ದ್ಯಾಮ್ಮವ್ವ ದೇವಿ ಹಾಗೂ ದುರ್ಗಾದೇವಿ ಉಡಿ ತುಂಬುವ ಕಾರ್ಯಕ್ರಮ

ಕೊಲ್ಹಾರ:ಮೇ.26: ಪಟ್ಟಣದ ಆರಾಧ್ಯ ದೈವ ದ್ಯಾಮ್ಮವ್ವ ದೇವಿ ಹಾಗೂ ದುರ್ಗಾದೇವಿ ಉಡಿ ತುಂಬುವ ಧಾರ್ಮಿಕ ಕಾರ್ಯದ ನಿಮಿತ್ತ ವಿವಿಧ ಕಾರ್ಯಕ್ರಮಗಳು ಜರಗುವವು ಎಂದು ದ್ಯಾಮ್ಮವ್ವ ದೇವಿ ಹಾಗೂ ದುರ್ಗಾದೇವಿ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.
ಮೇ 27 ರಂದು ಮುಂಜಾನೆ 9 ಗಂಟೆಗೆ ದೇವಸ್ಥಾನ ಆವರಣವನ್ನು ಶುಭ್ರಗೊಳಿಸಿ ಸಾಯಂಕಾಲ ಎತ್ತಿನ ಬಂಡಿಯಲ್ಲಿ ಹಂದರ ತಪ್ಪಲ ಮೇರವಣಿಗೆ. ಮೇ 28 ರಂದು ನಸುಕಿನಜಾವ ದ್ಯಾಮವ್ವ ದೇವಿ ಹಾಗೂ ದುರ್ಗಾ ದೇವಿ ಕೃಷ್ಣಾ ನದಿಯ ಪವಿತ್ರಜಲದಿಂದ ರಾಚೋಟೇಶ್ವರ ದೇವಸ್ಥಾನದ ಆವರಣದಲ್ಲಿ ವೇದ, ಮಂತ್ರ ಪಠಣ, ಪುಷ್ಪಾಚರಣೆ ಜಲಾಭಿಷೇಕ ನಡೆಯುವುದು. ಮಧ್ಯಾಹ್ನ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಕಲ ವಾದ್ಯವೈಭವಗಳೊಂದಿಗೆ ಕೊಲ್ಹಾರ ಪುರ ಪ್ರವೇಶ ನಡೆಯುವುದು. ರಾತ್ರಿ 9 ಗಂಟೆಗೆ ಖ್ಯಾತ ಜನಪದ ಕಲಾವಿದ, ಚಲನಚಿತ್ರ ನಟ ಗುರುರಾಜ ಹೊಸಕೋಟಿ ಹಾಗೂ ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗುವುದು. ಪ್ರಸಕ್ತ ವರ್ಷದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಳಿಗೆ ಪ್ರತೀಭಾ ಪುರಸ್ಕಾರ ಕಾರ್ಯಕ್ರಮ ಜರುಗುವುದು ಮೇ 29 ರಂದು ಬೆಳಿಗ್ಗೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಧರ್ಮಸಭೆ ಜರುಗುವುದು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವಿ ಕೃಪೆಗೆ ಪಾತ್ರರಾಗಬೇಕು ಎಂದು ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.