ದ್ರೌಪದಿ ವಸ್ತ್ರಪಹರಣ ಸಾಂಸ್ಕೃತಿಕ ನಾಟಕ ಪ್ರದರ್ಶನ


ಸಂಜೆವಾಣಿ ವಾರ್ತೆ
ಕುರುಗೋಡು, ಮಾ.10: ಪಟ್ಟಣದ ಶ್ರೀ ದೊಡ್ಡಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ದ್ರೌಪದಿ ವಸ್ತ್ರಪಹರಣ ಎಂಬ ಸಾಂಸ್ಕೃತಿಕ ನಾಟಕ ಪ್ರದರ್ಶನಗೊಂಡಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ದೊಡ್ಡ ಬಸವೇಶ್ವರ ತಾಲೂಕು ಮಟ್ಟದ ನಾಟ್ಯ ಕಲಾಸಂಘ ರಿ ಇವರ ತಂಡದಿಂದ ದ್ರೌಪದಿ ವಸ್ತ್ರಪಹರಣ ಎಂಬ ಸುಂದರ ಸಾಂಸ್ಕೃತಿಕ ನಾಟಕ ಪ್ರದರ್ಶನಗೊಂಡಿತು.
ನಾಟಕ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆಯನ್ನು ಕಪ್ಪಗಲ್ಲಿನ ವೀರೇಶ ಶಾಸ್ತ್ರಿಗಳು ನೆರವೇರಿಸಿದರು. ಕಂಪ್ಲಿ ಕ್ಷೇತ್ರ ಶಾಸಕರಾದ ಜೆ.ಎನ್.ಗಣೇಶ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಶೇಖರ್ ಅವರು ಪ್ರಾಸ್ತವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಹೋರಾಟಗಾರ ಶಿವಶಂಕರ್, ತಾಪಂ ಮಾಜಿ ಉಪಾಧ್ಯಕ್ಷ ಹನುಮಂತಪ್ಪ, ದಲಿತ ಮುಖಂಡ ಯುವರಾಜ, ಸಿದ್ದಮ್ಮನಹಳ್ಳಿ ಸುರೇಶ್, ಕಲಾವಿದ ಹೆಚ್.ಎರ್ರಿಸ್ವಾಮಿ ಸೇರಿದಂತೆ ಇತರರು ಹಾಗೂ ಸಾರ್ವಜನಿಕರು ಇದ್ದರು.