
ಬೀದರ, ಮೇ 6: ಹುಮನಾಬಾದ ಪೊಲೀಸ್ ಠಾಣೆಯ ಪಿಎಸ್‍ಐ ನರ್ಮದಾ ಮತ್ತು ಸಿಬ್ಬಂದಿಯವರೊಂದಿಗೆ ಮೇ 4 ರಂದು ಬೆಳಿಗ್ಗೆ 9.45 ಗಂಟೆ ಸುಮಾರಿಗೆ ಹುಮನಾಬಾದ ಪಟ್ಟಣದ ಕಲ್ಲೂರ ಓವರ್ ಬ್ರಿಡ್ಜ್ ಹತ್ತಿರ ಹನುಮಾನ ಮಂದಿರ ಮುಂದುಗಡೆ ರೋಡಿನ ಮೇಲೆ ವಾಹನಗಳನ್ನು ಚೆಕ್ ಮಾಡಿ ದಾಖಲೆಗಲು ಪರಿಶೀಲನೆ ಮಾಡುತ್ತಿರುವಾಗ ವಾಂಜರಿ ಕಡೆಯಿಂದ ಒಂದು ದ್ವಿಚಕ್ರ ವಾಹನ ಮೇಲೆ ಇಬ್ಬರು ವ್ಯಕ್ತಿಗಳು ಕೂಡಿಕೊಂಡು ಅನುಮಾನಾಸ್ಪದ ರೀತಿಯಲ್ಲಿ ಚಲಾಯಿಸಿಕೊಂಡು ಬರುತ್ತಿರುವಾಗ ಅವರ ದ್ವಿಚಕ್ರ ವಾಹನವನ್ನು ತಡೆದು ನಿಲ್ಲಿಸಿ ಚಾಲ ಕನ ಮತ್ತು ಆತನ ಹಿಂದುಗಡೆ ಕೂಳಿತವನ ಹೆಸರು ಮತ್ತು ವಿಳಾಸ ವಿಚಾರಿಸಿದಾಗ ಸಮಂಜಸವಾದ ಉತ್ತರ ನೀಡಿರುವುದಿಲ್ಲ ಮತ್ತು ವಾಹನಕ್ಕೆ ಸಂಬಂಧಿಸಿದ ದಾಖಲೆಗಳು ಹಾಜರು ಪಡಿಸಿರುವುದಿಲ್ಲ.
ಈ ಪ್ರಯುಕ್ತ ಇವರನ್ನು ಠಾಣೆಗೆ ಬಂದು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿತರನ್ನು ಕೂಲಂಕುಷವಾಗಿ ವಿಚಾರಣೆ ಮಾಡಿದಾಗ ಇಬ್ಬರು ಆರೋಪಿತರು ಸೇರಿ ಕಲಬುರಗಿ, ಚಿಟಗುಪ್ಪ, ಹುಮನಾಬಾದ ಪಟ್ಟಣದಲ್ಲಿ ಒಂದು ಪಲ್ಸರ-150, ಒಂದು ಪಲ್ಸರ-220, ಒಂದು ಸಿಟಿ-100, ಒಂದು ಯಮಹಾ ಒಂದು ಹೊಂಡಾ ಕಂಪನಿಯ ಮೋಟರ ಸೈಕಲ್ ಹೀಗೆ ಒಟ್ಟು 05 ಮೋಟರ್ ಸೈಕಲಗಳು ಕಳ್ಳತನ ಮಾಡಿದ್ದು ಒಪ್ಪಿಕೊಂಡಿರುತ್ತಾರೆ. ಆರೋಪಿತರಿಂದ 5 ಮೋಟಾರ್ ಸೈಕಲ್‍ಗಳನ್ನು ಜಪ್ತಿ ಮಾಡಿಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ. ಪೊಲೀಸ್ ಅಧೀಕ್ಷಕರು ಈ ತಂಡದ ಕೆಲಸವನ್ನು ಪ್ರಶಂಶಿಸಿ ಬಹುಮಾನ ವಿತರಣೆ ಮಾಡಲಾಗಿದೆ ಎಂದು ಬೀದರ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.