ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ: ಓರ್ವ ಸ್ಥಳದಲ್ಲೇ ಸಾವು

ಕಲಬುರಗಿ,ಆ.23-ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು, ಇಬ್ಬರಿಗೆ ಗಂಭೀರ ಗಾಯಗಳಾದ ಘಟನೆ ಆಳಂದ ತಾಲ್ಲೂಕಿನ ಭೂಸನೂರ ಹತ್ತಿರದ ಗುಡ್ಡದಮ್ಮನ ಗುಡಿ ಹತ್ತಿರ ಮಂಗಳವಾರ ನಡೆದಿದೆ.
ಮೃತನನ್ನು ಆಳಂದ ಪಟ್ಟಣದ ನೌಕಡ್ ಗಲ್ಲಿಯ ನಿವಾಸಿ ಹಸನ್ ಅಲಿ ಅಹ್ಮದ್ ಅಲಿ ಖಂಡೋವಾಲೆ (38) ಎಂದು ಗುರುತಿಸಲಾಗಿದೆ.
ಆಳಂದಿಂದ ಜವಳಿ (ಡಿ) ಗ್ರಾಮಕ್ಕೆ ಹೋಗುತ್ತಿದ್ದ ಹಸನ್ ಅಲಿ ಬೈಕ್ ಮತ್ತು ಭೂಸನೂರದಿಂದ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆ ಕಡೆಗೆ ಬರುತ್ತಿದ್ದ ಬುಲೆಟ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಹಸನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬುಲೇಟ್ ಮೇಲಿದ್ದ ಕಿರಣಕುಮಾರ್ ಸೂರ್ಯಕಾಂತ ಹತಗುಂದಿ, ಸಿದ್ರಾಮ ಸೋಮಣ್ಣ ಪೂಜಾರಿ ಎಂಬುವವರ ಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೋರ್ವನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಪಿಎಸ್‍ಐ ವಾತ್ಸಲ್ಯ ಬಿರಾದಾರ, ಅಪರಾಧ ವಿಭಾಗದ ಪಿಎಸ್‍ಐ ಬಸವರಾಜ ಸಣಮನಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.