ದೊಡ್ಡಮನಸ್ಸು ದೊಡ್ಡಸ್ಥಿಕೆ ಸದ್ಭಾವನೆಗಳು ಪಕ್ಷಕ್ಕೆಸ್ಪೂರ್ತಿ:ಶಾಸಕ ನಾಡಗೌಡ

ತಾಳಿಕೋಟೆ:ಜೂ.29: ಜನಪ್ರತಿನಿಧಿಗಳು ಸಾರ್ವಜನಿಕ ರಂಗದಲ್ಲಿ ಚುನಾವಣೆಯಲ್ಲಿ ಮತದಾರರಾಗಲಿ ಯಾವ ಪಕ್ಷದಿಂದ ಗುರುತಿಸಿಕೊಂಡವರಾಗಲಿ ಅದನ್ನು ಚುನಾವಣೆಯ ನಂತರ ಮರೆತು ಎಲ್ಲರೂ ಒಂದೇ ಭಾವನೆಯಿಂದ ನಡೆಯುವಂತಹ ಕಾರ್ಯವಾಗಬೇಕೆಂದು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ ಅವರು ಹೇಳಿದರು.

ಬುಧವಾರರಂದು ಪಟ್ಟಣದ ದಿ.ತಾಳಿಕೋಟಿ ಅಡತ್ ಮರ್ಚಂಟ್ ಅಸೋಶೇಷನ್ ವತಿಯಿಂದ ಹಾಗೂ ಗುಮಾಸ್ತರು ಮತ್ತು ಹಮಾಲರ ಸಂಘದ ವತಿಯಿಂದ ಏರ್ಪಡಿಸಲಾದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡುತ್ತಿದ್ದ ಅವರು 5 ವರ್ಷ ಹ್ಯಾಗೆ ಹೋಯಿತೋ ಹ್ಯಾಗೆ ಬಂತು ಎಂಬುದು ವಿಚಿತ್ರವೆನಿಸುತ್ತದೆ ಈಗಾಗಲೇ ಚುನಾವಣೆ ನಡೆದು 1 ತಿಂಗಳು 18 ದಿನವಾಯಿತು 5 ವರ್ಷ ಸಮಯದಲ್ಲಿ ಎಲ್ಲರೂ ಸಹಕಾರದಿಂದ ಒಟ್ಟುಕೂಡಿ ಸಮಾಜದ ಬಗ್ಗೆ ಚಿಂತನೆ ಮಾಡಿದಾಗ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದರು. ಈ ಕಾರಣದಿಂದ ನಿಮ್ಮ ಸಹಕಾರವನ್ನು ಅಪೇಕ್ಷೀಸುತ್ತೇನೆ ಮುದ್ದೇಬಿಹಾಳ ತಾಲೂಕಾ, ತಾಳಿಕೋಟೆ ತಾಲೂಕಾ ಈಗ ಹೊಸ ಸಮಸ್ಯೆಗಳು ಏಳುತ್ತವೆ ಹೋದ ವರ್ಷ ಯಾವ ಕಾರ್ಯವೂ ಆಗಿಲ್ಲಾ ಮುದ್ದೇಬಿಹಾಳದಲ್ಲಿ ಇದ್ದಂತಹ ಕಚೇರಿಗಳನ್ನು ಈ ತಾಲೂಕಿನಲ್ಲಿ ಮಾಡಲು ಪ್ರಯತ್ನಿಸುತ್ತೇನೆಂದರು. ಜೊತೆ ಜೊತೆಯಲ್ಲಿ ಶಿಕ್ಷಣ ಸಂಸ್ಥೆಯನ್ನು ಹೆಚ್ಚಿಸುವದು ನಿರೂಧ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಠಿಸುವ ಕಾರ್ಯ ಮಾಡಬೇಕಿದೆ ಈ ಕುರಿತು ತಾವೂ ಕೂಡಾ ಚರ್ಚೆಗೆ ಒಳಪಡಬೇಕಾಗುತ್ತದೆ ಎಂದರು. ನೀರಾವರಿ ಯೋಜನೆಗಳು ಇವತ್ತಿಗೂ ಪೂರ್ಣಗೊಂಡಿಲ್ಲಾ ನಾವು ಟೆಂಡರ್ ಕರೆದಿದ್ದ ಹೊಸ ಟೆಂಡರ್ ಕರೆದರು ಚಿಮ್ಮಲಗಿ, ಫೀರಾಪೂರ-ಬೂದಿಹಾಳ, ನಾಗರಬೆಟ್ಟ ಹತ್ತು ಹಲವಾರು ಸಮಸ್ಯಗಳು 7, 8 ವರ್ಷಗಳಿಂದ ಪೂರ್ಣಗೊಂಡಿಲ್ಲಾವೆಂದರು.

ಕೇವಲ ವದಂತಿಗಳಿಗೆ ಮಹತ್ವ ನೀಡದೇ ನಿಜವಾದಂತಹದ್ದನ್ನು ಅರೀತುಕೊಳ್ಳಬೇಕು ಪರಸ್ಪರ ಚರ್ಚೆಗೆ ಇಳಿದಾಗ ನನಗೆ ನಿಮ್ಮ ಸಲಹೆಯನ್ನು ಅರಿಯಲು ಅನುಕೂಲವಾಗುತ್ತದೆ ರಾಜಕೀಯ ವ್ಯವಸ್ಥೆ ಕೆಟ್ಟು ಹೋಗಿದೆ ಈ ಹಿಂದೆ ಜೆ.ಎಸ್.ದೇಶಮುಖ ಅವರು, ಗುಡದಿನ್ನಿ, ಕುಮಾರಗೌಡರು, ಬಿ.ಎಸ್.ಪಾಟೀಲ ಮತ್ತು ಗುರಡ್ಡಿಯವರನ್ನು ನೆನಿಸಿಕೊಳ್ಳುತ್ತೇನೆ ಅವಾಗಿನ ರಾಜಕಾರಣ ನಿಜವಾದಂತಹ ರಾಜಕಾರಣವಾಗಿತ್ತೆಂದರು. ಅಂತಹ ರಾಜಕಾರಣ ನಸಿಸಿಹೋಗಲು ಕಾರಣ ಕಾರ್ಯಕರ್ತರು, ಜನರು, ಕಾರಣೀಬೂತರಾಗಬೇಕಾಗುತ್ತದೆ ಚುನಾವಣೆ ಮುಗಿದ ನಂತರ ಪಕ್ಷದ ಸಿದ್ದಾಂತಗಳನ್ನು ಜೊತೆಗೆ ಕಾರ್ಯಕರ್ತರು ಮುಟ್ಟಿಸಲು ಮುಂದಾಗಬೇಕೆಂದರು. ರಾಜಕಾರಣದಲ್ಲಿ ಯಾರೂ ಲೇಬಲ್ ಹಂಚಿಕೊಂಡಿಲ್ಲಾ ದೊಡ್ಡ ಮನಸ್ಸು ದೊಡ್ಡಸ್ಥಿಕೆ ಸದ್ಭಾವನೆಗಳು ಪಕ್ಷಕ್ಕೆ ಸ್ಪೂರ್ತಿ ನೀಡುವ ಕಾರ್ಯ ಮಾಡುತ್ತವೆ ಎಂದರು. ಮಕ್ಕಳ ಭವಿಷ್ಯದ ಬಗ್ಗೆ ವಿಚಾರ ಮಾಡಬೇಕು ನನಗೂ ಕೂಡಾ ಇಂತಹ ಚಿಂತನೆ ಇವತ್ತಿಗೂ ಕಾಡುತ್ತಿದೆ ಕಾರಣ ಇಂತಹದ್ದನ್ನು ಮಾಡಬೇಕೆಂದರು. ಒಳ್ಳೆಯದಕ್ಕೆ ಒಳ್ಳೆಯದೇ ಇದೇ ಅಸತ್ಯಕ್ಕೆ ಅಸತ್ಯವೇ ದೊರೆಯಲಿದೆ ಸಮಾಜದಲ್ಲಿ ಪ್ರತಿಯೊಬ್ಬ ರೈತರು ನಿಮ್ಮ ಜೊತೆ ಸಂಬಂದ ಇಟ್ಟುಕೊಳ್ಳಲೇ ಬೇಕು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಕಾರ್ಯವಾಗಬೇಕು ಕೆಟ್ಟ ಕೆಲಸಕ್ಕೆ ಕೆಟ್ಟ ವಿಚಾರಕ್ಕೆ ತಾವೂ ಸಹಾಯಹಸ್ತ ಕಲ್ಪಿಸುವದು ಬೇಡಾವೆಂದು ಉಪಸ್ಥಿತ ವರ್ತಕರಿಗೆ ಕಿವಿಮಾತೇಳಿದ ಶಾಸಕರು ನಿಮ್ಮೇಲ್ಲರ ಆಸ್ತಿಯಾಗಿ ಮುದ್ದೇಬಿಹಾಳ, ತಾಳಿಕೋಟೆ ಎಪಿಎಂಸಿ ಯಾಗಿದೆ ನಾನೂ ಕೂಡಾ ನಿಮ್ಮ ದ್ವನಿಯಾಗಿ ಕೆಲಸ ಮಾಡುತ್ತೇನೆ ಸಾಮಾನ್ಯ ವ್ಯಕ್ತಿಯಾಗಿ ಕೆಲಸ ಮಾಡುತ್ತೇನೆ ನನ್ನ ತಪ್ಪು ತಡೆಗಳಾಗಿದ್ದರೆ ಅದನ್ನು ತಿದ್ದಿಕೊಂಡು ಕೆಲಸ ಮಾಡುತ್ತೇನೆ ಇಂದು ನಿವು ಕೊಟ್ಟಂತಹ ಗೌರವಕ್ಕೆ ಪ್ರಮಾಣದಿಂದ ಇರುತ್ತೇನೆಂದರು.

ನಿವೃತ್ತ ಶಿಕ್ಷಕ ಜಿ.ಎಸ್.ಜಮ್ಮಲದಿನ್ನಿ ಪ್ರಾಸ್ಥಾವಿಕ ಮಾತನಾಡಿ ಶಾಸಕ ನಾಡಗೌಡರ ಹುಟ್ಟು ಅವರ ರಾಜಕೀಯಲ್ಲಿ ಇಳಿದಿದ್ದರ ಕುರಿತು ಅವರು ಈ ಹಿಂದಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದರ ಕುರಿತು ಸುಮಾರು 6 ಭಾರಿ ಶಾಸಕ ಸ್ಥಾನ ಹೊಂದಿದ್ದರ ಕುರಿತು ಎಳೆ ಎಳೆಯಾಗಿ ಶಾಸಕ ನಾಡಗೌಡರ ಇತಿಹಾಸವನ್ನೇ ವಿವರಿಸಿದರು.

ಇದೇ ಸಮಯದಲ್ಲಿ ದಿ.ತಾಳಿಕೋಟಿ ಅಡತ್ ಮರ್ಚಂಟ್ ಅಸೋಶೇಷನ್ ವತಿಯಿಂದ ಹಾಗೂ ಗುಮಾಸ್ತರು ಮತ್ತು ಹಮಾಲರ ಸಂಘದ ವತಿಯಿಂದ ಹಾಗೂ ಶ್ರೀ ಸಾಯಿ ಸೇವಾ ಸಮಿತಿಯ ಪದಾಧಿಕಾರಿಗಳಿಂದ ಶಾಸಕ ನಾಡಗೌಡರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಮಯದಲ್ಲಿ ವೇದಿಕೆಯ ಮೇಲೆ ಅಡತ್ ಮರ್ಚಂಟ್ ಅಸೋಶೇಷನ್ ಉಪಾಧ್ಯಕ್ಷ ಅಶೋಕ ಶೆಟ್ಟಿ, ಕಾರ್ಯದರ್ಶಿ ಎಂ.ಎಸ್.ಸರಶೆಟ್ಟಿ, ಗಣ್ಯ ವ್ಯಾಪಾರಸ್ಥರಾದ ಈರಪ್ಪಣ್ಣ ಜಾಲವಾದಿ, ಹಾಗೂ ಕೆಪಿಸಿಸಿ ಸದಸ್ಯರಾದ ಬಿ.ಎಸ್.ಪಾಟೀಲ(ಯಾಳಗಿ), ಗಣ್ಯ ವರ್ತಕರಾದ ಬಾಬು ಹಜೇರಿ, ಸಿ.ಎಸ್.ಯಾಳಗಿ, ಅಶೋಕ ಜಾಲವಾದಿ, ವಿಶ್ವನಾಥ ಬಿದರಕುಂದಿ, ಬಸ್ಸು ಪಂಜಗಲ್ಲ, ಕಾಶಿನಾಥ ಮುರಾಳ, ಮಹೇಶ ದೇವಶೆಟ್ಟಿ, ಈರಣ್ಣ ಕಲ್ಬುರ್ಗಿ, ಆಯ್.ಬಿ.ಬಿಳೇಭಾವಿ, ನಾಗಪ್ಪ ಚಿನಗುಡಿ, ದತ್ತು ಹೆಬಸೂರ, ಪಾಲ್ಕಿ, ಶಿವಣ್ಣ ಸರೂರ, ಮಲ್ಲಣ್ಣ ಸಾಸನೂರ, ಬಸವರಾಜ ಕುಂಭಾರ, ಕಾಶಿನಾಥ ಸಜ್ಜನ, ಖಾಜಾಹುಸೇನ ಮುಲ್ಲಾ, ಮಹಾದೇವಪ್ಪ ಕುಂಭಾರ, ಶರಣಗೌಡ ಇಬ್ರಾಹಿಂಪೂರ, ಕೆ.ಎಂ.ಮಠ, ಮುದ್ನಾಳ, ಹಾಗೂ ಎಸ್.ಎನ್.ಪಾಟೀಲ, ಸಂಗನಗೌಡ ಅಸ್ಕಿ, ಹಾಗೂ ಸಾಯಿ ಸೇವಾ ಸಮಿತಿಯ ಗೌರವ ಅಧ್ಯಕ್ಷರಾದ ಡಾ.ಎನ್.ಎಲ್.ಶೆಟ್ಟಿ, ಅಧ್ಯಕ್ಷರಾದ ಬಸವರಾಜ ಮದರಕಲ್ಲ, ಉಪಾಧ್ಯಕ್ಷ ಎಂ.ಜಿ.ಪಾಟೀಲ, ಹಿರಿಯ ಸದಸ್ಯರಾದ ಜಿ.ಜಿ.ಕಾದಳ್ಳಿ, ಸಿ.ಬಿ.ತಿಳಗೂಳ, ಜಿ.ಟಿ.ಘೋರ್ಪಡೆ, ಮೊದಲಾದವರು ಉಪಸ್ಥಿತರಿದ್ದರು.

ಈರಯ್ಯ ಹಿರೇಮಠ ಪ್ರಾರ್ಥಿಸಿದರು. ಈರಣ್ಣ ಕಲ್ಬುರ್ಗಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.