ದ್ರಾಕ್ಷಿ ಬೆಳೆಗಾರರ ನೆರವಿಗೆ ಆಗ್ರಹ

ವಿಜಯಪುರ, ನ.25-ಮಳೆ ಹಾಗೂ ಹವಾಮಾನದ ಏರಿಳಿತದಿಂದ ತೊಂದರೆ ಅನುಭವಿಸುತ್ತಿರುವ ದ್ರಾಕ್ಷಿ ಬೆಳೆಗಾರರ ನೆರವಿಗೆ ಹಾಗೂ ಮಳೆಯಿಂದ ತೊಂದರೆಯಾದ ರೈತರುಗಳ ನೆರವಿಗೆ ಬರುವಂತೆ ಒತ್ತಾಯಿಸಿ ಅಹಿಮದ ರೈತ ಸಂಘ (ರಿ) ವತಿಯಿಂದ ಮುಖ್ಯ ಮಂತ್ರಿಗಳಿಗೆ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯದಲ್ಲಿ ದ್ರಾಕ್ಷಿಯನ್ನು ಅತೀ ಹೆಚ್ಚಿನ ಪ್ರದೇಶದಲ್ಲಿ ಬೆಳೆಯುತ್ತಿರುವ ಹೆಗ್ಗಳಿಕೆ ಇರುತ್ತದೆ. ಹಲವು ವರ್ಷಗಳಿಂದ ಅತಿವೃಷ್ಟಿ ಅನಾವೃಷ್ಟಿ ಬೆಲೆ ಏರಿಳಿತ ನೀರಿನ ತೊಂದರೆ ಇದ್ದರೂ ದ್ರಾಕ್ಷಿ ಬೆಳೆಯನ್ನು ನಂಬಿ ಬದುಕು ಕಟ್ಟಿಕೊಂಡು ಬದುಕುತ್ತಿರುವ ರೈತರು ಈಗ ಬೀದಿಗೆ ಬಿದ್ದಿರುತ್ತಾರೆ. ಕಳೆದೆರಡು ವರ್ಷದಿಂದ ಕೋವಿಡ್ ಸಂಕಷ್ಟದಲ್ಲಿ ದ್ರಾಕ್ಷಿ ಬೆಳೆಗಾರರಿಗೆ ಮಾರುಕಟ್ಟೆಯ ಬೆಲೆ ತೊಂದರೆಯಾದರೆ ಈಗ ಮಳೆಯಿಂದಾಗಿ ಸಂಪೂರ್ಣ ಬೆಳೆಯು ರೋಗಕ್ಕೆ ತುತ್ತಾಗುವ ಎಲ್ಲ ಲಕ್ಷಣಗಳು ಇವೆ. ದ್ರಾಕ್ಷಿ ಬೆಳೆಯನ್ನು ಬೆಳೆಯಲು ರಾಷ್ಟ್ರೀಕೃತ ಸಹಕಾರಿ ಸಂಘಗಳಲ್ಲಿ ಖಾಸಗಿ ಲೇವಾದೇವಿದಾರರಿಂದ ಸಾಲ ಪಡೆದಿರುವ ರೈತರು ಮರುಪಾವತಿ ಮಾಡಲು ಮೇಲಿನ ಎಲ್ಲವೂ ತೊಂದರೆಯಲ್ಲಿ ದೂಕಿವೆ ಮಾನ್ಯರಾದ ತಾವು ದ್ರಾಕ್ಷಿ ಬೆಳೆಗಾರರ ಹಿತದೃಷ್ಟಿಯಿಂದ ಮೇಲಿನ ಎಲ್ಲ ಸಾಲಗಳನ್ನು ಮನ್ನಾ ಮಾಡಲು ಸರಕಾರದ ಮಟ್ಟದಲ್ಲಿ ತೀರ್ಮಾನ ಮಾಡಿ ಈ ಮಟ್ಟದಲ್ಲಿ ಬದುಕಿಸಿಕೊಡಬೇಕೆಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ದ್ರಾಕ್ಷಿ, ದಾಳಿಂಬೆ, ಕಬ್ಬು, ತೊಗರಿ, ಕಡಲೆ, ಎಲ್ಲ ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ರೈತರು ಬೆಳೆಯುತ್ತಿದ್ದು ಈಗಾಗುತ್ತಿರುವ ಮಳೆಯಿಂದ ಕೆಲವು ದ್ರಾಕ್ಷಿ ಹಾಗೂ ದಾಳಿಂಬರ ಬೆಳೆಗಳು ರೋಗಕ್ಕೆ ತುತ್ತಾದರೆ ತೊಗರಿ ಕಡಲೆ ಕೊಳೆ ರೋಗಕ್ಕೆ ತುತ್ತಾಗಿವೆ. ಸಿಂದಗಿ ತಾಲೂಕಿನ ಬಂದಾಳ ಗ್ರಾಮದಲ್ಲಿ ಕಬ್ಬು ಸಂಪೂರ್ಣ ನೆಲಸಮವಾಗಿವೆ. ಈ ಬೆಳೆಗಳನ್ನೇ ನಂಬಿಕೊಂಡು ಬದುಕುತ್ತಿರುವ ರೈತಾಪಿ ವರ್ಗದವರು ದಿಕ್ಕು ತೋಚದಂತಾಗಿ ನಮ್ಮ ನೆರವಿಗೆ ಯಾರುಬರುತ್ತಾರೆಂದು ಹದ್ದಿನ್ಯ ರೀತಿಯಲ್ಲಿ ಕಾಯುವ ಸ್ಥಿತಿ ಬಂದೊದಗಿದೆ, ತೋಟಗಾರಿಕೆ ಕೃಷಿ ಇಲಾಖೆ ಎಲ್ಲ ಇಲಾಖೆಗಳ ಹಿರಿಯ ಅಧಿಕಾರಿಗಳನ್ನೊಳಗೊಂಡ ತಂಡ ರಚನೆ ಮಾಡಿ ತೊಂದರೆಗೀಡಾದ ರೈತರುಗಳ ಜಮೀನುಗಳನ್ನು ವೀಕ್ಷಣೆ ಮಾಡಿಸಿ ವರದಿ ತರಿಸಿಕೊಂಡು ಸಾರವಾಡ, ಹೊನಗನಹಳ್ಳಿ, ಜುಮನಾಳ, ತಿಕೋಟಾ, ತಾಜಪುರ (ಎಚ್), ತಿಡಗುಂದಿ, ಸಿಂದಗಿ ರೈತರಿಗೆ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಅಧ್ಯಕ್ಷರಾದ ಸುಜಾತಾ ಕಳ್ಳಿಮನಿ, ದೇವಕಾಂತ ಬಿಜ್ಜರಗಿ, ಮಲ್ಲು ಬಿದರಿ, ರಾಜು ಕಗ್ಗೋಡ, ಬೀರಪ್ಪ ಜುಮನಾಳ, ಪರಸುರಾಮ ಸಿದ್ದಪ್ಪ ಮಲಘಾಣ, ಅಖಂಡ ತಳವಾಡ, ಅಡಿಪ್ಪ ಬಿ.ಕೂಲಕಾರ, ಗಿರಮಲ ಹ. ಮಾದರ, ಹೇಮ ಏಸುಜಾಧವ, ನಿಂಗಪ್ಪ ಗಂಗಪ್ಪ ಉಪ್ಪಾರ, ಗಂಗಪ್ಪ ಗಡ್ಡಿ, ಶ್ಯಾಮಗೊಂಡ ಗಡಿ, ವಿಠಿ ಜಾಧವ, ಹಣಮಂತ ಕದ್ದನಕೇರಿ, ಅರ್ಜುಣಗಿ ಮಾ ಗಡಿ, ಭೀಮಶಿ ಕಂಬಳಿ, ಕರೆಪ್ಪ ಹ. ಗೋಡೆಕಾರ, ಈರಪ್ಪ ನಾ. ಬಂಡಿವಡ್ಡರ, ಬಸಪ್ಪ ಆಸಂಗಿ, ಶರಣ ಬಸಪ್ಪ ಹೊದ್ಲರ, ಶರನಬಸಪ್ಪ ಸ.ಹೊದ್ಲರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.