ದೈಹಿಕ ಶಿಕ್ಷಣ ಅಧಿಕಾರಿ ಕೆ. ಎರಿ ಸ್ವಾಮಿ ನಿವೃತ್ತಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.08: ಇಲ್ಲಿನ ಕೌಲ್ ಬಜಾರಿನ ಜಾಗೃತಿ ನಗರದಲ್ಲಿನ  ಸಂಸ್ಕಾರ ಅನಾಥಾಶ್ರಮದಲ್ಲಿ  ಸೇವಾ ನಿವೃತ್ತಿಯಾಗಿರುವ ದೈಹಿಕ ಶಿಕ್ಷಣ ಅಧಿಕಾರಿ ಕೆ. ಎರಿ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು ಹಾಗೂ ಇದೇ ಸಮಯದಲ್ಲಿ  ಮಕ್ಕಳಿಗೆ ಪುಸ್ತಕ, ಬ್ಯಾಗು ವಿತರಣೆ ಮಾಡಲಾಯಿತು.
ಆಶ್ರಮದ ಸಂಸ್ಥಾಪಕ ವಿರೂಪಾಕ್ಷಯ್ಯ, ಸಹಾಯಕ ಪವನ್ ಕುಮಾರ್,  ಸುಶೀಲ  ರಾಜು ಅವರು ಉಪಸ್ಥಿತರಿದ್ದರು.‌ ಎರಿಸ್ವಾಮಿ ಅವರು ಮಾತನಾಡುತ್ತಾ ಈ ಸ್ಲಂ ಪ್ರವೇಶದಲ್ಲಿ ಇಂತಹ ಆಶ್ರಮವನ್ನು ತೆಗೆದು ಇಲ್ಲಿಯ ಅನಾಥ ಮತ್ತು ಬಡ ವಿದ್ಯಾರ್ಥಿಗಳಿಗೆ ಊಟ ವಸತಿ ಶಿಕ್ಷಣವನ್ನು ನೀಡುತ್ತಿರುವುದು ಶ್ಲಾಘನೀಯ ಎಂದಿದ್ದಾರೆ.