ದ್ವಾರಕೀಶ್ ಪುತ್ರರಿಂದ ಅಸ್ಥಿ ವಿಸರ್ಜನೆ

ಬೆಂಗಳೂರು.ಏ.೧೮- ಕರುನಾಡ ಕುಳ್ಳ ಎಂದೇ ಖ್ಯಾತರಾಗಿದ್ದ ನಟ ದ್ವಾರಕೀಶ್ ಅವರ ಅಸ್ಥಿ ವಿಸರ್ಜನೆಯನ್ನು ನಡೆಸಲಾಯಿತೆಂದು
ಅವರ ಕುಟುಂಬಸ್ಥರು ತಿಳಿಸಿದರು.
ಎರಡು ದಿನಗಳ ಹಿಂದೆಯಷ್ಟೆ ದ್ವಾರಕೀಶ್ ಅಗಲಿದ್ದರು. ಅಸ್ಥಿ ವಿಸರ್ಜನೆಗೂ ಮುನ್ನ ನಗರದ ಟಿ.ಆರ್ ಮಿಲ್ ರುದ್ರ ಭೂಮಿಯಲ್ಲಿ ಪೂಜೆ ಸಲ್ಲಿಸಲಾಗಿತ್ತು.
ಬೆಳಗ್ಗೆ ೯ ಗಂಟೆಗೆ ಶ್ರೀರಂಗಪಟ್ಟಣದಲ್ಲಿ ಅಸ್ಥಿ ವಿಸರ್ಜನೆ ಮಾಡಲಾಯಿತು.ಅಗಲಿದ ನಟನಿಗೆ ಅವರ ಅಭಿಮಾನಿಗಳು ಕಂಬನಿ ಮಿಡಿದಿದ್ದರು.