ದ್ಯಾಮ್ಮವ್ವ ದೇವಿ ಹಾಗೂ ದುರ್ಗಾದೇವಿ ಉಡಿ ತುಂಬುವ ಕಾರ್ಯಕ್ರಮ

ಕೊಲ್ಹಾರ:ಮೇ.29: ಪಟ್ಟಣದ ಆರಾಧ್ಯದೈವ ದ್ಯಾಮ್ಮವ್ವ ದೇವಿ ಹಾಗೂ ದುರ್ಗಾದೇವಿ ಉಡಿ ತುಂಬುವ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ರಂದು ನಸುಕಿನಜಾವ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ಮಲಘಾನದ ವೀರಗಂಟಯ್ಯ ಸ್ವಾಮಿಗಳಿಂದ ಮಂತ್ರ ಪಠಣದೊಂದಿ ಹೋಮವನ್ನು ನೆರವೇರಿಸಿದರು ನಂತರ ದ್ಯಾಮವ್ವ ದೇವಿ ಮತ್ತು ದುರ್ಗಾ ದೇವಿ ಕೃಷ್ಣಾ ನದಿಯ ಪವಿತ್ರಜಲದಿಂದ ಪಟ್ಟಣದ ಹೊರವಲಯದ ರಾಚೋಟೇಶ್ವರ ದೇವಸ್ಥಾನದ ಆವರಣದಲ್ಲಿ ವೇದ, ಮಂತ್ರ ಪಠಣ, ಪುಷ್ಪಾಚರಣೆ ಜಲಾಭಿಷೇಕ ಮಾಡಿಕೊಂಡು. ಮಧ್ಯಾಹ್ನ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಕಲ ವಾದ್ಯವೈಭವಗಳೊಂದಿಗೆ ಕೊಲ್ಹಾರ ಪುರ ಪ್ರವೇಶ ನಡೆಯುತ್ತು. ದ್ಯಾಮವ್ವ ದೇವಿ ದೇವಸ್ಥಾನದ ಕಮಿಟಿ ಹಾಗೂ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು