
ಸೇಡಂ:ಮಾ.28:
ಆಧುನಿಕ ಮಾಧ್ಯಮ ಗ್ರಾಮಿಣ ಪ್ರದೇಶವನ್ನ ಆವರಿಸಿ ಯುವಕರನ್ನ ಕಲೆ, ಸಾಹಿತ್ಯದಿಂದ ದೂರ ಉಳಿಯುವಂತೆ ಮಾಡುತ್ತಿವೆ ಎಂದು ಕಳಕಳಿಯನ್ನು ವ್ಯಕ್ತಪಡಿಸುತ್ತಾ ಯುವ ಜನತೆ ಮೋಬೈಲಿ ಗಿಳಿನಿಂದ ಹೋರ ಬಂದು ದೊಡ್ಡದಂತ ಕಲೆಗಳು ಕಲಿತು ಹೋಸ ಬಗೆಯಲ್ಲಿ ಪ್ರದರ್ಶನ ಮಾಡಿ ವಿಶ್ವದ ಗಮನ ಸೆಳೆಯಬೇಕು ಮತ್ತು ಇಂತಹ ಕಲೆಗಳು ವಿಶ್ವದೆತ್ತರಕ್ಕೆ ಬೆಳೆಯಬೇಕು ಎಂದು ಸೇಡಂ ತಾಲೂಕಿನ ಜಾಕನಪಲ್ಲಿ ಗ್ರಾಮದಲ್ಲಿ ತಿಂಗಳ ಸಂಜೆ ಯುವ ವೇದಿಕೆ ಮತ್ತು ನಾನು-ನಮ್ಮೂರು ಶಾಲಾ ಮಕ್ಕಳ ವೇದಿಕೆ ಜಾಕನಪಲ್ಲಿ ಸಹಯೋಗದಲ್ಲಿ ವಿಶ್ವ ರಂಗ ಭೂಮಿ ದಿನಾಚರಣೆ ಅಂಗವಾಗಿ ನಡೆದ ದೊಡ್ಡಾಟ ಪ್ರದರ್ಶನವನ್ನು ತಾಳ ನುಡಿಸುವುದರ ಮುಖಾಂತರ ಸೇಡಂ ನ ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕರಾದ ರಾಜಶೇಖರ ರುದ್ನೂರ್ ಉದ್ಘಾಟಿಸಿ ಮಾತನಾಡಿದರು.
ಜಾಕನಪಲ್ಲಿ ಶಾಲಾ ಮಕ್ಕಳ ನಿರಂತರ ರಂಗ ಚಟುವಟಿಕೆಗಳಿಂದಾಗಿ ಗ್ರಾಮ, ತಾಲೂಕು ಮತ್ತು ಜಿಲ್ಲೆಗೆ ಹೆಸರು ಬರುವಂತಾಗಿದೆ. ಈ ಎಲ್ಲ ಬೆಳವಣಿಗಗೆ ಕಾರಣ, ಪಾಲಕರು ಮತ್ತು ಗ್ರಾಮಸ್ಥರು. ನಿಮ್ಮ ಸಹಕಾರವಿದ್ದರೆ ಸರಕಾರಿ ಶಾಲೆಯ ಶಿಕ್ಷಕರುಗಳು ಹೆಚ್ಚು ಹೆಚ್ಚು ಕೆಲಸ ಮಾಡಲು ಸಾದ್ಯವೆಂದರು.
ಎಲ್ಲಾ ಸರಕಾರಿ ಶಾಲೆಗಳಿಗೆ ರಂಗ ಶಿಕ್ಷಕರ ನೇಮಕವಾಗಲಿ, ಗ್ರಾಮಿಣ ಭಾಗದಲ್ಲಿರುವ ಕಲಾವಿದರಿಗ ಸರಕಾರ ಗುರುತಿಸಿ ಗೌರವಿಸಬೇಕು ಮತ್ತು ಕಲಾವಿದರಿಗೆ ಮಾಶಾಸನ ಸರಳವಾಗಿ ದೊರಕುವಂತಾಗಿ ಕಲೆ ಬೆಳೆಯುವಲ್ಲಿ ಸಹಕರಿಸಬೇಕು ಎಂದು ಪೂಜ್ಯ ಗವಿಸಿದ್ದ ಸ್ವಾಮಿ ಜಾಕಪಲ್ಲಿ ಮಠ, ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕರಾದ ದೊಡ್ಡಕಿಷ್ಟಪ್ಪ ಪೂಜಾರ ವಹಿಸಿದ್ದರು. ಪ್ರಾಸ್ಥಾವಿಕವಾಗಿ ತಿಂಗಳ ಸಂಜೆ ಯುವ ವೇದಿಕೆಯ ಉಪಾದ್ಯಕ್ಷ ಸಿದ್ದಪ್ಪ ತಳವರ ಮಾತನಾಡಿದರು. ಸ್ವಾಗತವನ್ನು ಶಿವಲೀಲಾ ಶೇರಿ ಮತ್ತು ವಂದನೆಯನ್ನು ನವೀನರೆಡ್ಡಿ ಮಾಲಿ ಪಾಟೀಲ್ ನೆರವೇರಿಸಿದರು.
ವೇದಿಕೆಯ ಮೇಲೆ ದೊಡ್ಡಾಟದ ಭಾಗವತರಾದ ಸಿದ್ದಯ್ಯ ಸ್ವಾಮಿ ಮಠಪತಿ ಮತ್ತು ನಾಟಕ ಶಿಕ್ಷಕ ಅಶೋಕ ತೊಟ್ನಳ್ಳಿ ಇದ್ದರು. ಇದೇ ಸಂದರ್ಭದಲ್ಲಿ ನಾಟಕ ಮತ್ತು ದೊಡ್ಡಾಟದಲ್ಲಿ ಭಾಗವಹಿಸಿದ ಮಕ್ಕಳಿಗೆ ನೋಟಬುಕ್ ಮತ್ತು ನೀರಿನ ಬಾಟಲಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ನಂತರ ಶಾಲಾ ಮಕ್ಕಳ ದೊಡ್ಡಾಟ ಪ್ರದರ್ಶನವಾಯಿತು. ಗ್ರಾಮಸ್ಥರಾದ ನಾರಾಯಣರೆಡ್ಡಿ ಮಾಲಿ ಪಾಟೀಲ್, ಸಿದ್ದಣ್ಣ ವಿಶ್ವಕರ್ಮ, ಬಸವರಾಜ ಪಾಟೀಲ್, ರಮೇಶ ಚಿಟೇಲಿ ರಂಗಾರೆಡ್ಡಿ ಪಾಟೀಲ್, ಚಂದ್ರಾರೆಡ್ಡಿ ಚಿಟೇಲಿ, ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಅನಂತಪ್ಪ ಬಾವಿಕಡಿ, ಅಶೋಕರೆಡ್ಡಿ ರುದ್ರವಾರ ಹುಸೇನಪ್ಪ ಹಡಪದ, ಚಂದ್ರು ಬೇಡರ್ ಸೇರಿದಂತೆ ಗ್ರಾಮಸ್ಥರು ದೊಡ್ಡಾಟ ವಿಕ್ಷೀಸಿದರು.