರೀಕ್ಷಾ ಕೇಂದ್ರಗಳು ಇರಲಿದ್ದು ಬೀದರ ಜಿಲ್ಲೆಯಲ್ಲಿ ಒಟ್ಟು 5381 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ ಎಂದರು.

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳ ವೇಳಾಪಟ್ಟಿ ವಿವರ: ಮೇ 23 ರಂದು ಬೆಳಿಗ್ಗೆ 10.15 ರಿಂದ 1.30 ರವರೆಗೆ ಕನ್ನಡ, ಅರೆಬಿಕ್ ಮತ್ತು ಮೇ 24 ರಂದು ಬೆಳಿಗ್ಗೆ 10.15 ರಿಂದ 1.30 ರವರೆಗೆ ಕನ್ನಡ ಐಚ್ಛಿಕ, ರಸಾಯನಶಾಸ್ತ್ರ, ಗಣಿತ ಹಾಗೂ ಮೇ 25 ರಂದು ಬೆಳಿಗ್ಗೆ 10.15 ರಿಂದ 1.30 ರವರೆಗೆ ಇಂಗ್ಲೀಷ್ ಹಾಗೂ ಮಧ್ಯಾಹ್ನ 2.15 ರಿಂದ 5.30 ರವರೆಗೆ ಇನಫಾರಮೆಷನ್ ಆ್ಯಂಡ್ ಟೆಕ್ನಾಲಾಜಿ, ರಿಟೆಲ್, ಆಟೋಮೊಬೈಲ್, ಹೆಲ್ತಕೆರ್, ಬ್ಯೂಟಿ ಆ್ಯಂಡ್ ವೆಲನೆಸ್ ಮತ್ತು ಮೇ 26 ರಂದು ಬೆಳಿಗ್ಗೆ 10.15 ರಿಂದ 1.30 ರವರೆಗೆ ಸಮಾಜಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಹಾಗೂ ಮೇ 27 ರಂದು ಇತಿಹಾಸ, ಸಂಖ್ಯಾಶಾಸ್ತ್ರ ವಿಷಯಗಳ ಪರೀಕ್ಷೆಗಳು ನಡೆಯಲಿವೆ.

ಮೇ 29 ರಂದು ಬೆಳಿಗ್ಗೆ 10.15 ರಿಂದ 1.30 ರವರೆಗೆ ಹಿಂದಿ, ಮಧ್ಯಾಹ್ನ 2.15 ರಿಂದ 5.30 ರವರೆಗೆ ತಮಿಳು, ತೆಲಗು, ಮಳಿಯಾಳಂ, ಮರಾಠಿ, ಉರ್ದು, ಸಂಸ್ಕøತ, ಫ್ರೆಂಚ್ ಹಾಗೂ ಮೇ 30 ರಂದು ಬೆಳಿಗ್ಗೆ 10.15 ರಿಂದ 1.30 ರವರೆಗೆ ಭೂಗೋಳಶಾಸ್ತ್ರ, ಮನೋವಿಜ್ಞಾನ, ಭೌತಶಾಸ್ತ್ರ ಹಾಗೂ ಮೇ 31 ರಂದು ಅಕೌಂಟೆನ್ಸಿ, ಜಿಯಾಲೋಜಿ, ಎಜ್ಯುಕೇಶನ್, ಹೋಮ ಸೈನ್ಸ್ ಮತ್ತು ಜೂನ್ 1 ರಂದು ರಾಜ್ಯಶಾಸ್ತ್ರ, ಗಣಿತ ಹಾಗೂ ಜೂನ್ 2 ರಂದು ಲಾಜಿಕ್, ಹಿಂದೂಸ್ತಾನಿ ಮ್ಯುಜಿಕ್, ಬಿಸನೆನ್ಸ್ ಸ್ಟಡೀಸ್ ಹಾಗೂ ಜೂನ್ 3 ರಂದು ಅರ್ಥಶಾಸ್ತ್ರ, ಬಯೋಲಜಿ ವಿಷಯಗಳ ಪರೀಕ್ಷೆಗಳು ನಡೆಯಲಿವೆ.

ರೂಟ ಆಫೀಸರ ಪ್ರಶ್ನೆ ಪತ್ರಿಕೆಗಳನ್ನು ತೆಗೆದುಕೊಂಡು ಹೋಗಲು ಪೆÇಲೀಸ್ ಎಸ್ಕಾರ್ಟ ತಮ್ಮ ತಾಲೂಕಿನಿಂದ ತಂದು ಪ್ರಶ್ನೆ ಪತ್ರಿಕೆಗಳನ್ನು ತೆಗೆದುಕೊಂಡು ಹೋಗಬೇಕು ಸುರಕ್ಷಿತವಾಗಿ ಅವುಗಳನ್ನು ತಮ್ಮ ತಮ್ಮ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಬೇಕು ಮತ್ತು ಪರೀಕ್ಷೆಗಳಿಗೆ ನಿಯೋಜಿತ ಎಲ್ಲಾ ಅಧಿಕಾರ ಮತ್ತು ಸಿಬ್ಬಂದಿಗಳು ಜಿಲ್ಲೆಯಲ್ಲಿ ಎಲ್ಲೂ ನಕಲು ನಡೆಯದಂತೆ ನೋಡಿಕೊಳ್ಳಬೇಕೆಂದರು. ಪರೀಕ್ಷೆಗಳು ನಡೆಯುವ ದಿನದಂದು ಪರೀಕ್ಷಾ ಕೇಂದ್ರಗಳ ಸುತ್ತ ಕಲಂ 144 ಜಾರಿಯಲ್ಲಿರಲಿದೆ ಎಂದರು.

ಈ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಚಂದ್ರಕಾಂತ ಶಹಾಬಾದಕರ್, ಗಾಂಧಿಗಂಜ್ ಪೆÇಲೀಸ್ ಠಾಣೆಯ ಸಿ.ಪಿ.ಐ ಹನುಮರೆಡ್ಡೆಪ್ಪ ಮತ್ತು ಜಿಲ್ಲೆಯ ಆಯಾ ತಾಲೂಕಿನ ತಹಶಿಲ್ದಾರರು ಹಾಗೂ ಪರೀಕ್ಷೆಗಳಿಗೆ ನಿಯೋಜಿತ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು