ದೊರೆಸ್ವಾಮಿ ನಿಧನಕ್ಕೆ ಸಂತಾಪ

ಹುಬ್ಬಳ್ಳಿ, ಮೇ 27: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ, ಪತ್ರಕರ್ತರ ಎಚ್.ಎಸ್.ದೊರೆಸ್ವಾಮಿ ನಿಧನ ಜನಪರ ಹೋರಾಟ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಿಗೆ ತುಂಬಲಾರದ ನಷ್ಟ ಎಂದು ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಂತಾಪ ತಿಳಿಸಿದ್ದಾರೆ.
ಉಪನ್ಯಾಸಕರಾಗಿ ಜೀವನ ಆರಂಭಿಸಿದ ಅವರು, ಸ್ವಾತಂತ್ರ್ಯ ಹೋರಾಟ, ಸಾಮಾಜಿಕ ಬದ್ಧತೆ, ನಿರಂತರ ಎಚ್ಚರ, ಸಕ್ರಿಯವಾಗಿ ಸಮಕಾಲೀನ ಆಡಳಿತ ಯಂತ್ರದ ಲೋಪಗಳ ವಿರುದ್ಧ ನಿರ್ಭೀತಿಯಿಂದ ಪ್ರತಿಕ್ರಿಯಿಸುತ್ತಿದ್ದರು.
ಸ್ವಾತಂತ್ರ್ಯಕ್ಕೆ ಹೋರಾಡಿ, ಸ್ವಾತಂತ್ರ್ಯ ಭಾರತ ಲೋಪಗಳ ವಿರುದ್ಧ ಹೋರಾಡಿದ ಅಪ್ರತಿಮ ವ್ಯಕ್ತಿತ್ವ. ಸ್ಪಷ್ಟ ನೇರ ನಿಷ್ಠುರ ವ್ಯಕ್ತಿತ್ವ ದೊರೆಸ್ವಾಮಿ ನೋಡಿದಾಗಲೆಲ್ಲ ಇವರೇ ನಮ್ಮ ನಡುವೆ ಇರುವ ಗಾಂಧಿನ ಎನ್ನುವಂತೆ ಭಾಸವಾಗುತ್ತಿತ್ತು.
ಶತಾಯುಷಿಯಾಗಿದ್ದ ಅವರು ಭೂ ಹಂಚಿಕೆ ಹೋರಾಟ, ನಾಡು, ನುಡಿ ಚಿಂತನೆ ಸೇರಿದಂತೆ ಹತ್ತು ಹಲವಾರು ಜನಪರ ಚಳುವಳಿಗಳಲ್ಲಿ ತೊಡಗಿಸಿಕೊಂಡ ಸತ್ಯ ನಿಷ್ಠ ವಂತರಾಗಿದ್ದವರು ಎಂದರು.