ದೈಹಿಕ ಸಾಮಥ್ರ್ಯದಿಂದ ಮಾನಸಿಕ ವಿಕಾಸ: ಧೋಂಡಿರಾಮ ಚಾಂದಿವಾಲೆ

ಬೀದರ್: ಜ.19:ದೈಹಿಕ ಸಾಮಥ್ರ್ಯದಿಂದ ಮಾನಸಿಕ ವಿಕಾಸ ಸಾಧ್ಯವಿದ್ದು ನಿತ್ಯ ಮಿತ ಆಹಾರ ಹಾಗೂ ಯೋಗಾಸನಗಳು ಅಗತ್ಯವಿದೆ ಎಂದು ಯೋಗ ಶಿಕ್ಷಕ ಧೋಂಡಿರಾಮ ಚಾಂದಿವಾಲೆ ತಿಳಿಸಿದರು.

ಬುಧವಾರ ಚಿಟಗುಪ್ಪ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನೆಹರು ಯುವ ಕೇಂದ್ರ ಬೀದರ್, ಸ್ವಾಮಿ ವಿವೇಕಾನಂದ ಯುವಶಕ್ತಿ ಕೇಂದ್ರ ಕಾಳಸರತುಗಾಂವ, ಭಾರತ ಯುತ್ ವೆಲಫೇರ್ ಏಜ್ಯುಕೇಶನ್ ಐಂಡ್ ರೂರಲ್ ಡೆವಲಪಮೆಂಟ್ ಸೂಸೈಟಿ, ಜಗದ್ಗುರು ಪಂಚಾಚಾರ್ಯ ಏಜ್ಯುಕೇಶನ್ ಐಂಡ್ ರೂರಲ್ ಡೆವಲಪಮೆಂಟ್ ಸೂಸೈಟಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯಗಳ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ 161ನೇ ಜಯಂತ್ಯೋತ್ಸವ ಅಂಗವಾಗಿ ರಾಷ್ಟ್ರೀಯ ಯುವದಿನ ಹಾಗೂ ಸಪ್ತಾಹ ನಿಮಿತ್ಯ ದೇಹ ಧೃಢತಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಸಂಪತ್ತು ಬೇರಾವ ಸಂಪತ್ತಿಗೆ ಸರಿ ಸಾಠಿ ಇಲ್ಲ. ಮನುಷ್ಯನಿಗೆ ಸಿರಿ ಸಂಪತ್ತು ಮುಖ್ಯವಲ್ಲ, ಆರೋಗ್ಯ ಸಂಪತ್ತು ಅಗತ್ಯ. ಅದಕ್ಕಾಗಿ ಬೆಳಿಗ್ಗೆ ಯೋಗ, ಪ್ರಾಣಾಯಾಮ, ಧ್ಯಾನ ಹಾಗೂ ಇತರೆ ದೈಹಿಕ ಚಟುವಟಿಕೆಗಳು ಜರೂರಿಯಾಗಿವೆ ಎಂದು ಪ್ರತಿಪಾದಿಸಿದರು.

ಅಮುಲ್ಯವಾದ ನಮ್ಮ ಶರೀರಕ್ಕೆ ಇಂದು ಯುವಜನರು ಧುಮ್ರಪಾನ, ಮಧ್ಯಪಾನ ಹಾಗೂ ಡ್ರಗ್‍ಗಳಿಗೆ ಮಾರು ಹೋಗಿ ಯುವ್ವನಾವಸ್ಥೆಯಲ್ಲಿಯೆ ಹೃದಯಘಾತವಾಗಿ ಸಾವನಪ್ಪುತ್ತಿರುವ ನೂರಾರು ಉದಾಹರಣೆಗಳು ನಿತ್ಯ ನಮ್ಮ ಕಣ್ಮುಂದೆ ನಡೆಯುತ್ತಿವೆ. ದುಷ್ಚಟಗಳಿಗೆ ದಾಸ್ಯರಾಗಿ ನಮ್ಮ ಕೋಟ್ಯಾಂತರ ಬೆಲೆ ಬಾಳುವ ಶರೀರ ಹಾಳು ಮಾಡಿಕೊಳ್ಳುತ್ತಿದ್ದೇವೆ. ಯುವಜನರು ತಮ್ಮ ಜೀವನ ಸಾರ್ಥಕಗೊಳಿಸಿಕೊಳ್ಳಲು ವಿವೇಕಾನಂದರಂಥ ಮಹಾತ್ಮರ ಅಧ್ಯಯನ ಮಾಡುವಂತೆ ಚಾಂದಿವಾಲೆ ಕರೆ ಕೊಟ್ಟರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ.ಸುರೇಂದ್ರಸಿಂಗ್ ಮಾತನಾಡಿ, ಯುವಜನರಿಗೆ ವಿದ್ಯೆ ಎಷ್ಟು ಮುಖ್ಯವೋ ದೈನಂದಿನ ಬದುಕು ಸಾಕಾರಗೊಳ್ಳಲು ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜೀವನ ಉತ್ತಮವಾಗಿಸಿಕೊಳ್ಳುವಂತೆ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಶಿವಕುಮಾರ ಸ್ವಾಮಿ ಅವರು, ಯುವಜನತೆ ಹೆಚ್ಚಿರುವ ದೇಶ ನಮ್ಮದು. ನಮ್ಮ ಯುವಜನರು ಇತರೆ ದೇಶಗಳಲ್ಲಿ ಹೋಗಿ ಉತ್ತಮ ಸಾಧನೆ ಮಾಡಿ ಆ ದೇಶಕ್ಕೆ ಕೀರ್ತಿ ತರುತ್ತಿರುವರು. ಇನ್ನು ಮುಂದೆ ಅಲ್ಲಿಯ ಯುವಜನರು ಮರಳಿ ನಮ್ಮ ದೇಶದತ್ತ ಮುಖಮಾಡಿ ಇಲ್ಲಿಯ ಸಂಪತ್ತು ಬಳಿಸಿಕೊಂಡು ಭಾರತವನ್ನು ಮತ್ತೊಮ್ಮೆ ಬಂಗಾರದ ಗಿಣಿಯನ್ನಾಗಿ ಮಾಡಬೇಕೆಂದು ಕರೆ ನೀಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿ ಸದಸ್ಯ ಸಂತೋಷ ಚಟ್ಟಿ ಹಾಗೂ ಜಗದ್ಗುರು ಪಂಚಾಚಾರ್ಯ ಏಜ್ಯುಕೇಶನ್ ಐಂಡ್ ರೂರಲ್ ಡೆವಲಪಮೆಂಟ್ ಸೂಸೈಟಿ ಅಧ್ಯಕ್ಷ ಕಾರ್ತಿಕ ಮಠಪತಿ ವೇದಿಕೆಯಲ್ಲಿದ್ದರು.

ಆರಂಭದಲ್ಲಿ ಸ್ಥಳಿಯ ಪ್ರಾಧ್ಯಾಪಕ ಶಾಂತಕುಮಾರ ಬಿರಾದಾರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಆನೀಲಕುಮಾರ ಶಿಂಧೆ ವಂದಿಸಿದರು. ಕಾಲೇಜಿನ ಎಲ್ಲ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿದ್ದರು.