ದ್ವಿತೀಯ ಡೋಸ್ ಪಡೆದ ಪತ್ರಕರ್ತರು

ಬೀದರ:ಮೇ.28: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿಗಳು ಹಾಗೂ ಸಂಜೆವಾಣಿ ಪತ್ರಿಕೆಯ ಜಿಲ್ಲಾ ಹಿರಿಯ ವರದಿಗಾರ ಶಿವಕುಮಾರ ಸ್ವಾಮಿ ಅವರು ಇಂದು ನಗರದ ನೌಬಾದ್‍ನಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವ್ಯಾಕ್ಷಿನ್ ಎರಡನೇ ಡೋಸ್ ಪಡೆದುಕೊಂಡರು.

ಪತ್ರಿಕಾ ಛಾಯಾಗ್ರಾಹಕರು ಹಾಗೂ ಕೆ.ಪಿ.ಎನ್ ಫೋಟೊ ಪ್ರತಿನಿಧಿ ಗೋಪಿಚಂದ್ ತಾಂದಳೆ ಸಹ ತನ್ನ ಪಾಲನೆ ಎರಡನೇ ಕೋವ್ಯಾಕ್ಷಿನ್ ಲಸಿಕೆ ಪಡೆದರು.

ಜಿಲ್ಲೆಯಲ್ಲಿ ಯಾರೋಬ್ಬ ಪತ್ರಕರ್ತರು ಲಸಿಕೆಯಿಂದ ವಂಚಿತರಾಗಬಾರದೆಂದು ಸಂಕಲ್ಪ ತೊಟ್ಟು ಇತ್ತಿಚೀಗೆ ಪತ್ರಿಕಾ ವಿತರಕರಿಗೂ ಲಸಿಕೆ ನೀಡಿರುವುದು ಗಮನಾರ್ಹ ಬೆಳವಣಿಗೆ. ಮೇ.11ರಂದು ಬ್ರೀಮ್ಸ್‍ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರ ಉಪಸ್ಥಿತಿಯಲ್ಲಿ ಪತ್ರಕರ್ತರಿಗೆ ಕೋವಿಡ್ ಲಸಿಕೆ ಆರಂಭಿಸಿದರು. ಆದರೆ ಶಿವಕುಮಾರ ಸ್ವಾಮಿ ಹಾಗೂ ಗೋಪಿಚಂದ್ ತಾಂದಳೆ ಜಿಲ್ಲಾಡಳಿತದ ನಿರ್ಧಾರಕ್ಕೂ ಮುನ್ನವೇ ಅಂದರೆ ಏಪ್ರಿಲ್ 22ರಂದು ತಮ್ಮ ಮೊದಲ ಕೋವ್ಯಾಕ್ಷಿನ್ ಡೋಸ್ ಪಡೆದಿದ್ದರು.