ದ್ರಾಕ್ಷಿ ಬೆಳೆ ಹಾನಿ ಸರ್ಕಾರ ಹೆಕ್ಟೇರಿಗೆ ಕನಿಷ್ಟ 2 ಲಕ್ಷ ಪರಿಹಾರ ನೀಡಿಲಿ ; ಶಹಜಹಾನ್ ಡೊಂಗರಗಾಂವ

ಅಥಣಿ;ಸೆ.18:ಸತತ ಮತ್ತು ಹೆಚ್ಚೂವರಿ ಮಳೆಯಿಂದ ದ್ರಾಕ್ಷಿ ಬೆಳೆ ಹಾನಿಯಾಗಿದ್ದು, ಒಂದು ಹೆಕ್ಟೇರಗೆ ಕನಿಷ್ಠ 2 ಲಕ್ಷ ರೂ.ಗಳ ಪರಿಹಾರ ಒದಗಿಸಬೇಕು ಎಂದು ದ್ರಾಕ್ಷಿ ಬೆಳೆಗಾರರ ಪರವಾಗಿ ಅಥಣಿ ರೈಸಿನ್ ಪೆÇ್ರಸೆಸಿಂಗ್ ಕ್ಲಸ್ಟರ್ ನ ಅಧ್ಯಕ್ಷ ಹಾಗೂ ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ಆಗ್ರಹಿಸಿದರು.

ಅವರು ಮಾಜಿ ಡಿಸಿಎಂ ಹಾಗೂ ವಿಧಾನ ಪರಿಷತ ಸದಸ್ಯ ಲಕ್ಷ್ಮಣ ಸವದಿ ಅವರಿಗೆ ಮನವಿ ಸಲ್ಲಿಸಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು , ಮಳೆಯಿಂದ ಹಾನಿಗೊಳಗಾದ ದ್ರಾಕ್ಷಿ ಬೆಳೆಗೆ 2021-22 ನೇ ಸಾಲಿನಲ್ಲಿ ಪ್ರತಿ ಹೆಕ್ಟೇರಗೆ ಬೆಳೆ ವಿಮಾ ಯೋಜನೆಯಡಿ ಕೇವಲ 101440. ರೂಗಳನ್ನು ಬಿಡುಗಡೆ ಮಾಡಲಾಗಿದೆ ಈ ಮೊತ್ತ ಅತ್ಯಂತ ಕಡಿಮೆಯಾಗಿದೆ ಇದರಿಂದ ದ್ರಾಕ್ಷಿ ಬೆಳೆಗಾರರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದರು. ಬೆಳೆ ವಿಮೆಯನ್ನು ಸಮೀಪದ ಮಳೆ ಮಾಪನ ಕೇಂದ್ರದಲ್ಲಿ ದಾಖಲಾದ ಮಳೆಯ ಪ್ರಮಾಣದ ಮೇಲೆ ಆಧರಿಸಿ ವಿಮಾ ಹಣವನ್ನು ಬಿಡುಗಡೆಗೊಳಿಸಲಾಗುತ್ತಿದೆ ಆದರೆ ವಾಸ್ತವಾಗಿ ಮಳೆ ಮಾಪನ ಕೇಂದ್ರಗಳ 1 ಕಿಲೋ ಮೀಟರ್ ವ್ಯಾಪ್ತಿಯ ಸುತ್ತಮುತ್ತ ಬಿದ್ದ ಮಳೆ ಮಾತ್ರ ದಾಖಲಾಗಿರುತ್ತದೆ ಆದರೆ ಮಳೆ ಮಾಪನ ಕೇಂದ್ರದಿಂದ 5 ಅಥವಾ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬಿದ್ದ ಮಳೆ ದಾಖಲಾಗುವುದಿಲ್ಲ ಹೀಗಾಗಿ ಮಳೆ ಮಾಪನ ಕೇಂದ್ರ ಆಧಾರಿತ ವಿಮಾ ಪರಿಹಾರ ಕೊಡುವುದು ಅವೈಜ್ಞಾನಿಕ ಎಂದರು.
ಸತತ ಮಳೆಯಿಂದ ದ್ರಾಕ್ಷಿ ಬೆಳೆಗೆ ಹಾನಿಯಾಗಿದ್ದರಿಂದ ಒಣ ದ್ರಾಕ್ಷಿಯ ಗುಣಮಟ್ಟವೂ ಕೂಡ ಕಡಿಮೆಯಾದ ಪರಿಣಾಮ ಒಣ ದ್ರಾಕ್ಷಿಯ ಮೊತ್ತ 200 ರಿಂದ 220 ರೂ.ಗಳಷ್ಟಿದ್ದದ್ದು ಈಗ 100 ರಿಂದ 120 ರೂ.ಗಳಿಗೆ ಕುಸಿದಿದೆ ಹೀಗಾಗಿ ಐಗಳಿ ಭಾಗದ ದ್ರಾಕ್ಷಿ ಬೆಳೆಗಾರರಿಗೆ ಲಕ್ಷಾಂತರ ರೂ.ಹಾನಿಯಾಗಿದೆ ಎಂದ ಅವರು ತಾಲೂಕಾ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ದ್ರಾಕ್ಷಿ ತೋಟಗಳಿಗೆ ಆಗಮಿಸಿ ಸಮೀಕ್ಷೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಸಲ್ಲಿಸಿದ್ದಾರೆ ಎಂದ ಅವರು ಸರ್ಕಾರ ಬೆಳೆ ವಿಮಾ ಯೋಜನೆಯನ್ನು ವೈಜ್ಞಾನಿಕರಣಗೊಳಿಸಿ ರೈತನಿಗೆ ಅನ್ಯಾಯವಾಗದಂತೆ ಪರಿಹಾರ ನೀಡಬೇಕು ಈ ನಿಟ್ಟಿನಲ್ಲಿ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯುವಂತೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದೇವೆ ಎಂದು ತಿಳಿಸಿದರು.
ಈ ವೇಳೆ ಶಿವಾನಂದ ಸಿಂದೂರ , ಸಿ.ಎಸ್.ನೆಮಗೌಡ ,ಗುರಪ್ಪಾ ಬಿರಾದರ , ಎನ್.ಐ.ಡೊಂಗರಗಾವ, ಬಸವರಾಜ ಬಿರಾದರ, ಅಪ್ಪು ಪಾಟೀಲ ಸೇರಿದಂತೆ ಹಲವರು ಇದ್ದರು .