ದ್ವಿಚಕ್ರವಾಹನ ಯಾಂತ್ರಿಕರಿಗೆ ಅಹಾರ ಧಾನ್ಯಗಳ ಕಿಟ್

ಚಿಕ್ಕಮಗಳೂರು.ಜೂ.೨;  ಕೊರೊನಾ ಎರಡನೆ ಅಲೆ  ನಿಯಂತ್ರಿಸಲು ಜಿಲ್ಲಾಧಿಕಾರಿಗಳು ಕೆಲವು ಕಟ್ಟುನಿಟ್ಟಿನ ಆದೇಶಗಳನ್ನು ಪಾಲಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದರು . ಜಿಲ್ಲಾಡಳಿತದೊಂದಿಗೆ ಸಾರ್ವಜನಿಕರು ಉತ್ತಮ ಸಹಕಾರ ನೀಡಿದರು ಇದರ ಪ್ರತಿಫಲ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ ಆದರೆ ಕೆಲವು ಕೂಲಿ ಕಾರ್ಮಿಕರಿಗೆ   ಆಟೋ ಚಾಲಕರು ಅತಿಥಿ ಉಪನ್ಯಾಸಕರು ಸೇರಿದಂತೆ ವಾಹನ ಯಾಂತ್ರಿಕರಿಗೂ ಇದುವರೆಗೂ ಯಾವುದೇ ಪರಿಹಾರ ಸಿಗಲಿಲ್ಲ  ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದ್ದು ಯಾಂತ್ರಿಕ ರೊಬ್ಬರು ಸಿ ಎನ್ ಅಕ್ಮಲ್ ರವರಿಗೆ  ತಮ್ಮ ಕಷ್ಟದ ಬಗ್ಗೆ ಮಾಹಿತಿ ನೀಡಿದರು ಮಾಹಿತಿ ಆಧರಿಸಿ  ಮಲ್ಲಂದೂರು ರಸ್ತೆಯಲ್ಲಿರುವ ಯಾತ್ರಿಕರ ಸಂಘದ ಕಚೇರಿಗೆ ಇಂದು ಸಿ ಎನ್ ಅಕ್ಮಲ್ ರವರು ಭೇಟಿ ನೀಡಿ ಸುಮಾರು ನೂರ ಎಂಬತ್ತುಕ್ಕೂ ಹೆಚ್ಚು ಆಹಾರ ಧಾನ್ಯ ಕಿಟ್ಟನ್ನು ಯಾತ್ರಿಕರಿಗೆ ಮತ್ತು ವಾಹನ ಕಾರ್ಮಿಕರಿಗೆ  ವಿತರಿಸಲಾಯಿತು .ನಂತರ ಮಾತನಾಡಿ ರಾಜ್ಯ ಸರ್ಕಾರ  ಬಡವರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ ದುಡಿಮೆ ಇಲ್ಲದ ದಿನಗಳಲ್ಲಿ ಕುಟುಂಬ ನಿರ್ವಹಣೆ ಮಾಡುವುದು ಎಷ್ಟು ಕಷ್ಟ ಇದೆ  ಎಂಬುದು ಜನಪ್ರತಿನಿಧಿಗಳು ತಿಳಿಯಬೇಕು  ಕೇವಲ ಮತ ಪಡೆಯಲು ಬೀದಿ ಬೀದಿಗಳು ಅಲೆಯುತ್ತಾರೆ ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು  ಮತದಾರರಲ್ಲಿ  ಇಲ್ಲಸಲ್ಲದ ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದು ಮತದಾರರನ್ನು ಮರೆಯುತ್ತಾರೆ ಅಂತಹ ಜನನಾಯಕರು ಇಂತಹ ಕಷ್ಟದ ಸಂದರ್ಭದಲ್ಲಿ ಮತದಾರರ ಕೈ ಹಿಡಿಯಬೇಕು.ಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ನೆರವಾಗಬೇಕು ನಮ್ಮ ತಂಡ ಹಲವು ಬಡಾವಣೆಗಳಲ್ಲಿ ಇದುವರೆಗೂ ಆಹಾರಧಾನ್ಯ ಕಿಟ್ಟನ್ನು ವಿತರಿಸಿದ್ದಾರೆ ಸಂಪೂರ್ಣ ಲಾಕ್ ಡೌನ್  ಮುಗಿಯುವವರೆಗೂ ನಾವು ಆಹಾರ ಧಾನ್ಯ ಕಿಟ್ಟನ್ನು ವಿತರಿಸುತ್ತೇವೆ ಅವಕಾಶವಿದ್ದರೆ ನನ್ನ ಕೆಲವು ಕಟ್ಟಡಗಳನ್ನು ಕೋವಿಡ್  ಕೇರ್ ಸೆಂಟರಿಗೆ   ಪ್ರಾರಂಭಿಸಲು  ನಾನು ತಯಾರಿದ್ದೇನೆ ಅದಕ್ಕೆ ಬೇಕಾದಂತಹ ಹಣದ ವ್ಯವಸ್ಥೆ ಕೂಡ ನಾನೇ   ನಿರ್ವಹಿಸಲಿದ್ದೇನೆ ಇಂತಹ ಕಷ್ಟದ ಸಂದರ್ಭದಲ್ಲಿ ನಾವುಗಳು ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಲು ನಮ್ಮ ತಂಡ  ಸಂಪೂರ್ಣವಾಗಿ ತಯಾರಿದೆ ನಮಗೆ ಮಾಹಿತಿ ನೀಡಿದರೆ ಎಲ್ಲಾ ಗ್ರಾಮ ಎಲ್ಲ ಬಡಾವಣೆಗಳಲ್ಲೂ ಆಹಾರಧಾನ್ಯ ಕಿಟ್ಟನ್ನು ವಿತರಿಸಲು ನಾವು ಸಜ್ಜಾಗಿದ್ದೇವೆ  ಎಂದು ಜಿಲ್ಲಾ ಕಾಂಗ್ರೆಸ್ ಕಿಸಾನ್ ವಿಭಾಗದ ರಾಜ್ಯ ಸಂಚಾಲಕ ಸಿ ಎನ್ ಅಕ್ಮಲ್ ಅವರು ತಿಳಿಸಿದರು      ಎಐಸಿಸಿ ರಾಜ್ಯ ಕಾರ್ಯದರ್ಶಿ ಬಿ ಎಂ ಸಂದೀಪ್ ಮಾತನಾಡಿ ಕೊರೊನಾ  ಕಾಯಿಲೆ ನಿಯಂತ್ರಿಸಲು ಹದಿನೆಂಟು ವರ್ಷದ  ಮೇಲ್ಪಟ್ಟವರಿಗೆ ಲಸಿಕೆಯ ಕೊರತೆಯಿದ್ದು ಜಿಲ್ಲೆಯ ಜನಪ್ರತಿನಿಧಿಯಾಗಿ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಸರ್ಕಾರದ ಗಮನಕ್ಕೆ ತರದೆ ಕೇವಲ ಮಾಸ್ಕ್ ವಿತರಣೆ ಮಾಡಿ ಜಿಲ್ಲೆಯಿಂದ ನಿರ್ಗಮಿಸಿದ್ದಾರೆ ಇಂತಹ ಸಂಸದರು ಬರೀ  ಜಾತಿ ವಿಚಾರ ಮಾತನಾಡಿ ವಿಷಬೀಜ ಬಿತ್ತುವುದನ್ನು ಬಿಟ್ಟು ಇಂತಹ ಸಂದರ್ಭದಲ್ಲಿ  ಪ್ರಾಮಾಣಿಕ ಜನ ನಾಯಕರಾಗಿ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು .ಈ ಸಂದರ್ಭದಲ್ಲಿ  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ.ದ್ವಿಚಕ್ರ ವಾಹನ ಯಾತ್ರಿಕರ ಸಂಘದ ಜಿಲ್ಲಾಧ್ಯಕ್ಷ ಬಾಬು ಅಸ್ಲಂ. ಜೈರಾಂ .ರಮೇಶ್ ಉಪಸ್ಥಿತರಿದ್ದರು