ದೊರೆಸ್ವಾಮಿ ನಿಧನಕ್ಕೆ ಸಂತಾಪ

ಕೊಪ್ಪಳ,ಮೇ 27 : ನಾಡಿನ ಸಾಕ್ಷಿಪ್ರಜ್ಞೆಯಂತಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ (104) ಹೃದಯಾಘಾತದಿಂದ ನಿಧನರಾಗಿರುವುದು ತೀವ್ರ ನೋವಿನ ಸಂಗತಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂತಾಪ ಸೂಚಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ದಬ್ಬಾಳಿಕೆಯ ಹಾಗೂ ಸರ್ವಾಧಿಕಾರದ ರಾಜಕಾರಣವನ್ನು ಎಲೆಕ್ಷನ್ನಿನಲ್ಲಿ ಹಿಮ್ಮೆಟ್ಟಿಸುವುದು ಮುಖ್ಯ ಎನ್ನುತ್ತಿದ್ದ ಅವರು ತಮ್ಮ 98ನೆಯ ವಯಸ್ಸಿನಲ್ಲಿ ‘ಭೂಗಳ್ಳರು ಕಬಳಿಸಿದ ಸರ್ಕಾರಿ ಜಮೀನನ್ನು ಉಳಿಸಿದ ಹೋರಾಟ’ ಎಂಬ ಪುಸ್ತಕವನ್ನೂ ಬರೆದಿದ್ದರು. ಅವರೊಳಗಿನ ದಿಟ್ಟ ಪತ್ರಕರ್ತ ಹಾಗೂ ಕೊನೆಯವರೆಗೂ ಇದ್ದ ನೇರ, ನಿರ್ಭೀತ, ಸತ್ಯನಿಷ್ಠ ಬದುಕಿಗೆ ಅದು ಸಾಕ್ಷಿಯಂತಿತ್ತು.
ತಮ್ಮ ಕೊನೆಯ ಕಾಲದವರೆಗೂ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡುತ್ತಲೇ ಬಂದಿದ್ದ ದೊರೆಸ್ವಾಮಿ ಅವರು, ಕೆಲವೇ ದಿನಗಳ ಹಿಂದೆ ಕೊರೊನಾ ಸೋಂಕನ್ನು ಅದೇ ರೀತಿ ಹೋರಾಡಿ ಗೆದ್ದಿದ್ದರು.
ನಾಡು ಮತ್ತು ನುಡಿಗೆ ಅವರು ನೀಡಿರುವ ಕೊಡುಗೆ ಸದಾ ಸ್ಮರಣೀಯ.ಅಗಲಿದ ಹಿರಿಯ ಜೀವಕ್ಕೆ ಹೃತ್ಪೂರ್ವಕ ನಮನಗಳು ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಶೇಖರಗೌಡ ಮಾಲೀಪಾಟೀಲ್ ಹಾಗೂ ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ, ಮುಖಂಡ ಶರಣೇಗೌಡ ಹೇರೂರ ಸಂತಾಪ ಸೂಚಿಸಿದ್ದರೆ.