
ಕಲಬುರಗಿ:ಎ.25:ಕಳೆದ ಹತ್ತು ದಿನಗಳಿಂದ ನಗರದ ಕಾಯಕ ಫೌಂಡೇಶನ್ ವತಿಯಿಂದ ಶಾಲಾ ಮಕ್ಕಳಿಗೆ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ಹತ್ತು ದಿನಗಳ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ವಿಶೇಷವಾಗಿ ದೊಡ್ಡಾಟ ಹೆಜ್ಜೆ ಕುಣಿತ, ಹಾಡುಗಳು, ಕೋಲಾಟ, ಮೇಕಪ್ ಹಾಗೂ ದೊಡ್ಡಾಟದ ವಸ್ತ್ರ ವಿನ್ಯಾಸವನ್ನು ಮಕ್ಕಳಿಗೆ ಕಲಿಸಿಕೊಡಲಾಯಿತು.
ದೊಡ್ಡಾಟಗಳು ಉಳಿದು ಬೆಳೆಯಬೇಕಾದರೆ ಶಾಲಾ ಮಕ್ಕಳು ಕಾಲೇಜ್ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ. ನಮ್ಮ ಶಾಲೆಯಲ್ಲಿ ಅಂತದ್ದೊಂದು ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮೀಣ ಶೈಲಿಯ ಕಲಾಂ ಪರಂಪರೆಯನ್ನು ಮಕ್ಕಳಿಗೆ ಪರಿಚಯಿಸುವುದರಲ್ಲಿ ನಮ್ಮ ಸಂಸ್ಥೆ ಮುಂದಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಸಪ್ನಾ ರೆಡ್ಡಿ ಪಾಟೀಲ್ ತಿಳಿಸಿದರು.
ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ನಮ್ಮ ಸಂಸ್ಥೆ ಯಾವಾಗಲೂ ಕಲೆ ಕಲಾವಿದರನ್ನು ಗೌರವಿಸುವುದರಲ್ಲಿ ಹಾಗೂ ಅದರ ಪರಿಚಯವನ್ನು ನಮ್ಮ ಮಕ್ಕಳಿಗೆ ಮಾಡಿಸುವುದರಲ್ಲಿ ನಾವು ಯಾವಾಗಲೂ ಸಿದ್ಧ ಎಂದು ಪಾಲಕರಿಗೆ ಕಿವಿಮಾತು ಹೇಳಿದರು. ಮಕ್ಕಳು ಸಾಂಸ್ಕøತಿಕವಾಗಿ ಶ್ರೀಮಂತರಾಗಬೇಕು ಮತ್ತು ಯಾವುದಾದರೂ ಒಂದು ಕಲೆಯ ವಾರಸುದಾರ ಆಗಬೇಕೆಂಬುದು ನಮ್ಮ ಆಶಯ. ಮಕ್ಕಳ ರಂಗಭೂಮಿಯಲ್ಲಿ ಹೆಸರು ಮಾಡಿರುವ ನಾಟಕ ಶಿಕ್ಷಕರಾದ ಅಶೋಕ್ ತೊಕ್ನಳ್ಳಿ ಮತ್ತು ಶಿಲ್ಪ ಕಲಾವಿದ ಗೌರಿಶಂಕರ್ ಗೋಗಿ ಅವರು ಅವರು ಈ 10 ದಿನಗಳ ಕಾಲ ಶಿಬಿರದ ನಿರ್ದೇಶಕರಾಗಿ ಕೆಲಸ ಮಾಡಿ ಮಕ್ಕಳಿಗೆ ಹೊಸ ಅನುಭವ ತಂದುಕೊಟ್ಟದ್ದು ನಮಗೆ ಖುಷಿ ತಂದುಕೊಟ್ಟಿದೆ ಎಂದರು
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದಂತಹ ಶಿವರಾಜ್ ಪಾಟೀಲ್ ಮತ್ತು ಮತ್ತು ಶಾಲೆಯ ಪ್ರಮುಖ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕ ಬಳಗ ಸಮಾರೋಪದ ಸಂದರ್ಭದಲ್ಲಿ ಮಕ್ಕಳಿಂದ ಪ್ರದರ್ಶನವಾದ ದೊಡ್ಡಾಟವನ್ನು ವೀಕ್ಷಿಸಿದರು..