ದ್ವಿಚಕ್ರ ವಾಹನ-ಬೈಕ್ ನಡುವೆ ಅಪಘಾತ: ಓರ್ವ ಮೃತ್ಯು


ಉಡುಪಿ, ಜ.೧೪- ಗಂಗೊಳ್ಳಿ ಬಳಿಯ ಗುಜ್ಜಾಡಿಯಲ್ಲಿ ಬೈಕ್‌ಗೆ ಮತ್ತೊಂದು ದ್ವಿಚಕ್ರವಾಹನ ಡಿಕ್ಕಿ ಹೊಡೆದ ಪರಿಣಾಮ ೭೫ ವರ್ಷದ ಪತ್ರಿಕೆ ವಿತರಕ ಅಶೋಕ್ ಕೊಡಂಚ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಜನವರಿ ೧೩ ರ ಬುಧವಾರ ಈ ಘಟನೆ ನಡೆದಿದ್ದು, ಬೈಕ್‌ನಲ್ಲಿದ್ದ ವ್ಯಕ್ತಿ ಸಾಹಿಲ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಗಂಗೊಳ್ಳಿಯ ಇಬ್ರಾಹಿಂ ಅಬ್ರಾರ್ ಸೂಫಿ ಎಂಬವರು ಘಟನಾ ಸ್ಥಳಕ್ಕೆ ಧಾವಿಸಿ ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ರವಾನಿಸಿದ್ದಾರೆ.
ಇನ್ನು ಅಶೋಕ್ ಕೊಡಂಚ ಅವರು ಕಳೆದ ೧೦ ವರ್ಷಗಳಿಂದ ಪತ್ರಿಕೆ ವಿತರಕರಾಗಿ ಕೆಲಸ ಮಾಡುತ್ತಿದ್ದರು. ಅಲ್ಲದೆ, ಗುಜ್ಜಾಡಿಯ ಕಲ್ಪತರು ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾಗಿದ್ದರು.