ದ್ವಿಚ್ರಕ್ರ ವಾಹನ ಡಿಕ್ಕಿ: ಪಾದಚಾರಿ ಮೃತ್ಯು

ಮಣಿಪಾಲ, ಎ.೩- ದ್ವಿಚಕ್ರ ವಾಹನವೊಂದು ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತಿದ್ದ ಪಾದಚಾರಿಯೊಬ್ಬರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಪರ್ಕಳದಲ್ಲಿ ಸಂಜೆ ನಡೆದಿದೆ.

ಮೃತರನ್ನು ಸಿದ್ಧಾಪುರದ ಚಂದ್ರಶೇಖರ ಶಾಸ್ತ್ರಿ (71) ಎಂದು ಗುರುತಿಸಲಾಗಿದೆ. ಇವರು ಅರತಕ್ಷತೆ ಸಮಾರಂಭಕ್ಕೆಂದು ಪರ್ಕಳಕ್ಕೆ ಬಂದಿದ್ದು ಸಂಜೆ 6:30ರ ಸುಮಾರಿಗೆ ಪರ್ಕಳದ ರಾಷ್ಟ್ರೀಯ ಹೆದ್ದಾರಿ 169(ಎ) ಬದಿಯಲ್ಲಿ ನಡೆದುಕೊಂಡು ಹೋಗುತಿದ್ದಾಗ ಪರ್ಕಳದಿಂದ ಮಣಿಪಾಲದತ್ತ ಹೋಗುತಿದ್ದ ದ್ವಿಚಕ್ರ ವಾಹನವೊಂದು ವೇಗವಾಗಿ ಬಂದು ಹಿಂದಿನಿಂದ ಢಿಕ್ಕಿ ಹೊಡೆದಿತ್ತು. ಇದರಿಂದ ಚಂದ್ರಶೇಖರ ಶಾಸ್ತ್ರಿಗಳ ತಲೆ ಹಾಗೂ ಕೈಗೆ ಗಾಯವಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಬೆಳಗ್ಗೆ 9ಗಂಟೆ ಸುಮಾರಿಗೆ ಅವರು ಮೃತಪಟ್ಟರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.