ದ್ವಿಚಕ್ರ ವಾಹನಗಳ ಮೂಲಕ ಸತತವಾಗಿ 13 ನೇ ವರ್ಷ ಶ್ರೀಶೈಲ ಕ್ಕೆ ದರುಶನ

ಗುರುಮಠಕಲ್:ಮಾ.19: ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೆಮಸ್ಸಳ್ಳಿ ಗ್ರಾಮ ದ ಹದಿನಾಲ್ಕು ಜನ ಭಕ್ತರು ಗುರುಮಠಕಲ್ ಪಟ್ಟಣದ ಹೆದ್ದಾರಿಯ ಮುಖಾಂತರ ದ್ವಿ ಚಕ್ರ ವಾಹನಗಳ(ಬೈಕ್) ಮೂಲಕ ಹದಿನಾಲ್ಕು ಜನ ಭಕ್ತರು ಶ್ರೀ ಶೈಲ ಮಲ್ಲಿಕಾರ್ಜುನನ ದರ್ಶನಕ್ಕೆ ಹೊದರು. ಪ್ರತಿ ವರ್ಷವು ಇದೆ ತಿಂಗಳ ನಾವೆಲ್ಲರೂ ಸೇರಿ ಕೊಂಡು ಭಗವಂತನ ಸನ್ನಿಧಿಗೆ ಹೋಗುವುದರಿಂದ ನಮಗೆ ಸುಖ ಶಾಂತಿ ಮನಸಿಗೆ ನೆಮ್ಮದಿ ಇಟ್ಟಿರುವದರಿಂದ ನಂಬಿಕೆಯಿಂದ ಆತನ ದರುಶನ ಪಡೆದುಕೊಳ್ಳಲು ಹೋಗುತ್ತೇವೆ ಎಂದು ಹೇಳಿದರು.ಹಣ್ಮಂತರಾಯ ಸಣಕಿ. ಕಲ್ಲನಗೌಡ ಬಿರಾದಾರ. ರಮೇಶ ಕಿರಕನಹಳ್ಳಿ. ಚಂದು ಭಾವಿಕಟ್ಟಿ. ರಮೇಶ ಭಾವಿಕಟ್ಟಿ. ಬಸವರಾಜ ಶಿವಣಗಿ. ಶ್ರೀ ಶೈಲ ಮೇತ್ರಿ. ಕುಲಪ್ಪ ಶಿವಣಗಿ. ಕಾಂತು ಹತ್ತರಿಕಿ. ಸೈಪನ್ ಸಾಬ್ ಚಠರಕಿ. ಶ್ರೀ ಚಿಚ್ಚಲಪ್ಪ ಮೇತ್ರಿ. ಸುರೇಶ್ ಮೇತ್ರಿ. ಇತರರು ಇದ್ದರು