ದೊಡ್ಡಪ್ಪ ಅಪ್ಪ ಕಾಲೇಜಿನಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ

ಕಲಬುರಗಿ:ಡಿ.23:ದೊಡ್ಡಪ್ಪ ಅಪ್ಪ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮಹಾ ವಿದ್ಯಾಲಯ ಕಲಬುರಗಿಯಲ್ಲಿ ಶ್ರೀನಿವಾಸ ರಾಮಾನುಜನ್ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಗಣಿತ ದಿನಚರಣೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ರಂಗನಾಥ್ ಡಿ (ಗಣಿತ ವಿಭಾಗ) ತಮ್ಮ ಅನಿಸಿಕೆಗಳಲ್ಲಿ ಗಣಿತವೆನ್ನುವುದು ಕಥೆಯಲ್ಲ ಅದೊಂದು ಬರವಣಿಗೆಯ ವಿಜ್ಞಾನವೆಂದು ತಿಳಿಸುವುದರು ಜೊತೆಗೆ ವೇದಿಕೆಯಲ್ಲಿರುವ ಮಕ್ಕಳಿಗೆ ಗಣಿತದ ಹಲವು ಸಮಸ್ಯೆಗಳನ್ನು ಮಕ್ಕಳಿಗೆ ಕೊಡುವುದರ ಮುಖಾಂತರ ತಮ್ಮ ಅನಿಸಿಕೆಗಳನ್ನು ಆರಂಭಿಸಿದರು. ಖ್ಯಾತ ಗಣಿತಜ್ಞರಾದ ಶ್ರೀನಿವಾಸನ್ ರಾಮಾನುಜನ್ ಗಣಿತ ಬಿಟ್ಟು ಬೇರೇನು ಬೇಡವಾಯಿತು ರಾಮಾನುಜನ್ ಅವರು ಎ??? ತರಗತಿಗೆ ಸೇರಿದಾಗ ಅವರಿಗೆ ಗಣಿತದ ಹೊರತಾಗಿ ಇನ್ಯಾವುದೇ ವಿಷಯಗಳ ಕುರಿತಾಗಿ ಕಿಂಚಿತ್ತು ಆಸಕ್ತಿ ಹುಟ್ಟಲಿಲ್ಲ . ಈ ನಿರಾಶಕ್ತಿ ಮತ್ತು ನಿರಂತರ ಅವರ ಜೊತೆಗೂಡಿದ್ದ ಅನಾರೋಗ್ಯಗಳು ಅವರ ಓದನ್ನು ಅಲ್ಲಿಗೆ ಮುಟಕುಗಳಿಸಿಬಿಟ್ಟವು. ಇದೇ ನೆಪವಾಗಿ ಅವರು ಯಾವಾಗಲೂ ಗಣಿತದಲ್ಲಿ ಮುಳುಗಿಬಿಟ್ಟರು. ಜೀವನದಲ್ಲಿ ಬಡತನ ನೋವು ಅನಾರೋಗ್ಯದ ಸಮಸ್ಯೆ ಹಾಗೂ ಅಪಾರವಾದ ತಾಳ್ಮೆ ಅತಿಯಾದ ಗಣಿತದ ಆಸಕ್ತಿ ಇರುವುದರಿಂದ ಇಷ್ಟೊಂದು ಎತ್ತರ ಮಟ್ಟಕ್ಕೆ ಏರಲು ಸಹಾಯಕವಾಯಿತು ಎಂದರು. ವಿದ್ಯಾರ್ಥಿ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಬಂದರೂ ರಾಮಾನುಜನ್ ಅವರ ಹಾಗೆ ಧೈರ್ಯ ಸಾಹಸದಿಂದ ಮುಂದೆ ಸಾಗಬೇಕೆಂದು ತಿಳಿಸಿದರು. ನಂತರ ಕಾಲೇಜಿನ ಪ್ರಾಚಾರ್ಯರು ವಿನೋದ್ ಕುಮಾರ್ ಎಲ್ ಪತಂಗೆ ಸರ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಗಣಿತ ವಿಭಾಗದ ಮುಖ್ಯಸ್ಥರಾದ ನಿತ್ಯಾನಂದ ಹತ್ತಿ ಸರ್ ಅವರು ಉಪಸ್ಥಿತರಿದ್ದರು. ರಾಷ್ಟ್ರೀಯ ಗಣಿತ ದಿನದ ಅಂಗವಾಗಿ ಕ್ವಿಜ್ ಚಿತ್ರಕಲೆ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು ಈ ಸ್ಪರ್ಧೆಯಲ್ಲಿ ಭುವನ್ ನವಮಿ ಪ್ರಥಮ ಸ್ಥಾನ ಲಕ್ಷ್ಮಿಕಾಂತ್ ಬಸಂತ್ ರೆಡ್ಡಿ ದ್ವಿತೀಯ ಸ್ಥಾನ ಶರಣಬಸವ ಶ್ರದ್ಧಾ ತೃತಿಯ ಸ್ಥಾನ. ಚಿತ್ರಕಲಾ ಸ್ಪರ್ಧೆಯಲ್ಲಿ ಅಭಿನವ ಪ್ರಥಮ ಸೋನಾಕ್ಷಿ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.ಕಾರ್ಯಕ್ರಮವನ್ನು ಕುಮಾರಿ ಪಲ್ಲವಿ ಸಂಗಡಿಗರು ಪ್ರಾರ್ಥನ ಗೀತೆಯೊಂದಿಗೆ ಆರಂಭಿಸಿ ಗಣೇಶ್ ಪ್ರಾಜೆಕ್ತ ನಿರೂಪಿಸಿದರು ಕುಮಾರಿ ವೈಷ್ಣವಿ ಎಂ ಕುಮಾರಿ ಕಲ್ಯಾಣಿ ಬಿ ಕುಮಾರಿ ಅನಿತಾ ಎಸ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು ಕುಮಾರ್ ದೇವಿದಾಸ್ ವಂದಿಸಿದರು ಕಾರ್ಯಕ್ರಮದಲ್ಲಿ ಸಿಬ್ಬಂದಿ ವರ್ಗ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ಸುಗಳಿಸಿದರು.