ದ್ವಾದಶಿ ಅಂಗವಾಗಿ ಶ್ರೀ ನಾರಾಯಣಸ್ವಾಮಿಗೆ ವಿಶೇಷ ಅಲಂಕಾರ

ಚಾಮರಾಜನಗರ, ಡಿ.27- ಪಟ್ಟಣದ ಕೊಳದ ಬೀದಿಯಲ್ಲಿರುವ ಪುರಾತನ ಕಾಲದ ಶ್ರೀದೇವಿ -ಭೂದೇವಿ ಸಮೇತ ಶ್ರೀ ನಾರಾಯಣಸ್ವಾಮಿಗೆ ಧನುರ್ಮಾಸದ ದ್ವಾದಶಿ ಶನಿವಾರದ ಅಂಗವಾಗಿ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು.
ಪ್ರಾತಃಕಾಲ 4 ರ ವೇಳೆಯಲ್ಲಿ ಶ್ರೀ ನಾರಾಯಣಸ್ವಾಮಿಗೆ ತುಪ್ಪ, ಗಂಧ, ಎಳನೀರು ಸೇರಿದಂತೆ ಪಂಚಾಮೃತಾಭಿμÉೀಕವನ್ನು ಮಾಡುವ ಮೂಲಕ ಭಕ್ತರ ಸಮ್ಮುಖದಲ್ಲಿ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು.
ಅನೇಕ ಭಕ್ತಾದಿಗಳು ಇಂದು ಬೆಳಿಗ್ಗೆಯಿಂದಲೇ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು. ಧನುರ್ಮಾಸದ ಅಂಗವಾಗಿ ಜನವರಿ 21 ರವರೆಗೂ ಪ್ರತಿ ನಿತ್ಯ ವಿಶೇಷ ಅಲಂಕಾರದೊಂದಿಗೆ ಪೂಜೆ ನಡೆಸಲಾಗುತ್ತದೆ ಎಂದು ದೇವಸ್ಥಾನದ ಅರ್ಚಕ ರಾಮಚಂದ್ರ ತಿಳಿಸಿದರು.