ದ್ವಿಚಕ್ರ ವಾಹನ-ರಿಕ್ಷಾ ಡಿಕ್ಕಿ

ಬಂಟ್ವಾಳ, ಜೂ.೬- ದ್ವಿಚಕ್ರವಾಹನವೊಂದಕ್ಕೆ ರಿಕ್ಷಾ ಡಿಕ್ಕಿಯಾಗಿ ಅದೃಷ್ಟವಶಾತ್ ದ್ವಿಚಕ್ರ ವಾಹನ ಯಾವುದೇ ಅಪಾಯವಿಲ್ಲದೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಮಾಣಿಯಲ್ಲಿ ನಡೆದಿದೆ.

ಪುತ್ತೂರು ಕಡೆಗೆ ಅತಿ ವೇಗವಾಗಿ ಚಲಾಯಿಸುತ್ತಿದ್ದ ರಿಕ್ಷಾ ಬಿಸಿರೋಡು ಕಡೆಗೆ ಬರುತ್ತಿದ್ದ ಸ್ಕೂಟರ್ ಸವಾರಿನಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದ ರಭಸಕ್ಕೆ ರಿಕ್ಷಾ ಅಲ್ಲೇ ಹತ್ತಿರದ ಹೂ ಮಾರಾಟದ ಅಂಗಡಿ ಬಳಿ ಬಂದು ನಿಯಂತ್ರಣ ಕಳೆದು ಬದಿಗೆ ವಾಲಿ ನಿಂತಿದೆ.

ಸ್ಕೂಟರ್ ಮಾತ್ರ ರಸ್ತೆ ಮಧ್ಯೆ ಮಗುಚಿ ಬಿದ್ದಿದೆ.  ಘಟನೆಯಲ್ಲಿ ಸ್ಕೂಟರ್ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ. ಅತೀ ಅಪಾಯಕಾರಿ ಜಂಕ್ಷನ್ ಮಾಣಿಯಲ್ಲಿ ಪುತ್ತೂರು ಮತ್ತು ಉಪ್ಪಿನಂಗಡಿ ಕಡೆಯಿಂದ ಬರುವ ವಾಹನಗಳು ಬಿಸಿರೋಡು ಕಡೆಗೆ ಹೋಗಲು ಸಂಗಮದ  ಸ್ಥಳವಾಗಿದ್ದರಿಂದ ಇಲ್ಲಿ ಅಪಾಯ ಹೆಚ್ಚು. ಈ ಹಿನ್ನೆಲೆಯಲ್ಲಿ ವಿಟ್ಲ ಎಸ್ಮೈ.ಇತ್ತೀಚೆಗೆ ಪೋಲೀಸ್ ಇಲಾಖೆಯಿಂದ ಕೊಡಮಾಡಿದ ಅತೀ ಸುಂದರವಾದ ಪ್ಲಾಸ್ಟಿಕ್ ನಿರ್ಮಿತ ಬ್ಯಾರಿಕೇಡ್ ಗಳನ್ನು ಹಾಕಿದ್ದರು.ಆದರೆ ಲಾಕ್ ಡೌನ್ ಅವಧಿಯಲ್ಲಿ ರಾತ್ರಿ ವೇಳೆ ಘನಗಾತ್ರ ದ ವಾಹನಗಳು ಇದರ ಮೇಲೆಯೇ ವಾಹನ ಹರಿಸಿ ಬ್ಯಾರಿಕೇಡ್ ಗಳು ಪುಡಿಪುಡಿಯಾಗಿವೆ.

ಅಪಘಾತ ಸ್ಫಾಟ್ ಮಾಣಿ ಜಂಕ್ಷನ್* ಬಿಸಿರೋಡು ಕಡೆಯಿಂದ ಪುತ್ತೂರು ಮತ್ತು ಉಪ್ಪಿನಂಗಡಿ ಸಂಪರ್ಕ ದ ಕೊಂಡಿಯಾಗಿರುವ ಮಾಣಿ ಜಂಕ್ಷನ್ ಅತೀ ಅಪಾಯಕಾರಿ ಸ್ಥಳವಾಗಿದೆ.

ಅತೀ ವೇಗವಾಗಿ ಬಂದು ಯಾವ ಕಡೆ ತಿರುಗಿ ದರೂ ಅಪಾಯ ಕಟ್ಟಿಟ್ಟ ಬುತ್ತಿ… ಹಾಗಾಗಿ ಈ ಜಂಕ್ಷನ್ ನಲ್ಲಿ ಅತೀಜಾಗರೂಕತೆಯಿಂದ ನಿಧಾನವಾಗಿ ಚಾಲನೆ ಮಾಡುವುದೇ ಸದ್ಯದ ಮಟ್ಟಿಗೆ ಇರುವ ಪರಿಹಾರ. ಈ ಜಂಕ್ಷನ್ ನಲ್ಲಿ ಹಿಂದೆ ಅನೇಕ ಅಪಘಾತಗಳು ನಡೆದು ಪ್ರಾಣಿ ಹಾನಿ ಹಾಗೂ ದೈಹಿಕ ಆಘಾತ ಗಳು ನಡೆದ ಉದಾಹರಣೆಗಳಿವೆ.