
ಕಲಬುರಗಿ,ಆ 11: ನಗರದ ದೊಡ್ಡಪ್ಪ ಅಪ್ಪ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಸೈನ್ಸ್ ಅಕಾಡೆಮಿ ಕಾರ್ಯಕ್ರಮದಲ್ಲಿ2022-23ನೇ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿದ
ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಈಶಾನ್ಯ ವಲಯದ ಡಿಐಜಿ ಅನುಪಮ್ ಅಗರ್ವಾಲ್ ಅವರು ಮಾತನಾಡಿ,ಪ್ರತಿಯೊಬ್ಬ ವಿದ್ಯಾರ್ಥಿಯುಜೀವನದಲ್ಲಿ ನಿಖರವಾದ ನಿರ್ದಿಷ್ಟವಾದ ಒಂದು ಗುರಿಯನ್ನು ಹೊಂದಿರಬೇಕು. ವಿದ್ಯಾರ್ಥಿ ಜೀವನದಲ್ಲಿ ಹತ್ತು ವರ್ಷ ಶ್ರಮ ಪಟ್ಟಾಗ ಭವಿಷ್ಯದ 70 ವಸಂತಗಳನ್ನು ಸುಖಕರವಾಗಿ ಸಾಗಿಸಲು ಸಾಧ್ಯ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ತಾಳ್ಮೆ ಆಸಕ್ತಿ ದೃಢವಾದನಿರ್ಧಾರ ಕಠಿಣ ಪರಿಶ್ರಮದಿಂದ ಎಂತಹ ಕಷ್ಟವನ್ನು ಕೂಡ ದೂರ ಮಾಡಿ ಸಾಧನಯೆಡೆಗೆ ಸಾಗಲು ಸಾಧ್ಯವೆಂದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ
ಕಾರ್ಯದರ್ಶಿ ಬಸವರಾಜ್ ದೇಶಮುಖ್ ಅವರು ಮಾತನಾಡಿ, ಶರಣಬಸವೇಶ್ವರವಿದ್ಯಾವರ್ಧಕ ಸಂಘ ಸುಮಾರು 100 ವರ್ಷಗಳಿಂದ ವಿದ್ಯಾದಾನ ಅನ್ನದಾನ ಬಡ ನಿರ್ಗತಿಗರಿಗೆ ಆಸರೆ ಕೊಡುವುದರ
ಮುಖಾಂತರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಈ ಸಮಾಜಕ್ಕೆ ಕೊಡುಗೆಯಾಗಿ ನೀಡಿದಂತಹ ಸಂಸ್ಥೆ ಎಂದರು.ಶರಣಬಸವೇಶ್ವರ ಕಾಲೇಜಿನ ಪ್ರಾಚಾರ್ಯ ದೊಡ್ಡಪ್ಪ ಅಪ್ಪ ಕಾಲೇಜಿನ ನಿರ್ದೇಶಕ ಡಾ. ರಾಮಕೃಷ್ಣ ರೆಡ್ಡಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳಾದ ನಾಗೇಶ್ ಕಲ್ ಶೆಟ್ಟಿ ,ಆದಿತ್ಯ ನಾಗೂರ್, ಭೂಮಿಕ ವಿಠ್ಠಲ್‍ರಿಗೆ ಗೌರವಿಸಲಾಯಿತು.ದೊಡ್ಡಪ್ಪ ಅಪ್ಪ ಕಾಲೇಜಿನಪ್ರಾಚಾರ್ಯ ವಿನೋದ್ ಕುಮಾರ್ ಎಲ್ ಪತಂಗೆ ಉಪಸ್ಥಿತರಿದ್ದರು. ಡಾ.ಆನಂದ್ ಸಿದ್ಧಮಣಿಹಾಗೂ ಭಾಗ್ಯವತಿ ನಿರೂಪಿಸಿದರು.ಸಂತೋಷ್ ಬೋರಟಿ ಸ್ವಾಗತಿಸಿದರು.ನಿತೇಶ್ ಮೋದಿ ವಂದಿಸಿದರು.ಕಾರ್ಯಕ್ರಮದಲ್ಲಿ ಎಲ್ಲ ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದರು.