ದೊಡ್ಡಬಿದರಕಲ್ಲು ವಾರ್ಡ್ನಲ್ಲಿ ಸ್ಯಾನಿಟೈಸೇಷನ್

ಬೆಂಗಳೂರು, ಮೇ ೧೪- ಯಶವಂತಪುರ ವಿಧಾನಸಭಾ ಕ್ಷೇತ್ರದ ದೊಡ್ಡಬಿದರಕಲ್ಲು ಬಿಬಿಎಂಪಿ ವಾರ್ಡ್ ನಂ ೪೦ ರಲ್ಲಿ ಸ್ಥಳೀಯ ಶಾಸಕ ಹಾಗೂ ಸಚಿವ ಎಸ್ ಟಿ ಸೋಮಶೇಖರ್ ಆದೇಶದ ಮೇರೆಗೆ ವಾರ್ಡ್ ಎಲ್ಲಾ ಗ್ರಾಮ ಮತ್ತು ಬಡಾವಣೆಗಳಲ್ಲಿ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ.
ಕೊರೋನಾ ಕೋವಿಡ್-೧೯ ರೋಗವು ವ್ಯಾಪಕವಾಗಿ ಹರಡುತ್ತಿರುವುದರಿಂದ ನಮ್ಮ ವಾರ್ಡಿನಲ್ಲಿ ಸ್ಯಾನಿಟೈಸೇಶನ್ ಮಾಡಲು ನಮ್ಮ ಸಚಿವರು ಆದೇಶಿಸಿರುತ್ತಾರೆ. ಹಾಗಾಗಿ ವಾರ್ಡ್ ನ ಚೆನ್ನ ನಾಯಕನ ಪಾಳ್ಯ ಮತ್ತು ಸುತ್ತಮುತ್ತಲಿನ ಬಡಾವಣೆಯ ಮುಖ್ಯ ರಸ್ತೆಗಳಲ್ಲಿ ಹಾಗೂ ಒಳ ರಸ್ತೆಗಳಲ್ಲಿ ಸ್ಯಾನಿಟೈಸೇಶನ ವೈರಾಣು ನಿವಾರಕ ದ್ರಾವಣವನ್ನು ಸಿಂಪಡಣೆ ಮಾಡಲಾಯಿತು ಎಂದು ವಾರ್ಡ್ ನ ಬಿಜೆಪಿ ಅಧ್ಯಕ್ಷ ಪ್ರಸಾದ್ ಐತಾಳ್ ತಿಳಿಸಿದ್ದಾರೆ.
ದೊಡ್ಡಬಿದರಕಲ್ಲು ವಾರ್ಡ್ ನಲ್ಲಿರುವ ಕೊಳಚೆ ಪ್ರದೇಶಗಳಲ್ಲಿ ಎರಡೆರಡು ಬಾರಿ ಸ್ಯಾನಿಟೈಸೇಷನ್ ಮಾಡಲಾಗಿದೆ.ಜೊತೆಗೆ ಮನೆ ಮನೆಗೆ ತೆರಳಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಲಾಗಿದೆ.