ದೊಡ್ಡಣ್ಣನ ಪಟ್ಟಕ್ಕಾಗಿ ಟ್ರಂಪ್-ಬಿಡೆನ್ ಪೈಪೋಟಿ

ವಾಷಿಂಗ್ಟನ್, ನ. ೨- ಅಮೆರಿಕದ ೪೬ನೇ ಅಧ್ಯಕ್ಷರ ಆಯ್ಕೆಗೆ ಇನ್ನೊಂದು ದಿನ ಮಾತ್ರ ಬಾಕಿ ಉಳಿದಿದ್ದು ಡೊನಾಲ್ಡ್ ಟ್ರಂಪ್ ಮತ್ತು ಜೋ ಬಿಡೆನ್ ಇಬ್ಬರಲ್ಲಿ ಯಾರು ವಿಶ್ವದ ದೊಡ್ಡ ಪಟ್ಟ ಅಲಂಕರಿಸಲಿದ್ದಾರೆ ಎನ್ನುವುದು ಕುತೂಹಲ ಕೆರಳಿಸಿದೆ.

ಅಮೆರಿಕದ ೫೦ ರಾಜ್ಯಗಳಲ್ಲಿ ತಮ್ಮ ಮುಂದಿನ ಅಧ್ಯಕ್ಷರನ್ನು ಅಲ್ಲಿನ ಮತದಾರರು ನಾಳೆ ಆಯ್ಕೆ ಮಾಡಲಿದ್ದಾರೆ ಇದಕ್ಕಾಗಿ ಮತದಾನಕ್ಕೆ ಸಿದ್ಧತೆಗಳು ನಡೆದಿವೆ.

ಹಾಲಿ ಅಧ್ಯಕ್ಷ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಎರಡನೇ ಬಾರಿಗೆ ಅಧ್ಯಕ್ಷರಾಗುವ ಉತ್ಸಾಹದಲ್ಲಿದ್ದಾರೆ.

ಮಾಜಿ ಉಪಾಧ್ಯಕ್ಷ ಹಾಗೂ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಅವರು ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರಾಗಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ರಿಪಬ್ಲಿಕನ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಪೈಕ್ ಪೆನ್ಸ್, ಡೆಮಾಕ್ರಟಿಕ್ ಪಕ್ಷದಿಂದ ಭಾರತ ಮೂಲದ ಕಮಲಾ ಹ್ಯಾರೀಸ್ ಉಪಾಧ್ಯಕ್ಷ ಕಣದಲ್ಲಿದ್ದಾರೆ.

ಹಾಲಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ೧೯೪೬ ರ ಜೂನ್ ೧೪ ರಂದು ಜನಿಸಿದ್ದು ಅಮೆರಿಕದಲ್ಲಿ ಅತಿದೊಡ್ಡ ರಿಯಲ್ ಎಸ್ಟೇಟ್ ಉದ್ಯಮ ಹೊಂದಿದ್ದಾರೆ.

ಅವರದೇ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಮೈಕ್ ಫೆನ್ಸ್, ಇಂಡಿಯಾನಾ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸುವ ಜೊತೆಗೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ ಆರು ಬಾರಿ ಸೇವೆ ಸಲ್ಲಿಸಿದ್ದಾರೆ

ಜೋ ಬಿಡೆನ್:

ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಅವರು ೧೯೪೨ ರ ನವೆಂಬರ್ ೨೦ ರಂದು ಜನಿಸಿದ್ದು ಬಾರಕ್ ಒಬಾಮ ಅವರು ಅಮೆರಿಕ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ೨೦೦೯-೨೦೧೭ ರ ವರೆಗೆ ಎಂಟು ವರ್ಷಗಳ ಕಾಲ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

೨೯ನೇ ವಯಸ್ಸಿಗೆ ಸೆನೆಟ್ ಸದಸ್ಯರಾಗಿ ಆಯ್ಕೆಯಾದ ಬಿಡೆನ್ ಅವರು ೬ ಬಾರಿ ಆಯ್ಕೆಯಾಗಿದ್ದಾರೆ.

ಇನ್ನೂ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರೀಸ್ ಅವರು, ಕ್ಯಾಲಿಫೋರ್ನಿಯಾದ ಮಾಜಿ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ ಅಲ್ಲದೆ ಕ್ಯಾಲಿಫೋರ್ನಿಯಾದಿಂದ ಜೂನಿಯರ್ ಸೆನೆಟರ್ ಆಗಿ ಆಯ್ಕೆಯಾಗಿ ಆನಂತರ ಎರಡು ಬಾರಿ ಸೆನೆಟರ್ ಹುದ್ದೆ ಅಲಂಕರಿಸಿದ್ದರು.

ಅಧ್ಯಕ್ಷರ ಆಯ್ಕೆ ಪ್ರತಿಕ್ರಿಯೆ ಹೇಗೆ?

ಅಮೆರಿಕದ ಸಂವಿಧಾನದ ಪ್ರಕಾರ ಎಲೆಕ್ಟ್ರೋರಲ್ ಕಾಲೇಜಿನ ೫೩೮ ಸದಸ್ಯರು ಅಥವಾ ಪಕ್ಷಗಳ ನಾಮನಿರ್ದೇಶನ ಮಾಡಿದವರು ಮತಚಲಾಯಿಸಲು ಅರ್ಹತೆ ಹೊಂದಿದ್ದಾರೆ. ಅಮೆರಿಕದ ೫೦ ರಾಜ್ಯಗಳಲ್ಲಿ ಅಧ್ಯಕ್ಷೀಯ ಅಭ್ಯರ್ಥಿಗಳ ಪೈಕಿ ಯಾರು ಹೆಚ್ಚು ಮತಗಳನ್ನು ಪಡೆಯುತ್ತಾರೆ ಅವರ ಕಡೆ ಎಲೆಕ್ಟ್ರಾಲ್ ಕಾಲೇಜಿನ ಸದಸ್ಯರು ಮತ ಚಲಾಯಿಸುತ್ತಾರೆ.

೨೦೧೬ರಲ್ಲಿ ಹಿಲರಿ ಕ್ಲಿಂಟನ್ ಅವರು ೩೦ಲಕ್ಷ ಪಾಪುಲರ್ ವೋಟ್ ಮೂಲಕ ಜಯಗಳಿಸಿದ್ದರು ಆದರೆ ಅವರು ಅತಿಹೆಚ್ಚಿನ ಎಲೆಕ್ಟ್ರೋಲ್ ಮತ ಪಡೆದ ಹಿನ್ನೆಲೆಯಲ್ಲಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆಮಾಡಲಾಗಿತ್ತು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಈಗಾಗಲೇ ಮೂರನೇ ಒಂದು ಭಾಗದಷ್ಟು ಅಮೆರಿಕದ ಜನರು ಕೊರೋನಾ ಸೋಂಕಿನಿಂದಾಗಿ ಮತಪತ್ರ ಇಲ್ಲವೇ ಇಮೇಲ್ ಮೂಲಕ ಮತ ಚಲಾವಣೆ ಮಾಡಿದ್ದಾರೆ.

ಇದೇ ವೇಳೆ ಅಮೆರಿಕದ ಮತದಾರರು ೪೩೫ ಸದಸ್ಯ ಬಲದ ರೆಪ್ರೆಸೆಂಟೇಟಿವ್ ಪ್ರತಿನಿಧಿಗಳ ಆಯ್ಕೆಗೂ ಮತ ಚಲಾಯಿಸಲಿದ್ದಾರೆ. ೩೩ ಸೆಲೆಕ್ಟ್ ನಂಬರ್ಗಳು ೧೧ ರಾಜ್ಯಪಾಲರು ೮೬ ಲೆಜಿಸ್ಲೇಟಿವ್ ಚೇಂಬರ್ಸ್ ಆಯ್ಕೆಗೆ ಮತದಾನ ನಾಳೆ ನಡೆಯಲಿದೆ.

೧೪ ಬಿಲಿಯನ್ ಡಾಲರ್ ವೆಚ್ಚ

ಈ ಬಾರಿಯ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ದಾಖಲೆಯ ೧೪ ಶತಕೋಟಿ ಡಾಲರ್ ಖರ್ಚಾಗಿದೆ ಎಂದು ಅಂದಾಜು ಮಾಡಲಾಗಿದೆ.

ರಿಪಬ್ಲಿಕನ್ ಮತ್ತು ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಗಳು ಮತ್ತು ಪಕ್ಷಗಳು ರಾಜ್ಯ ಸರ್ಕಾರಗಳು ವೆಚ್ಚ ಮಾಡುವೆ ಎಂದು ಮೂಲಗಳು ತಿಳಿಸಿವೆ.

ಜೋ ಬೀಡೆನ್ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ವಾಗುತ್ತಿದ್ದಂತೆ ಒಂದು ಶತಕೋಟಿಗೂ ಅಧಿಕಾರಿಗಳಿಗೆ ಬಂದಿದ್ದು ಇದುವರೆಗಿನ ದಾಖಲೆಯಾಗಿದೆ.

ನಾಳೆ ಮತದಾನ

ಅಮೆರಿಕದ ೪೬ನೇ ಅಧ್ಯಕ್ಷ ಸ್ಥಾನಕ್ಕಾಗಿ ನಾಳೆ ಮತದಾನ ನಡೆಯಲಿದ್ದು ಜನವರಿ ೨೦ರಂದು ಮುಂದಿನ ಅಧ್ಯಕ್ಷರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುವುದು.

ಡೊನಾಲ್ಡ್ ಟ್ರಂಪ್ ಹಾಗೂ ಜೋ ಬೀಡೆನ್ ಇಬ್ಬರಲ್ಲಿ ಯಾರು ಅಧ್ಯಕ್ಷರಾಗಲಿದ್ದಾರೆ ಎನ್ನುವುದು ಸದ್ಯಕ್ಕಿರುವ ತೀವ್ರ ಕುತೂಹಲ.