
ಕಲಬುರಗಿ,ಸೆ.3-ಉರಗ ರಕ್ಷಕರಾದ ಪ್ರಶಾಂತ್ ಅವರು ಇಲ್ಲಿನ ಭಾಗ್ಯ ನಗರದ ಅಪಾರ್ಟ್‍ಮೆಂಟ್ ಒಂದರ ಬಳಿ ಪತ್ತೆಯಾದ ದೊಡ್ಡ ಗಾತ್ರದ ಉಡ ಹಿಡಿದು ಅದನ್ನು ರಕ್ಷಣೆ ಮಾಡಿ ನಿರ್ಜನ ಪ್ರದೇಶಕ್ಕೊಯ್ದು ಬಿಟ್ಟಿದ್ದಾರೆ.
ದೊಡ್ಡ ಗಾತ್ರದ ಉಡ ನೋಡಿದ ಅಪಾರ್ಟ್‍ಮೆಂಟ್ ಅಕ್ಕಪಕ್ಕದ ನಿವಾಸಿಗಳು ಅದನ್ನು ಹಾವೆಂದು ಭಾವಿಸಿ ಸ್ನೇಕ್ ಪ್ರಶಾಂತ್ ಅವರಿಗೆ ಕರೆ ಮಾಡಿದ್ದಾರೆ. ಅವರು ಸ್ಥಳಕ್ಕೆ ಧಾವಿಸಿ ಉಡ ಹಿಡಿದು ಅದನ್ನು ರಕ್ಷಣೆ ಮಾಡಿ ನಿರ್ಜನ ಪ್ರದೇಶದಲ್ಲಿ ಬಿಟ್ಟು ಬಿಟ್ಟಿದ್ದಾರೆ.
” ಉಡ ಒಂದು ನಿರುಪದ್ರವಿ ಜೀವಿಯಾಗಿದ್ದು ಇದರ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಗಳು ಜನರಲ್ಲಿವೆ. ಉಡ ತನ್ನ ಬಾಲದಿಂದ ಹೊಡೆದರೆ ಗಂಡಸುತನ ಹೋಗುತ್ತದೆ. ಅದರ ಮಾಂಸ ತಿಂದರೆ ಗುಪ್ತಾಂಗ ಬಲಿಷ್ಠವಾಗುತ್ತದೆ. ಅದರ ಕೊಬ್ಬನ್ನು ಕರಗಿಸಿ ತೈಲ ಮಾಡಿ ಹಚ್ಚಿಕೊಂಡರೆ ನರಗಳು, ಮೂಳೆಗಳು ಗಟ್ಟಿಯಾಗುತ್ತವೆ ಎಂಬ ತಪ್ಪು ಕಲ್ಪನೆಗಳು ಇಂದಿಗೂ ಜನರ ಮನಸಲ್ಲಿ ಬೇರೂರಿವೆ. ಅದೆಲ್ಲವೂ ಸುಳ್ಳು, ಬರಿ ತಪ್ಪು ಕಲ್ಪನೆಗಳಷ್ಟೇ” ಎನ್ನುತ್ತಾರೆ ಸ್ನೇಕ್ ಪ್ರಶಾಂತ್ ಅವರು.
ಇಂತಹ ನಿರುಪದ್ರುವಿ ಜೀವಿಗಳು ಕಂಡು ಬಂದರೆ ತಮಗೆ ಕರೆ ಮಾಡಿ ಎಂಬುದು ಸ್ನೇಕ್ ಪ್ರಶಾಂತ್ ಅವರ ಕೋರಿಕೆಯಾಗಿದೆ. ಅವರ ಮೊಬೈಲ್ ನಂಬರ್: 7411431430.