ದ್ರಾಕ್ಷಿ ಹಾಗೂ ತೋಟಗಾರಿಕಾ ಬೆಳೆಗಳ ಹಾನಿ ವರದಿಗಾಗಿ ಜಿಲ್ಲೆಗೆ ವಿಜ್ಞಾನಿಗಳ ತಂಡ

ವಿಜಯಪುರ, ನ.26-ಜಿಲ್ಲೆಯಲ್ಲಿ ನವೆಂಬರ್ ಮಾಹೆಯಲ್ಲಿ ತುಂತುರು ಮಳೆ ಹಾಗೂ ಮೋಡ ಕವಿದ ವಾತಾವರಣದಿಂದ ದ್ರಾಕ್ಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಹಾನಿ ಉಂಟಾಗಿರುವ ಕುರಿತು ರೋಗ ಮತ್ತು ಹತೋಟಿ ಕ್ರಮಗಳ ಕುರಿತು ತಾಲೂಕುಗಳಿಗೆ ವಿಜ್ಞಾನಿಗಳ ತಂಡ ಭೇಟಿ ನೀಡಿ, ಪರಿಶೀಲನಾ ವರದಿ ನೀಡಲು ಸಂಶೋಧನಾ ನಿರ್ದೇಶಕರು, ತೋಟಗಾರಿಕೆ ವಿಶ್ವವಿದ್ಯಾಲಯ, ಬಾಗಲಕೋಟ ಅವರು ಜಿಲ್ಲೆಗೆ ಮೂರು ವಿಜ್ಞಾನಿಗಳ ಮತ್ತು ಅಧಿಕಾರಿಗಳನ್ನು ಒಳಗೊಂಡ ತಂಡಗಳನ್ನು ನೇಮಿಸಲಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.
ಅದರಂತೆ ಈ ತಂಡ-1 ರಲ್ಲಿ ಡಾ. ಡಿ.ಎ.ಪಿರಜಾದೆ, ಸಹಪ್ರಾಧ್ಯಾಪಕರು, ತಂಡ -2 ರಲ್ಲಿ ಎಸ್.ಇ ಗೊಳ್ಳಗಿ, ಸಹ ಪ್ರಾಧ್ಯಾಪಕರು ಹಾಗೂ ತಂಡ-3 ರಲ್ಲಿ ಡಾ. ಆರ. ಎಸ್ ಜಾವಡಗಿ, ಪ್ರಾಧ್ಯಾಪಕರ ಅಧ್ಯಕ್ಷತೆಯಲ್ಲಿ ಕ್ಷೇತ್ರ ಪರಿಶೀಲನೆ ನಡೆಯುತ್ತಿದ್ದು, ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.