ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 6 :- ಕಳೆದ ಐದಾರು ದಿನದಿಂದ ದೊಡ್ಡಗೊಲ್ಲರಹಟ್ಟಿಯಲ್ಲಿ ಕಾಣಿಸಿಕೊಂಡಿದ್ದ ವಾಂತಿ ಭೇದಿ ಪ್ರಕರಣಗಳು ಹಂತಹಂತವಾಗಿ ನಿಯಂತ್ರಣಕ್ಕೆ ತಲುಪುತ್ತಿವೆ ಎಂದು ಗ್ರಾಮದಲ್ಲೇ ಮೊಕ್ಕಾಂ ಹೂಡಿರುವ ತಾಲೂಕು ಆರೋಗ್ಯ ಇಲಾಖೆಯ ಹಿರಿಯ ನಿರೀಕ್ಷಕ ಜಗದೀಶ ತಿಳಿಸಿದ್ದಾರೆ.
ಆರೋಗ್ಯ ಇಲಾಖೆ, ಪಂಚಾಯತಿ, ಅಂಗನವಾಡಿ, ಆಶಾ ಕಾರ್ಯಕರ್ತರ ಹಗಲಿರುಳು ಪರಿಶ್ರಮ ವಹಿಸಿದ್ದರಿಂದ ಸಂಪೂರ್ಣ ನಿಯಂತ್ರಣ ಹಂತಕ್ಕೆ ತಲುಪಿದ್ದು ರಿಪೀಟೆಡ್ ಪ್ರಕರಣ ಒಂದನ್ನು ಬಿಟ್ಟರೆ ಉಳಿದೆಲ್ಲರು ಚಿಕಿತ್ಸೆ ಪಡೆದು ತಮ್ಮ ಮನೆಗಳಿಗೆ ಹೋಗಿದ್ದಾರೆ. ಗ್ರಾಮದಲ್ಲಿ ಜಲಜೀವನ್ ಮಿಷೆನ್ ಗೆ ಸಂಬಂದಿಸಿದ ಕಾಮಗಾರಿ ಕುರಿತಂತೆ ಕುಡಿಯುವ ನೀರಿನ ಪೈಪ್ ಲೈನ್ ಗಳಲ್ಲಿ ಡ್ಯಾಮೇಜ್ ಆಗಿದ್ದರ ಪರಿಣಾಮ ಆದರಲ್ಲಿ ಮಳೆ ಬಂದು ಕಲುಷಿತ ನೀರು ಸೇರ್ಪಡೆಯಾಗಿದ್ದರಿಂದ ಜೂನ್ 30ರಂದು ಮೂರು ಪ್ರಕರಣ ಕಾಣಿಸಿಕೊಂಡಿದ್ದರಿಂದ ಹೆಚ್ಚೇತ್ತ ಆರೋಗ್ಯ ಇಲಾಖೆ ಜುಲೈ 1ರಿಂದಲೇ ಅಂಬ್ಯುಲೆನ್ಸ್ ನಲ್ಲಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮೊಕ್ಕಾಂ ಹೂಡಿ ಅಂದಿನಿಂದ ತಪಾಸಣೆ ಚಿಕಿತ್ಸೆ ನೀಡುತ್ತಿದ್ದೆವು ಹೆಚ್ಚಿನ ಅನಾರೋಗ್ಯದ ವಾಂತಿ ಭೇದಿ ಪ್ರಕರಣಗಳನ್ನು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಲಾಗುತ್ತಿತ್ತು ಕಳೆದ ಮೂರು ದಿನದಲ್ಲಿ ಆಸ್ಪತ್ರೆಯಲ್ಲಿ 20ಪ್ರಕರಣ ದಾಖಲಾಗಿದ್ದವು ನಂತರ 10ಮಂದಿಯನ್ನು ಸಂಪೂರ್ಣ ಚಿಕಿತ್ಸೆ ನೀಡಿ ಗುಣಮುಖರಾದ ನಂತರ ಮನೆಗೆ ಕಳುಹಿಸಲಾಗಿತ್ತು. ಇನ್ನುಳಿದ 10ಜನರನ್ನು ಹಂತಹಂತವಾಗಿ ನಿಯಂತ್ರಣಗೊಳ್ಳುತ್ತಿದ್ದಂತೆ ಮನೆಗಳಿಗೆ ಕಳುಹಿಸಲಾಗಿದೆ ನಿನ್ನೆ ಒಬ್ಬ ಮಾತ್ರ ಬಂದು ಚಿಕಿತ್ಸೆ ಪಡೆದದನ್ನು ಬಿಟ್ಟರೆ ಇನ್ನಾವುದೇ ಪ್ರಕರಣ ಮತ್ತೊಮ್ಮೆ ಕಂಡುಬಂದಿಲ್ಲವಾಗಿದ್ದು ನಿಯಂತ್ರಣ ಹಂತ ತಲುಪಿದೆ ಎಂದು ಜಗದೀಶ ತಿಳಿಸಿದರು ಅಲ್ಲದೆ ಕೂಡ್ಲಿಗಿ ಕ್ಷೇತ್ರದ ಶಾಸಕರು,ಜಿಲ್ಲಾಡಳಿತ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಆರೋಗ್ಯ ಇಲಾಖೆ,ತಾಲೂಕು ಪಂಚಾಯತಿ, ಗ್ರಾಮಪಂಚಾಯಿತಿ,ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅಂಗನವಾಡಿ, ಆಶಾ ಕಾರ್ಯಕರ್ತರು ಹಗಲಿರುಳ ಪರಿಶ್ರಮದಿಂದ ಜನರಲ್ಲಿ ಅರಿವು ಮೂಡಿಸುವ ಮೂಲಕ ಗ್ರಾಮದಲ್ಲಿ ವಾಂತಿ ಭೇದಿ ಪ್ರಕರಣಗಳು ನಿಯಂತ್ರಣ ಹಂತಕ್ಕೆ ತಲುಪಿವೆ ಎಂದು ಇಂದು ಸಂಜೆವಾಣಿ ಪ್ರತಿನಿಧಿಗೆ ತಿಳಿಸಿದರು.