
ರಾಯಚೂರು,ಮಾ.೧೪- ಮಾನವಿ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ದ್ವಿತೀಯ ದರ್ಜೆ ಸಹಾಯಕ ರಾಮಲಿಂಗಪ್ಪ ಅವರನ್ನು ಸೇವೆಯಿಂದ ಅಮಾನತ್ತು ಮಾಡಬೇಕೆಂದು ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಮಾನವಿ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ರಾಮಲಿಂಗಪ್ಪ ಅವರು ದ್ವಿತೀಯ ದರ್ಜೆ ಸಹಾಯಕರಾಗಿ ಸುಮಾರು ೩ ವರ್ಷಗಳಿಂದ ಕಛೇರಿಯಲ್ಲಿ ಕಾರ್ಯನಿರ್ವಹಿಸಿ, ಭಾರಿ ಭ್ರಷ್ಟಾಚಾರ ಎಸೆಗಿದ್ದಾರೆ. ಕೂಡಲೇ ಅವರನ್ನು ಅಮಾನುತ್ತು ಮಾಡಬೇಕೆಂದು ಆಗ್ರಹಿಸಿದರು. ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಸಂಬಳ ಮಾಡದೇ ನಿರ್ಲಕ್ಷ ತೋರುತ್ತಿದ್ದಾರೆ ಅಲ್ಲದೇ ಸಂಬಳ ಮಾಡಲು ಲಂಚ ಕೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾನವಿ ತಾಲೂಕಿನಲ್ಲಿರುವ ಪರಿಶಿಷ್ಟ ಜಾತಿ ಜನಾಂಗದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಇವರ ಮೇಲೆ ಇಡೀ ಶಾಪ ಹಾಕುತ್ತಿದ್ದಾರೆ. ಕಛೇರಿಗೆ ಸೇವಾ ಅವಧಿಯಲ್ಲಿ ಒಂದು ದಿನವಾದರೂ ಕಛೇರಿ ಸಮಯಕ್ಕೆ ಹಾಜರಾಗದ ಖಾಸಗಿ ಕೆಲಸಕ್ಕೆ ಹೊರಗಡೆ ಹೋಗುತ್ತಾರೆ. ಕಛೇರಿಯಲ್ಲಿ ಸಿಬ್ಬಂದಿಗಳಿಗೆ ಹಾಗೂ ಹಾಸ್ಟೆಲ್ ಸಿಬ್ಬಂದಿಗಳಿಗೆ ಬೆದರಿಕೆ, ಕಿರುಕುಳ, ಮಹಿಳಾ ಅಡುಗೆ ಸಹಾಯಕರಿಗೆ ಏಕವಚನ ಪದ ಪ್ರಯೋಗ, ಅಶ್ಲೀಲವಾಗಿ ಮಾತನಾಡುವುದು, ನನಗೆ ಎದುರು ಮಾತನಾಡಿದರೆ ನಿಮಗೆ ಸಂಬಳ ಮಾಡುವುದಿಲ್ಲ ಎಂದು ಬೆದರಿಕೆ ಹಾಕುವುದು, ಸಂಬಳ ಮಾಡುತ್ತೇನೆ ಎಂದು ಸಿಬ್ಬಂದಿಗೆ ರೂ. ೩ ಸಾವಿರ ರಂತೆ ೨೦ಕ್ಕೆ ಬೇಡಿಕೆ ಇರುವುದು ಸರ್ವೆ ಸಾಮಾನ್ಯವಾಗಿದೆ.
ಇಲಾಖೆಯ ಅಧೀನದಲ್ಲಿ ಬರುವ ಬಾಡಿಗೆ ಕಟ್ಟಡಗಳ ಅಲ್ ಮಾಡುವಾಗ ಕಟ್ಟಡ ಮಾಲೀಕರಿಂದ ೧೦% ಕಮಿಷನ್ ಕೊಟ್ಟರೆ ಮಾತ್ರ ಬಿಲ್ ಮಾಡಿಕೊಡುತ್ತೇನೆ ಎಂದು ಷರತ್ತು ಹಾಕುತ್ತಾರೆ. ತನ್ನ ಹುದ್ದೆ ಎಸ್.ಡಿ.ಎ. ಆದರೂ ತಾಲೂಕಿನಾದ್ಯಂತ ನಾನು ಎಫ್.ಡಿ.ಎ. ಇದ್ದೇನೆ ಎಂದು ಸುಳ್ಳು ಹೇಳ ಪ್ರಚಾರ ಮಾಡಿಕೊಳ್ಳುವುದು. ನಾನು ಬೇರೆ ಇಲಾಖೆಯಲ್ಲಿ ತಾಲೂಕಾ ಅಧಿಕಾರಿ ಆಗುತ್ತೇನೆ ಎಂದು ಸ್ಥಳೀಯ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಇವರು ನಮ್ಮ ಮಾವನವರು ಎಂದು ಸುಳ್ಳು ಪ್ರಚಾರ ಗಿಟ್ಟಿಸಿಕೊಳ್ಳುತ್ತಾನೆ. ದಿನಗೂಲಿ ನೌಕರರು ಕಛೇರಿಗೆ ಬಂದು ಏನಾದರೂ ಕೇಳಿದರೆ ನಿಮ್ಮ ಸಾಯಕ್ಕೆ ಬಿ ನೀಡುತ್ತೇನೆ ಎಂದು ಮಹಿಳಾ ಸಿಬ್ಬಂದಿಗೆ ಏಕವಚನದಲ್ಲಿ ಗದರಿಸುತ್ತಾರೆ.
ಕಛೇರಿಯಲ್ಲಿ ಯಾವುದಾದರೂ ಅಲ್ಲುಗಳು ಮಾಡು ಎಂದು ಸರಬರಾಕು ಮಾಡಿದ. ಟೆಂಡರ್‌ದಾರರು ನೀರು, ಸರಬರಾಜು, ಲೇಖನ ಸಾಮಗ್ರಿ ಹಾಗೂ ಇತರೆ ಸಾಮಗ್ರಿ ಟೆಂಡರುದಾರರಿಗೆ ಇಂತಿಷ್ಟು ಹಣ ಕೊಡು ಇಲ್ಲದಿದ್ದರೆ ನಿನ್ನ ಅಲ್ಲು ಮಾಡುವುದಿಲ್ಲ ಎಂದು ತಿಂಗಳುಗಟ್ಟಲೆ ಕಛೇರಿಗೆ ತಿರುಗಾಡಿಸುವುದು ಇವರ ಕಾಯಕವಾಗಿದೆ. ಮುಂದುವರೆದು ತಾಲ್ಲೂಕಿನಾದ್ಯಂತ ವಿವಿಧ ಸಾರ್ವಜನಿಕರಿಗೆ ಕಛೇರಿಯ ಮಾಹಿತಿಯನ್ನು ಸೋರಿಕೆ ಮಾಡಿ ಅವರಿಂದ ಹಣ ವಸೂಲಿ ಮಾಡುವುದು ಇವರ ದೈನಂದಿನ ಕರ್ತವ್ಯವಾಗಿದೆ. ಇವರನ್ನು ಈ ಸ್ಥಳದಲ್ಲಿ ಮುಂದುವರೆಸಿದರೆ ಇನ್ನಷ್ಟು ಹಾಳಾಗುವ ಸಂಭವವಿದ್ದು ಹಾಗಾರಿ ಇಂತಹ ಭ್ರಷ್ಟಚಾರ ನೌಕರನಿಂದ ಇಲಾಖೆ ದಾರಿ ತಪ್ಪುತ್ತದೆ. ಕೂಡಲೇ ಅವರನ್ನು ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸೈಯದ್ ಸಾದಿಕ್ ತಾತ, ನರಸಿಂಹಲು ಕಮಲಾಪೂರ ಸೇರಿದಂತೆ ಉಪಸ್ಥಿತರಿದ್ದರು.