ದೌರ್ಬಲ್ಯ ಬದಲಾಯಿಸಿಕೊಂಡರೆ ಸಾಮಥ್ರ್ಯ ನಿರೂಪಿಸಲು ಸಾಧ್ಯ


ಧಾರವಾಡ,ನ.7:ಯಾವುದೇದೌರ್ಬಲ್ಯವನ್ನು ಸ್ವಲ್ಪ ಬದಲಾಯಿಸಿಕೊಂಡರೆ ನಮ್ಮೊಳಗಿನ ಸಾಮಥ್ರ್ಯ ನಿರೂಪಿಸಲು ಸಾಧ್ಯವಾಗುತ್ತದೆಎಂದುಧಾರವಾಡ ಸರಕಾರಿ ಪದವಿ ಕಾಲೇಜಿನ ಹಿರಿಯಉಪನ್ಯಾಸಕಿಡಾ. ಪ್ರಜ್ಞಾ ಮತ್ತಿಹಳ್ಳಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು, ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ `ಕರ್ನಾಟಕ ಸಂಭ್ರಮ-50′ ನಿಮಿತ್ತಅವರು ಹೆಸರಾಯಿತುಕರ್ನಾಟಕ, ಉಸಿರಾಗಲಿ ಕನ್ನಡ’ 6ನೇ ದಿನದಕಾರ್ಯಕ್ರಮದಲ್ಲಿಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ಗಡಸುಧ್ವನಿಯಖ್ಯಾತ ಹಾಡುಗಾರ್ತಿ ಉಷಾ ಉತ್ತಪ್ಪ ಹಾಗೂ ಲತಾ ಮಂಗೇಶ್ಕರಅವರನ್ನುಜಗತ್ತುಒಪ್ಪಿ ಗೌರವಿಸಿತು ಅಂಥ ಕಸುವು ಯಾವುದೇ ಭಾಷೆಯ ಶಕ್ತಿ ಆಗಿರುತ್ತದೆ. ಅನ್ಯಭಾಷೆಗಳನ್ನು ಸಹ ಪ್ರೀತಿಸಿ ನಿಭಾಯಿಸುವುದು ಮುಖ್ಯ. ಆದಿ-ಅನಾದಿ ಕಾಲದಿಂದಲೂಐತಿಹಾಸಿಕ ಚಾರಿತ್ರ್ಯದೊಂದಿಗೆ ವಚನಕಾರರೂ ಸಹ ಕಾಯಕ ಸೇರಿದಂತೆ ಮಾನವೀಯ ಮೌಲ್ಯಕನ್ನಡದ ಸಂಸ್ಕøತಿಯಲ್ಲಿಅರ್ಥಪೂರ್ಣವಾಗಿ ತಿಳಿಸಿಕೊಟ್ಟಿದ್ದಾರೆ.
ಬದುಕಿನಆಶಯವನ್ನೆ ಬರೆಯುವುದೇ ಸಾಹಿತ್ಯ. ಕುಮಾರವ್ಯಾಸ, ಪಾಂಡವರು ಮತ್ತುಕೌರವರಯಶೋಗಾಥೆಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟು ವಿಮರ್ಶಾತ್ಮಕವಾಗಿ ಪ್ರಸ್ತುತ ದಿನಗಳಲ್ಲಿಯೂ ಅದರಅವಶ್ಯಕತೆಕುರಿತಂತೆಡಾ.ಪ್ರಜ್ಞಾ ಮತ್ತಿಹಳ್ಳಿ ಹೇಳಿದರು.
ಗೌರವಅಧ್ಯಕ್ಷತೆ ವಹಿಸಿ ಡಾ.ಎಸ್.ವ್ಹಿ. ಹೆಗಡಾಳ ಮಾತನಾಡಿ, ಕನ್ನಡ ಸಂಸ್ಕøತಿ ಪರಂಪರೆ ಉಳಿಸಿ ಬೆಳೆಸುವಲ್ಲಿ ಧಾರವಾಡ ವಿಶೇಷ ನೆಲ ಹೊಂದಿದೆ. ಎಲ್ಲಾ ವಿಷಯಗಳಲ್ಲೂ ಗಂಭೀರಚರ್ಚೆ, ಗೋಷ್ಠಿ, ಸಂಗೀತ ಇತ್ಯಾದಿಗಳು ವಿದ್ಯಾರ್ಥಿಗಳಿಗೆ ಸುಲಭವಾಗಿ ಸಿಗುತ್ತದೆ.ಅದರಲ್ಲೂ ಸಂಘದಕಾರ್ಯ ಚಟುವಟಿಕೆಗಳನ್ನು ಗಮನಿಸಿದರೆ ಇದುಗಿನ್ನಿಸ್‍ರಿಕಾರ್ಡ್ ಬುಕ್‍ನಲ್ಲಿದಾಖಲು ಆಗಬೇಕು.ಅಂಥಜನಪರ ಚಟುವಟಿಕೆಗಳಲ್ಲಿ ನಿರಂತರವಾಗಿಕರ್ನಾಟಕ ವಿದ್ಯಾವರ್ಧಕ ಸಂಘ ತೊಡಗಿಸಿಕೊಂಡಿದ್ದು ಶ್ಲಾಘನೀಯಎಂದರು.
ಸಿ.ಎಸ್.ಐ. ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯೆಡಾ.ಕಮಲಾ ಢವಳೆ ಅಧ್ಯಕ್ಷತೆ ವಹಿಸಿದ್ದರು.ಕಲಾವಿದರಾದ ಬಸವರಾಜ ಶಿಗ್ಗಾಂವ, ಜ್ಯೋತಿ ಯರಗಂಬಳಿಮಠ, ಮಲ್ಲೇಶ ಮುಳಗುಂದ ಕನ್ನಡ ನಾಡು-ನುಡಿ ಸಂಸ್ಕøತಿಯಗೀತಗಾಯನವನ್ನು ನಡೆಸಿಕೊಟ್ಟರು.ಶಂಕರ ಹಲಗತ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಸಂಚಾಲಕರಾದಗುರು ಹಿರೇಮಠ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿಡಾ.ಜಿ.ವಿ. ಕೊಕ್ಕಳ, ಡಾ.ಜಿ.ಎಂ. ಹೂಗಾರ, ಡಾ.ಮಾನಸಾ, ಡಾ.ಆರ್.ಬಿ.ಯರಗುಪ್ಪಿ ಸೇರಿದಂತೆ 800 ಕ್ಕೂ ಹೆಚ್ಚು ಸಿ.ಎಸ್.ಐ. ವಾಣಿಜ್ಯಶಾಸ್ತ್ರದ ಪದವಿ ಹಾಗೂ ಕ್ಲಾಸಿಕ್ ಪಿ.ಯು. ವಿದ್ಯಾರ್ಥಿಗಳು ಹಾಜರಿದ್ದರು.ವೀರಣ್ಣಒಡ್ಡೀನ ಉಪಸ್ಥಿತರಿದ್ದರು.