ದೊಣೆಹಳ್ಳಿ ಗ್ರಾ.ಪಂ ಅಧ್ಯಕ್ಷರಾಗಿ ಮರೇನಹಳ್ಳಿ ಕೆ.ತಿಪ್ಪೇಸ್ವಾಮಿ ಅವಿರೋಧ ಆಯ್ಕೆ

ಸಂಜೆವಾಣಿ ವಾರ್ತೆ

ಜಗಳೂರು.ಆ.೮ :- ತಾಲೂಕಿನ ದೊಣೆಹಳ್ಳಿ ಗ್ರಾ.ಪಂ ಎರಡನೇ ಅವಧಿಯ ಅಧ್ಯಕ್ಷರಾಗಿ ಮರೇನಹಳ್ಳಿ. ಕೆ ತಿಪ್ಪೇಸ್ವಾಮಿ ಹಾಗೂ ಉಪಾಧ್ಯಕ್ಷರಾಗಿ ಹನುಮಕ್ಕ ಸೋಮವಾರ ನಡೆದ ಚುನಾವಣೆ ಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ದೊಣೆಹಳ್ಳಿ ಗ್ರಾ.ಪಂ ಅನುಸೂಚಿತ ಪರಿಶಿಷ್ಟ ಜಾತಿಗೆ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅನುಸೂಚಿತ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲು ನಿಗಧಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ. ಕೆ. ತಿಪ್ಪೇ ಸ್ವಾಮಿ ಒಬ್ಬರೇ ನಾಮ ಪತ್ರ ಸಲ್ಲಿಸಿದರು ಅದರಂತೆಯೇ ಉಪಾ ಧ್ಯಕ್ಷ ಸ್ಥಾನಕ್ಕೆ ಹನುಮಕ್ಕ ಒಬ್ಬರೇ ನಾಮ ಪತ್ರ ಸಲ್ಲಿಸಿದ್ದರು. ಆದ್ದ ರಿಂದ ತಿಪ್ಪೇಸ್ವಾಮಿ ಅಧ್ಯಕ್ಷರಾಗಿ ಹಾಗೂ ಉಪಧ್ಯಕ್ಷರಾಗಿ ಹನು ಮಕ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿ ಹಾಗೂ ತಾಲೂಕು ಪಂಚಾಯಿತಿ ಇಓ ಚಂದ್ರ ಶೇಖರ್ ಅಧಿಕೃತವಾಗಿ ಘೋಷಣೆಮಾಡಿದ್ದಾರೆ.ದೊಣ್ಣೆಹಳ್ಳಿ  ಗ್ರಾ.ಪಂ ಯಲ್ಲಿ ೨೧ ಜನರ ಸದಸ್ಯರ ಬಲ ಹೊಂದಿ ದ್ದು ೧೬ ಜನ ಸದಸ್ಯರ‌ ಬೆಂಬಲದೊಂದಿಗೆ ಮರೇನಹಳ್ಳಿ ತಿಪ್ಪೇ ಸ್ವಾಮಿ ಆಯ್ಕೆ ಯಾಗಿದ್ದು ಐದು ಜನ ಸದಸ್ಯರು ಗೈರಾಗಿದ್ದರು”ನಂತರ ಮಾತನಾಡಿದ ನೂತನ ಅಧ್ಯಕ್ಷ ಮರೇನಹಳ್ಳಿ ಕೆ. ತಿಪ್ಪೇ ಸ್ವಾಮಿ ದೊಣೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹಳ್ಳಿಗ ಳಿಗೆ ಮೂಲಭೂತ ಸೌಕರ್ಯಗಳಾದ ರಸ್ತೆ ಚರಂಡಿ ಸ್ವಚ್ಚತೆ, ಕುಡಿ ಯುವ ನೀರು, ಬೀದಿ ದೀಪ, ಶೈಕ್ಷಣಿಕ ಸೇರಿದಂತೆ ಗ್ರಾಮಗಳ ಅಭಿವೃದ್ಧಿ ಕಡೆ ಹೆಚ್ಚು ಅಧ್ಯತೆ ನೀಡಲಾಗುವುದು ಎಲ್ಲಾ ಗ್ರಾಮಗಳ ಮುಖಂಡರು ಮತ್ತು ಸದಸ್ಯರ ಸಹಮತದಿಂದ ಅಭಿವೃದ್ಧಿ ಕೆಲಸ ಮಾಡುವೆ ಎಂದರು.ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಶ್ವೇತಾ ಬಸವರಾಜ್. ಸಿದ್ದಪ್ಪ. ಗುರುಮೂರ್ತಿ,ಜಯ್ಯಣ್ಣ, ಗುಂಡಪ್ಪ,ಬಸವರಾಜೇಶ್ವರಿ, ಸಿದ್ದಲಿಂಗಪ್ಪ,ರೋಜಾ,ರೇಖಾ,ಇಂದ್ರಮ್ಮ,ವಿಶಾಲಾಕ್ಷಮ್ಮ,ಓಬಮ್ಮ,ಶರಣೇಶ್,ಮುಖಂಡರಾದ ವಕೀಲರಾದ ಮರೆನಹಳ್ಳಿ.ಬಸವರಾಜ್, ಮುಖಂಡರಾದ ಜಗಳೂರಯ್ಯ, ಕುಮಾರ್ ಆಕನೂರು ಕೆ. ತಿಪ್ಪೇ ಸ್ವಾಮಿ, ಬಸವರಾಜ್, ಮಾಜಿ ಗ್ರಾಪಂ ಸದಸ್ಯ ಜಿ.ಟಿ.ನಾಗರಾಜ್, ನರಸಿಂಹಮೂರ್ತಿ.ನಾಗೇಶ್. ಶಿವಮೂರ್ತಿ,ದೊಡ್ಡನಾಗೇಂದ್ರಪ್ಪ, ರಾಜಪ್ಪ,ಬಕ್ಕೇಶ್, ಸಿದ್ದಮ್ಮನಹಳ್ಳಿ ವೆಂಕಟೇಶ್,ಸಿದ್ದಮ್ಮನಹಳ್ಳಿ ಬಸವರಾಜ್,ಕಾರ್ಮಿಕ ಘಟಕದ ರುದ್ರೇಶ್, ಸಹೋದರ  ಮುನಿ ರಾಜ್, ನಾಗೇಶ್,ಪಿಡಿಓ ಹನುಮಂತಪ್ಪ ಸೇರಿದಂತೆ ಸಿಬ್ಬಂದಿಗಳು ಹಾಗೂ ಗ್ರಾಮದ ಮುಖಂಡರು ಉಪ ಸ್ಥಿತರಿದ್ದರು ಜಗಳೂರು ಪೊಲೀಸ್ ಇಲಾಖೆಯಿಂದ ಬಿಗಿ ಬಂದೋ ಬಸ್ತ್ ಮಾಡಲಾಗಿತ್ತು.