ಕಲಬುರಗಿ:ಸೆ.24:ನಗರದ ದೊಡ್ಡಪ್ಪ ಅಪ್ಪಾ ವಸತಿ ಸ್ವತಂತ್ರ ಪದವಿ-ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಹಿಂದಿ ದಿವಸ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಿರನೂರ (ಜಿ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂದಿ ಶಿಕ್ಷಕರಾದ ಶ್ರೀ. ಹನಮಂತರಾವ ಬಿರಾಜದಾರ ಅವರು ಹಿಂದಿ ಭಾಷೆಯ ಮಹತ್ವದ ಬಗ್ಗೆ ತಮ್ಮ ನಿಲುವನ್ನು ವ್ಯಕ್ತಪಡಿಸಿದರು. ಹಿಂದಿ ಭಾಷೆಯ ಮಹತ್ವವದ ಬಗ್ಗೆ ವಿವರಿಸುತ್ತಾ ಹೀಗೆ ಹೇಳಿದರು ಹಿಂದಿ ಭಾಷೆಯು ಭಾರತದಲಲ್ಲದೆ ವಿದೇಶದಲ್ಲಿಯು ಹಿಂದಿ ಭಾಷೆಯ ತನ್ನದೆ ಆದ ಸ್ಥಾನಮಾನವನ್ನು ಹೊಂದಿದೆ ಹಾಗೂ ತ್ರಿಭಾಷೆ ಸೂತ್ರದ ಮಹತ್ವದ ಬಗ್ಗೆ ಅವರು ವಿವರಿಸಿದರು. ಪ್ರಾಂತಿಯಭಾಷೆ, ರಾಷ್ಟೀಯಭಾಷೆ, ಅಂತರಾಷ್ಟೀಯ ಭಾಷೆ ಮೂರು ಭಾಷೆಗಳ ಮಹತ್ವವನ್ನು ವಿಸ್ತಾರವಾಗಿ ಅವರು ನುಡಿದರು.
ವಿದ್ಯಾರ್ಥಿಗಳಾದ ಕುಮಾರ.ಸಮರ್ಥ, ಕುಮಾರಿ.ಮಯೂರಿ ಅವರು ಹಿಂದಿ ಭಾಷೆಯ ಮಹತ್ವದ ಬಗ್ಗೆ ತಮ್ಮ ವಿಚಾರ ವ್ಯೆಕ್ತ ಪಡಿಸಿದರು ಹಾಗೂ ಕಾಲೇಜಿನ ನಿರ್ದೇಶಕರಾದ ಡಾ|| ರಾಮಕೃಷ್ಣ ರೆಡ್ಡಿ ಅವರಿ ಹಿಂದಿ ಭಾಷೆಯ ಮಹತ್ವದ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕದತಪಡಿಸಿದರು. ಮತ್ತು ಕಾಲೇಜಿನ ಪ್ರಾಚಾರ್ಯರಾದ ಶ್ರೀ. ವಿನೋದಕುಮಾರ ಎಲ್ ಪತಂಗೆ ಅಧ್ಯಕ್ಷಸ್ಥಾನ ವಹಿಸಿ ಹಿಂದಿ ಭಾಷೆ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾಲೇಜಿನ ಹಿಂದಿ ಉಪನ್ಯಾಸಕರಾದ ಡಾ|| ವಿಜಯಲಕ್ಷ್ಮೀ ಧೂಮಾಳೆಯವರು ತಮ್ಮದೆ ಆದ ಸ್ವರಚಿತ ಕವನವನ್ನು ಓದಿ ಹಿಂದಿ ಭಾಷೆಯ ಬಗ್ಗೆ ತಮ್ಮ ಗೌರವವನ್ನು ವ್ಯಕ್ತ ಪಡಿಸಿದರು. ಅದೆ ರೀತಿಯಾಗಿ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕುಮಾರ. ಹರ್ಷಿತಾ ಮತ್ತು ಸ್ನೇಹಾ ಪ್ರಾರ್ಥನಾಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಕುಮಾರಿ. ರಮ್ಯಾ ಸ್ವಾಗತಿಸಿದರೆ, ಕುಮಾರಿ. ಜಿನಲ್ ಪಟೇಲ, ವರ್ಷಾ, ಫಯಾಜ ಕಾರ್ಯಕ್ರಮ ನಿರೂಪಿಸಿದರೆ, ಕುಮಾರ. ಜಬೀನ ವಂದನಾರ್ಪಣೆ ಮಾಡಿದರು. ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.