ದೋಷರಹಿತ ಮತದಾರರ ಪಟ್ಟಿ ಸಿದ್ದತೆಗೆ ಕ್ರಮವಹಿಸಿ

ಚಾಮರಾಜನಗರ, ಸೆ.22: ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿ.ಎಲ್.ಒ)ಗಳ ಮೂಲಕ ಸ್ವೀಕರಿಸಲಾಗುವ ಅರ್ಜಿಗಳನ್ನು ಮತದಾರರ ನೊಂದಣಾಧಿಕಾರಿ, ಸಹಾಯಕ ಮತÀದಾರರ ನೊಂದಣಾಧಿಕಾರಿಗಳು ಖುದ್ದು ಪರಿಶೀಲನೆ ನಡೆಸಿ ವಿಲೇಗೊಳಿಸಲು ಅಗತ್ಯ ಕ್ರಮ ವಹಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾವಚಿತ್ರವಿರುವ ಮತÀದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಿನಾಂಕ: 01.01.2021 ಕ್ಕೆ ಹೊರಡಿಸಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ಕಂಡು ಬರುವ ಲೋಪದೋಷಗಳನ್ನು ಸರಿಪಡಿಸಬೇಕು. ಬಿ.ಎಲ್.ಒ.ಗಳು ಮನೆ ಮನೆಗೆ ಭೇಟಿ ನೀಡಿ, ಮತದಾರರ ಪಟ್ಟಿಗೆ ಸೇರ್ಪಡೆಯಾಗದ ಅರ್ಹ ಮತದಾರರು, ದಿವ್ಯಾಂಗ ಮತದಾರರು, ಮೃತ ಹಾಗೂ ಸ್ಥಳಾಂತರ ಹೊಂದಿರುವ ಮತದಾರರ ಬಗ್ಗೆ ಪರಿಶೀಲಿಸಬೇಕು. ತಿದ್ದುಪಡಿಗಾಗಿ ಮತದಾರರಿಂದ ಬರುವ ಕೋರಿಕೆಗಳ ಬಗ್ಗೆ ಮಾಹಿತಿ ಪಡೆಯಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿಯವರು ತಿಳಿಸಿದರು.
ಮತದಾರರ ಹೆಸರು ಭಾವಚಿತ್ರ ಪುನರಾವರ್ತ ನೆಯಾಗಿದ್ದಲ್ಲಿ ಕೈಬಿಡಲು ಪರಿಶೀಲಿಸಬೇಕು. ಭಾರತ ಚುನಾವಣಾ ಆಯೋಗವು ವೋಟರ್ ಹೆಲ್ಪ್‍ಲೈನ್ ಆಪ್ (ವಿ.ಹೆಚ್.ಎ) ಪ್ರಚುರಪಡಿಸಿದೆ. ಇದನ್ನು ಬಳಿಸಿ ಮತದಾರರ ಪಟ್ಟಿಯಲ್ಲಿ ಮತದಾರರು ಸ್ವತಃ ಅವರ ಹೆಸರು ನೋಂದಾಯಿಸಿಕೊಳ್ಳುವ ಸಂಬಂಧ ಆಪ್ ಡೌನ್‍ಲೋಡ್ ಮಾಡಿಕೊಳ್ಳಲು ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡಬೇಕು ಎಂದರು.
ದಿನಾಂಕ: 18.01.2021 ರಿಂದ 31.08.2021 ರವರೆಗೆ ಅನುಮೋದನೆಗೊಂಡಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ, ಇ.ಆರ್.ಒ.ಎನ್.ಇ.ಟಿ ತಂತ್ರಾಂಶದಲ್ಲಿ ಪಿಡಿಎಫ್ ಜನರೇಟ್ ಮಾಡಿ, ಪಿವಿಸಿ ಕಲರ್ ಎಪಿಕ್ ಕಾರ್ಡ್‍ಗಳನ್ನು ಶೀಘ್ರವಾಗಿ ವಿತರಿಸಲು ಕ್ರಮ ವಹಿಸಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿಯವರು ಸೂಚಿಸಿದರು.
ಮತದಾರರ ಪಟ್ಟಿಯಲ್ಲಿ ಕಂಡು ಬರುವ ಲೋಪದೋಷಗಳನ್ನು ಸರಿಪಡಿಸಲು ಇರುವ ಸಮಯಾವಕಾಶವನ್ನು ಸದುಪಯೋಗಪಡಿಸಿಕೊಂಡು, ಶೇ. 100 ರಷ್ಟು ದೋಷರಹಿತ ಮತದಾರರ ಪಟ್ಟಿ ಸಿದ್ದತೆಗೆ ಶ್ರಮ ವಹಿಸಿ, ಚುನಾವಣಾ ಆಯೋಗದ ಮಹತ್ತರವಾದ ಪರಿಷ್ಕರಣಾ ಕಾರ್ಯವನ್ನು ಯಶಸ್ವಿಗೊಳಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ತಿಳಿಸಿದರು.
ತಹಶೀಲ್ದಾರರಾದ ಚಿದಾನಂದ ಗುರುಸ್ವಾಮಿ, ರವಿಶಂಕರ್, ಜಯಪ್ರಕಾಶ್, ಕೆ. ಕುನಾಲ್, ಚುನಾವಣಾ ತಹಶೀಲ್ದಾರ್‍ರಾದ ಶಂಕರ್‍ರಾವ್, ವಿನೋದ ಸೇರಿದಂತೆ ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.