ದ್ವಿಚಕ್ರ ವಾಹನಗಳನ್ನು ಫಲಾನುಭವಿಗಳು ಸದುಪಯೋಗ ಪಡೆದು ಕೊಳ್ಳಬೇಕು 

 ಸಂಜೆವಾಣಿ ವಾರ್ತೆ

ಜಗಳೂರು.ಅ.೨೪ :- ಸರಕಾರದ ಸೌಲಭ್ಯಗಳು ಅರ್ಹ ರಿಗೆ ತಲುಪಬೇಕು ಎಂದು ಶಾಸಕ‌ ಬಿ.ದೇವೇಂದ್ರಪ್ಪ ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ಜನಸಂಪರ್ಕ ಕೇಂದ್ರ‌ಮುಂಬಾಗ ವಾಲ್ಮೀಕಿ ಅಭಿವೃದ್ದಿ ನಿಗಮದಿಂದ 24‌ ಫಲಾನುಭವಿಗಳಿಗೆ ದ್ವಿಚಕ್ರ ವಾಹನ ವಿತರಿಸಿ ನಂತರ  ಮಾತನಾಡಿದರು.ವಾಲ್ಮೀಕಿ ಅಭಿವೃದ್ದಿ ನಿಗಮದಿಂದ ವಿತರಿಸುವ ದ್ವಿಚಕ್ರವಾಹನ ಗಳನ್ನುಸದುಪಯೋಗಪಡೆದುಕೊಳ್ಳಬೇಕು.ಲೈಸೆನ್ಸ್ ಇಲ್ಲದೆ ವಾಹ ನ‌ಚಾಲನೆ ಮಾಡಬೇಡಿ ಅಪ್ರಾಪ್ತರ ಕೈಯಲ್ಲಿ ಚಲಿಸಲು ಕೊಡಬೇಡಿ ಎಂದರು.ಮುಂಗಾರು ಮಳೆ ಕೊರತೆಯಿಂದ ಹಿಂಗಾರು ಕೈಕೊಟ್ಟಿದೆ ತಾಲೂಕಿ ನಲ್ಲಿ ಬರ ತಾಂಡವಾಡುತ್ತಿದೆ ಸರಳ ಜೀವನಸಾಗಿಸೋಣ ಸರಕಾರ ದ ಯೋಜನೆಗಳು ಕುಟುಂಬ ನಿರ್ವಹಣೆಗೆ ಪೂರಕವಾಗಲಿವೆ. ಅಧಿಕಾರಿಗಳು ಮಾಡುವ ಕೆಲಸ ವಿಳಂಬವಾದರೆ ಅದು ಒಂದು ಭ್ರಷ್ಟಾಚಾರದ ಇನ್ನೊಂದು ಮುಖ ಕರ್ತವ್ಯ ಪಾಲಿಸಬೇಕು.ಕೆಲವರು ವಿನಾಕಾರಣ ಸುಳ್ಳು ಸೃಷ್ಠಿಸಿ ಅಪಪ್ರಚಾರ ಮಾಡುವ ವರಿ ದ್ದಾರೆ.ನಾನು ಸೌಮ್ಯ ಸ್ವಭಾವದವನು ಅಧಿಕಾರಿಗಳಿಗೆ ನಾನು ಮನುಷ್ಯ,ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡುವ ಅಭಿವ್ಯಕ್ತಿ ಸ್ವಾತಂತ್ರ್ಯ ನನಗೂ ಇದೆ.ನನ್ನ ಬಗ್ಗೆ ಅಪ ಪ್ರಚಾರ ಮಾಡ ಬೇಡಿ ನಮಗೆ ಸಲಹೆ ಸೂಚನೆ ನೀಡಬೇಕು ಎಂದರು.ತಹಶೀಲ್ದಾರ್ ಸಯ್ಯದ್ ಕಲೀಮ್ ಉಲ್ಲಾಮಾತನಾಡಿ,ಶಾಸಕರ ನಿರ್ದೇಶ ನದಂತೆ ಸರಕಾರದ ಆದೇಶಗಳನ್ನು ಅಧಿಕಾರಿಗಳು ಪಾಲಿ ಸಬೇಕು. ನಿಗದಿತ ಅವಧಿಯಲ್ಲಿ ಸೌಲಭ್ಯ ಗಳನ್ನು ಸಮರ್ಪಕವಾಗಿ ಒದಗಿಸ ಲು ಮುಂದಾಗಬೇಕು ಎಂದರು.ವಾಲ್ಮೀಕಿ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ಮಹಾವೀರ ಸಜ್ಜನ್ ಮಾತನಾಡಿ,ನಿಗಮದಿಂದ ಮಹಿಳಾ‌ಉದ್ಯಮಶೀಲಾ ₹2ಲಕ್ಷ ಸಾಲ ಸೌಲಭ್ಯ,ಸಾರಥಿ ಯೋಜನೆ,ಎಂಸಿಎಫ್ ₹ 2.5ಲಕ್ಷ ಗಂಗಾಕಲ್ಯಾಣ ಯೋಜನೆಯಡಿ ₹.3.5 ಲಕ್ಷ ವೆಚ್ಚಭರಿಸಲಿದೆ.ಭೂ ಒಡೆತನ‌ ಯೋಜ ನೆಯಡಿ 20ಲಕ್ಷ ವೆಚ್ಚದಲ್ಲಿ 1ಎಕರೆ 10 ಲಕ್ಷ ಸಬ್ಸಿಡಿ ಇದೆ ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಸಮಾಜ ಕಲ್ಯಾಣ ಇಲಾಖೆ‌ ನಿವೃತ್ತ ಸಹಾಯಕ‌ ನಿರ್ದೇಶಕ ಬಿ. ಮಹೇಶ್ವರ ಪ್ಪ ,ಪಿ.ಎಸ್ಐ. ಸಾಗರ್,ಅಹ್ಮದ್ ಅಲಿ,ಟಿಡಿಓ ನಾಗೇಂದ್ರಪ್ಪ, ಕಣ್ಣು ಕುಪ್ಪೆ ಸಿದ್ದಣ್ಣ ಸೇರಿದಂತೆ ಫಲಾನುಭವಿಗಳು ಇದ್ದರು