ದೊಡ್ಡಪ್ಪ ಅಪ್ಪ ವಸತಿ ವಿಜ್ಞಾನ ಕಾಲೇಜಿನಲ್ಲಿ”ವಿಜ್ಞಾನ ಉತ್ಸವ 2021″ ಉದ್ಘಾಟನೆ

ಕಲಬುರಗಿ:ನ.18:ದೊಡ್ಡಪ್ಪ ಅಪ್ಪ ವಸತಿ ಪದವಿ-ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪೂಜ್ಯ ಡಾ|| ಶರಣಬಸವಪ್ಪ ಅಪ್ಪ ಅವರ 87ನೇ, ಪೂಜ್ಯ ಡಾ|| ಮಾತೋಶ್ರೀ ದಾಕ್ಷಾಯಣಿ ಎಸ್ ಅಪ್ಪ್ ಅವರ 51ನೇ ಹಾಗೂ ಚಿ|| ದೊಡ್ಡಪ್ಪ್ ಅಪ್ಪ ಅವರ 5ನೇ ಹುಟ್ಟು ಹಬ್ಬ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ ”ವಿಜ್ಞಾನ ಉತ್ಸವ 2021”ರ ಅಂಗವಾಗಿ ಏರ್ಪಡಿಸಿದ ವಿಜ್ಞಾನ ವಸ್ತು ಪ್ರದರ್ಶನವನ್ನು “ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ” ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಅವರು ಉದ್ಘಾಟಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಅವರು ವಿಜ್ಞಾನ ವಸ್ತು ಪ್ರದರ್ಶನಗಳು ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಆಸಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಅವರಲ್ಲಿ ಪ್ರಾಯೋಗಿಕ ಜ್ಞಾನ ಮೂಡಿಸುತ್ತವೆ ಎಂದು ನುಡಿದರು.

ಡಾ|| ರಾಮಕೃಷ್ಣಾರೆಡ್ಡಿ ಅವರು ಮಾತನಾಡಿ ವಿದ್ಯಾರ್ಥಿಗಳು ವಿಜ್ಞಾನ ವಸ್ತು ಪ್ರದರ್ಶನದಿಂದ ವಿಷಯದ ಬಗ್ಗೆ ಸ್ವಂತ ಜ್ಞಾನವನ್ನು ಪಡೆದುಕೊಳ್ಳತ್ತಾರೆ ಎಂದು ನುಡಿದರು ಕಾಲೇಜಿನ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.