ದ್ರೌಪದಿ ಮುರ್ಮು ಆಯ್ಕೆ
ನಗರದಲ್ಲಿ ಬಿಜೆಪಿ ವಿಜಯೋತ್ಸವ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.22: ದೇಶದ ನೂತನ ರಾಷ್ಟ್ರಪತಿಯಾಗಿ ಎನ್ ಡಿ ಎ ಅಭ್ಯರ್ಥಿ  ದ್ರೌಪದಿ ಮುರ್ಮು ಅವರು ಅತ್ಯಧಿಕ ಮತಗಳ ಅಂತರದಿಂದ ಚುನಾಯಿತರಾಗಿರುವುದಕ್ಕೆ ನಗರದ ಎಸ್ ಪಿ ಸರ್ಕಲ್ ನಲ್ಲಿರುವ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ  ಇಂದು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗೋನಾಳು ಮುರಹರಗೌಡ, ವಿಧಾನ ಪರಿಷತ್ ಸದಸ್ಯ ವೈ. ಎಂ. ಸತಿಶ್, ಬುಡಾ ಅಧ್ಯಕ್ಷ ಪಿ ಪಾಲಣ್ಣ,  ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ  ವೀರಶೇಖರ್ ರೆಡ್ಡಿ ರವರು, ಗಾಳಿ ಶಂಕ್ರಪ್ಪ, ಡಾ ಅರುಣ್ ,  ಮಹಾನಗರ ಪಾಲಿಕೆಯ ಸದಸ್ಯ ಶ್ರೀನಿವಾಸ್ ಮೋತ್ಕರ್ ,  ಈರಮ್ಮ, ಮಾಜಿ ಸದಸ್ಯ ಎಸ್. ಮಲ್ಲನಗೌಡ,  ರೈತ ಮೋರ್ಚಾ ಮಾಜಿ ಅಧ್ಯಕ್ಷ ಐನಾಥ್ ರೆಡ್ಡಿ,ನಗರ ಅಧ್ಯಕ್ಷರಾದ ಕೆ. ಬಿ. ವೆಂಕಟೇಶ, ಬಿಜೆಪಿ ನಗರದ ಪ್ರಧಾನ ಕಾರ್ಯದರ್ಶಿಗಳಾದ ರಾಮಾಂಜಿ, ಸುನಿಲ್ ರೆಡ್ಡಿ,, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಿವೆಕೃಷ್ಣ,ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಜ್ಯೋತಿಪ್ರಕಾಶ್ , ಮಹಿಳಾ ಮೋರ್ಚಾ ಅಧ್ಯಕ್ಷೆ ಸುಗುಣ, ಮಾದ್ಯಮ ವಿಭಾಗದ ಸಹ ಸಂಚಾಲಕರಾಜಿವ್ ತೋಗರಿ, ಸೋಶಿಯಲ್ ಮೀಡಿಯಾ ಸಹ ಸಂಚಾಲಕ ಅಂಜಿ ಕಮ್ಮರಚೇಡು ಮತ್ತು   ಕಾರ್ಯಕರ್ತರು ಪಾಲ್ಗೊಂಡಿದ್ದರು.