ದೋಬಿಗಲ್ಲಿ ಜನರ ಹಕ್ಕುಪತ್ರ ಸಿಪಿಐ ಧರಣಿ

ಸಿಂಧನೂರ.ಜು.೧೫- ದೊಬಿಗಲ್ಲನಲ್ಲಿ ವಾಸಮಾಡುವ ಬಡ ಜನರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ಸಿಪಿಐ (m.ಐ) ಪಕ್ಷ ದಿಂದ ಇಂದು ತಹಸೀಲ್ದಾರ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಯಿತು.
ನಗರದ ಪೋಲೀಸ ಠಾಣೆಯ ಹತ್ತಿರ ಇರುವ ಸರ್ಕಾರಿ ಜಾಗ ೭೬೮/೧ ರಲ್ಲಿ ಸುಮಾರು ವರ್ಷಗಳಿಂದ ೬೦ ನಿವೇಶನ ರಹಿತ ಬಡ ಕುಟುಂಬಗಳು ವಾಸ ಮಾಡುತ್ತಿದ್ದು ಅವರಿಗೆ ಹಕ್ಕುಪತ್ರ ನೀಡಬೇಕು ಅಗ್ರಹಿಸಿ ಹಲವಾರು ಸಲ ಹೋರಾಟ ಮಾಡಿದರು ಸಹ ಇಲ್ಲಿತನಕ ನಮ್ಮ ಬೇಡಿಕೆ ಈಡೇರದ ಕಾರಣ ಇಂದು ತಹಸೀಲ್ದಾರ ಕಚೇರಿಯ ಮುಂದೆ ಧರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಮುಖಂಡರಾದ ಎಂ.ಗಂಗಾಧರ ಮಾತನಾಡಿದರು.
ಹಕ್ಕುಪತ್ರ ನೀಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಹಕ್ಕುಪತ್ರ ವಿತರಿಸಲು ವಿಳಂಬಕ್ಕೆ ಶಾಸಕರು ಕಂದಾಯ ಹಾಗು ನಗರಸಭೆಯ ಅಧಿಕಾರಿಗಳೆ ಹೋಣೆಗಾರರು ಮುಂದಿನ ಹೋರಾಟ ದಲ್ಲಿ ಏನಾದರೂ ಅವಘಡ ಸಂಭವಿಸಿದರೆ ಇವರೆ ಹೊಣೆಗಾರರು ಎಂದು ಹೋರಾಟ ಗಾರರು ಹೇಳಿದರು
ಹನುಮಂತಪ್ಪ ಹಂಪನಾಳ, ರವಿದಾದಸ್, ರಮೇಶ ದರಣೆ ಬೆಂಬಲಿಸಿ ಮಾತನಾಡಿದರು ಪಕ್ಷದ ಮುಖಂಡರಾದ ಮಾತನಾಡಿದ ವೆಂಕಟೇಶ, ಆದೇಶ, ಮಲ್ಲಪ್ಪ, ಭಾರತಿ, ವಿಜಯಲಕ್ಷ್ಮಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ತಹಸೀಲ್ದಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.