ದೊಡ್ಡಪ್ಪ ಅಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಅಪರಾಧ ತಡೆ ಮಾಸಾಚರಣೆ

ಕಲಬುರಗಿ,ಡಿ.21:ನಗರದ ದೊಡ್ಡಪ್ಪ ವಸತಿ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ರಾಘವೇಂದ್ರ ನಗರ ಪೊಲೀಸ್ ಠಾಣೆಯಿಂದ ವಿದ್ಯಾರ್ಥಿಗಳಲ್ಲಿ ಕಾನೂನಿನ ಅರಿವು ಮತ್ತು ನೆರವು ಜಾಗೃತಿ ಮೂಡಿಸುವ ಸಲುದೇಶದಿಂದ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಮಕ್ಕಳಿಗೆ ಅರಿವು ಮೂಡಿಸಲಾಯಿತು . ರಾಘವೇಂದ್ರ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಆಗಿರುವ ಕುಬೇರ ರಾಯಮಾನ ಅವರು ಮಾತನಾಡಿ ವಿದ್ಯಾರ್ಥಿಗಳು ವರ್ಷ 18 ಒಳಗಿನವರಾಗಿದ್ದರೆ ಯಾವುದೇ ಮೋಟಾರ್ ವೆಹಿಕಲ್ ಓಡಿಸುವಂತಿಲ್ಲ . ಹಾಗೊಂದು ವೇಳೆ ಓಡಿಸಿದರೆ ಅವರು ಓಡಿಸಿದ ವಾಹನ ಯಾರ ಹೆಸರಿನಲ್ಲಿದೆಯೋ ಅವರಿಗೆ ಕಾನೂನಾತ್ಮಕ ಶಿಕ್ಷೆಯಾಗುತ್ತದೆ . 25,000 ದಂಡ ಆರು ತಿಂಗಳ ಶಿಕ್ಷೆಗೆ ಅವಕಾಶವಿದೆ . ವಿದ್ಯಾರ್ಥಿಗಳು ಮಾಧಕ ಸೇವನೆಯ ಚಟಗಳಿಗೆ ಬಲಿಯಾಗಬಾರದು ಎಂದು ತಿಳುವಳಿಕೆ ನೀಡಿದರು .
ಸಹಾಯಕ ಸಬ್ ಇನ್ಸ್ಪೆಕ್ಟರ್ ಆಗಿರುವ ಸುಮಂಗಲ ರೆಡ್ಡಿ ಅವರು ಮಾತನಾಡಿ ಟ್ರಾಫಿಕ್ ಸಿಗ್ನಲ್ಗಳ ಬಗ್ಗೆ ಮಾಹಿತಿ ನೀಡಿದರು . ವಿದ್ಯಾರ್ಥಿಗಳು ಓದುವ ಈ ವಯಸ್ಸಿನಲ್ಲಿ ಚೆನ್ನಾಗಿ ಓದಿ ತಂದೆ ತಾಯಿಗಳಿಗೆ ಹೆಸರು ತರಬೇಕು . ವಿದ್ಯಾರ್ಥಿನಿಯರು ಯಾರದೋ ಬಣ್ಣದ ಮಾತುಗಳಿಗೆ ಮರುಳಾಗಿ ಮನೆಯಿಂದ ಹೊರಟು ಹೋಗಿ ತಂದೆ ತಾಯಿಗಳಿಗೆ ನೋವುಂಟು ಮಾಡಬಾರದು ಎಂದು ಕಿವಿಮಾತು ಹೇಳಿದರು .
ಕಾಲೇಜಿನ ಪ್ರಾಂಶುಪಾಲರಾದ ವಿನೋದ್ ಕುಮಾರ್ ಎಲ್ ಪತಂಗಿಯವರು ಅಧ್ಯಕ್ಷ ನುಡಿಗಳ ನಾಡಿದರು . ಡಾ. ಆನಂದ ಸಿದ್ದಾಮಣಿ ನಿರೂಪಿಸಿದರು .