ದೈಹಿಕ ಹಾಗು ಮಾನಸಿಕ ಸಬಲತೆಗೆ ಕ್ರೀಡೆಗಳು ಅತ್ಯವಶ್ಯಕ : ಮಜಹರ ಹುಸೇನ

ಭಾಲ್ಕಿ:ಆ.11: ವಿದ್ಯಾರ್ಥಿಗಳ ದೈಹಿಕ ಹಾಗು ಮಾನಸಿಕ ಸಬಲತೆಗೆ ಕ್ರೀಡೆಗಳು ಅತ್ಯವಶ್ಯಕವಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಜಹರ ಹುಸೇನ ಹೇಳಿದರು.
ತಾಲೂಕಿನ ಕಲವಾಡಿ ಗ್ರಾಮದ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಗುರುವಾರ ನಡೆದ 2023-24ನೇ ಸಾಲಿನ ಖಟಕ ಚಿಂಚೋಳಿ ವಲಯ ಮಟ್ಟದ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ದೈಹಿಕ ಶಿಕ್ಷಕರು ಬೆಲ್ಲದಂತೆ, ವಿದ್ಯಾರ್ಥಿಗಳು ಜೇನುನೊಣದಂತೆ, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ದೈಹಿಕ ಶಿಕ್ಷಕರ ಪಾತ್ರ ಅಡಗಿದೆ. ದೈಹಿಕ ಶಿಕ್ಷಕರೆಲ್ಲರೂ ಕಾಳಜಿಯಿಂದ ಆಟವಾಡಿಸಿ, ನಿಜವಾದ ಪ್ರತಿಭೆಗಳನ್ನು ಗುರುತಿಸಬೇಕು. ನಮ್ಮ ದೈಹಿಕ ಶಿಕ್ಷಕರ ಸರಿಯಾದ ನಿರ್ಣಯದ ಪರಿಣಾಮ ಕಳೆದ ಸಾಲಿನಲ್ಲಿ ನಮ್ಮ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಯಿತು. ಈ ಸಲವೂ ಹೊಬಳಿ ಮಟ್ಟದಲ್ಲಿ ಉತ್ತಮವಾಗಿ ಆಟವಾಡುವ ವಿದ್ಯಾರ್ಥಿಗಳನ್ನು ಗುರುತಿಸಿ ತಾಲೂಕು ಮಟ್ಟಕ್ಕೆ ಆಯ್ಕೆಮಾಡುವ ಪ್ರಕ್ರಿಯೆ ನಡೆಯಬೇಕು. ಸೋಲು, ಗೆಲುವು ಇದ್ದದ್ದೇ, ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದ ಆಟವಾಡಬೇಕು. ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಪ್ರತಿಭೆಗಳನ್ನು ಗುರತಿಸುವ ಕಾರ್ಯವಾಗಬೇಕು ಎಂದು ದೈಹಿಕ ಶಿಕ್ಷಕರಿಗೆ ಸಲಹೆ ನಿಡಿದರು.
ಕೆ.ಎಲ್.ಇ ಸಂಸ್ಥೆಯ ಆಡಳಿತಾಧಿಕಾರಿ ಕ್ರಾಂತಿ ಬಸಪ್ಪಾ ಕಲವಾಡಿಕರ ಕ್ರೀಡಾ ಪಟುಗಳಿಗೆ ಪ್ರೊತ್ಸಾಹದಾಯಕ ಮಾತುಗಳನ್ನಾಡಿದರು. ಕೆಎಲ್‍ಇ ಸಂಸ್ಥೆಯ ಅಧ್ಯಕ್ಷೆ ಮೋಜಾಬಾಯಿ ಕಲವಾಡಿಕರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಕಿರಣಕುಮಾರ ಭಾಟಸಾಂಗವೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ ಹೊಳಕರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದೇರ್ಶಕ ಸತೀಶಕುಮಾರ ಸಂಗನ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರೋಹಿದಾಸ ರಾಠೋಡ, ಇಸಿಓ ಸಹದೇವ ಗೌಡಗಾವೆ, ಗ್ರಾ.ಪಂ. ಅಧ್ಯಕ್ಷ ಪ್ರಶಾಂತ ಮಾಳಗೆ, ಕೆಎಲ್‍ಇ ಸಂಸ್ಥೆಯ ಸದಸ್ಯ ಹಣಮಂತಪ್ಪ ಕಲವಾಡಿಕರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜೆಪ್ಪ ಪಾಟೀಲ, ಪ್ರೌಢಶಾಲಾ ಮುಖ್ಯಗುರುಳ ಸಂಘದ ಅಧ್ಯಕ್ಷ ರಾಜಕುಮಾರ ಜೊಳದಪಕೆ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ದತ್ತು ಕಾಟಕರ, ನಿವೃತ್ತ ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ, ಸರ್ಕಾರಿ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ ಬಿರಾದಾರ, ದೈಹಿಕ ಶಿಕ್ಷಕರ ಸಂಘದ ನಾಗನಾಥ ದುಬಲಗುಂಡೆ, ಸುಭಾಷ ಇಟಗೆ, ಸೂರ್ಯಕಾಂತ ಮಾಳಗೆ, ವಿಜಯಕುಮಾರ ಚಹ್ವಾಣ, ಅನುದಾನಿತ ಪ್ರಾ.ಶಿ.ಸಂಘದ ಅಧ್ಯಕ್ಷ ಗೋವಿಂದರಾವ ಬಿರಾದಾರ, ಕಲವಾಡಿ ಸಿಆರ್‍ಪಿ ಸಂತೋಷ ಧಬಾಲೆ, ವಿವಿಧ ಕ್ಲಸ್ಟರ್‍ನ ಸಿಆರ್‍ಪಿಗಳಾದ ಅಶೋಕ ಕಲ್ಯಾಣೆ, ಚನ್ನಪ್ಪ, ಸುಭಾಷ ಮೂಲಗೆ, ಚಂದ್ರಕಾಂತ ತಳವಾಡೆ, ಪ್ರಮುಖರಾದ ದೇವಿದಾಸ ಮೇತ್ರೆ, ಹಣಮಂತ ಕಾರಾಮುಂಗೆ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಕಾರ್ಯದರ್ಶಿ ಬಾಲಾಜಿ ಕಾಂಬಳೆ, ಆನಂದ ಖಂಡಗೊಂಡ, ಆರತಿ ಥಮಕೆ, ಶಿವಶರಣಪ್ಪ ಸೊನಾಳೆ, ಪ್ರವೀಣ ಸಿಂಧೆ, ಪುಸ್ಪಾವತಿ ಚಕುರ್ತೆ, ಶಾಂತಾ.ಎಮ್.ಸಜ್ಜನ್, ವಿಜಯಕುಮಾರ ಬಾಜೋಳಗಾ, ಶಿವಕುಮಾರ ವಾಡಿಕರ, ಓಂ.ಝೆಡ್ ಬಿರಾದಾರ, ಪ್ರದೀಪ ಜೊಳದಪಕೆ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಶಿವಮಂಗಲಾ