ದೋಣಿ ಮುಳುಗಿ ೧೭ ಮಂದಿ ಸಾವು

ನ್ಯೂ ಪ್ರೋವಿಡೆನ್ಸ್ ಐಲ್ಯಾಂಡ್ (ಬಹಾಮಾ), ಜು.೨೫- ಹೈಟಿ ಮೂಲದ ವಲಸಿಗ ನಿರಾಶ್ರಿತರನ್ನು ಸಾಗಿಸುತ್ತಿದ್ದ ದೋಣಿ ಮುಳುಗಿದ ಪರಿಣಾಮ ೧೭ ಮಂದಿ ಮೃತಪಟ್ಟು, ೨೫ ಮಂದಿಯನ್ನು ರಕ್ಷಿಸಿದ ಘಟನೆ ಬಹಾಮಾದಲ್ಲಿ ನಡೆದಿದೆ.


ಬಹಾಮಾದ ನ್ಯೂ ಪ್ರೋವಿಡೆನ್ಸ್ ಐಲ್ಯಾಂಡ್‌ನಿಂದ ಸುಮಾರು ಏಳು ಕಿ.ಮೀ. ದೂರದಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟವರಲ್ಲಿ ೧೫ ಮಂದಿ ಮಹಿಳೆಯರು ಹಾಗೂ ಒಂದು ಶಿಶು ಕೂಡ ಸೇರಿದೆ. ಆದರೆ ಘಟನೆಯಲ್ಲಿ ಯಾರಾದರೂ ಕಣ್ಮರೆಯಾಗಿದ್ದಾರೆಯೇ ಎಂಬ ಬಗ್ಗೆ ಇನ್ನೂ ಮಾಹಿತಿಯಿಲ್ಲ. ಈ ಬಗ್ಗೆ ತನಿಖೆ ಮುಂದುವರೆದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಹಾಮಾ ಪ್ರಧಾನಿ ಫಿಲಿಪ್ ಬ್ರೇವ್ ಡೇವಿಡ್, ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ಸರ್ಕಾರ ಮತ್ತು ಬಹಾಮಾಸ್ ಜನರ ಸಂತಾಪವನ್ನು ತಿಳಿಸಲು ನಾನು ಬಯಸುತ್ತೇನೆ. ಅವಳಿ ಇಂಜಿನ್ ವೇಗದ ದೋಣಿಯನಲ್ಲಿ ಸುಮಾರು ೬೦ ಮಂದಿ ಪ್ರಯಾಣಿಸುತ್ತಿದ್ದು, ಬಹಾಮಾದಿಂದ ಅಮೆರಿಕಾದ ಮಿಯಾಮಿಗೆ ತೆರಳುತ್ತಿತ್ತು ಎನ್ನಲಾಗಿದೆ. ಈ ವೇಳೆ ದೋಣಿ ಮುಳುಗಿದ ಪರಿಣಾಮ ಅವಘಡ ಸಂಭವಿಸಿದೆ. ರಕ್ಷಣೆಗೊಳಗಾದವರನ್ನು ಆರೋಗ್ಯ ಕಾರ್ಯಕರ್ತರು ತಪಾಸಣೆಗೆ ಒಳಪಡಿಸಲಾಗಿದೆ. ಶಂಕಿತ ಮಾನವ ಕಳ್ಳಸಾಗಣೆ ಕಾರ್ಯಾಚರಣೆಯ ಕುರಿತು ಕ್ರಿಮಿನಲ್ ತನಿಖೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ ಘಟನೆ ಬಗ್ಗೆ ಹೈಟಿ ಪ್ರಧಾನಿ ಏರಿಯಲ್ ಹೆನ್ರಿ ಕೂಡ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.