ದೊಡ್ಡಪತ್ರೆ ಬೋಂಡಾ

ಬೇಕಾಗುವ ಪದಾರ್ಥಗಳು
ದೊಡ್ಡಪತ್ರೆ ಎಲೆಗಳು 15 ರಿಂದ 20
ಈರುಳ್ಳಿ 2 ರಿಂದ 3
ಕಡಲೆ ಹಿಟ್ಟು 1 ಬಟ್ಟಲು
ಮೈದಾ ಹಿಟ್ಟು ಕಾಲು ಬಟ್ಟಲು
ಅಕ್ಕಿ ಹಿಟ್ಟು ಕಾಲು ಬಟ್ಟಲು
ಮೊಸರು ಅರ್ಧ ಬಟ್ಟಲು
ಖಾರದ ಪುಡಿ 1 ಚಮಚ
ಕೊತ್ತಂಬರಿ ಮತ್ತು ಕರಿಬೇವು
ಜೀರಿಗೆ, ಇಂಗು, ಅರಿಷಿಣ, ತಿನ್ನುವ ಸೋಡಾ, ಉಪ್ಪು, ಕರಿಯಲು ಎಣ್ಣೆ
ಮಾಡುವ ವಿಧಾನ
ದೊಡ್ಡಪತ್ರೆ ಎಲೆಗಳನ್ನು ನೀರಿನಲ್ಲಿ ತೊಳೆದಿಟ್ಟುಕೊಳ್ಳಿ. ಈರುಳ್ಳಿಗಳನ್ನು ಉದ್ದುದ್ದಕ್ಕೆ ಹೆಚ್ಚಿ ಒಂದು ತಟ್ಟೆಯಲ್ಲಿ ತೆಗೆದಿಟ್ಟುಕೊಳ್ಳಿ. ನಂತರ ಕಡಲೆ, ಮೈದಾ ಮತ್ತು ಅಕ್ಕಿ ಹಿಟ್ಟುಗಳನ್ನು ಸೇರಿಸಿ ಅದಕ್ಕೆ ಚಿಟಿಕೆಯಷ್ಟು ಜೀರಿಗೆ, ಇಂಗು, ಅರಿಷಿಣ, ತಿನ್ನುವ ಸೋಡಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಅದಕ್ಕೆ ನೀರು ಹಾಕಿ ತೀರಾ ಅಳ್ಳಕಾಗದ ಹಾಗೆ ಕಲಿಸಿಟ್ಟುಕೊಳ್ಳಿ. ಈ ಮಿಶ್ರಣಕ್ಕೆ ಹೆಚ್ಚಿಟ್ಟುಕೊಂಡ ಈರುಳ್ಳಿಯನ್ನೂ ಬೆರೆಸಿರಿ.
ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಕುದಿಯಲು ಬಿಟ್ಟು, ಕುದಿಬಂದ ನಂತರ ದೊಡ್ಡಪತ್ರೆ ಎಲೆಗಳನ್ನು ಹಿಟ್ಟಿನ ಮಿಶ್ರಣದಲ್ಲಿ ಒಂದೊಂದಾಗಿ ಅದ್ದಿ ಕರಿಯಿರಿ. ಕಂದುಬಣ್ಣಕ್ಕೆ ಬಂದ ನಂತರ ಎಣ್ಣೆಯನ್ನು ಸೋಸಿ ಬಿಸಿಯಿರುವಂತೆಯೇ ಕಾಫಿ ಅಥವಾ ಚಹಾದೊಂದಿಗೆ ಸೇವಿಸಿ.