ದೈಹಿಕ ಶಿಕ್ಷಕ ಕೆ.ಮುನಿರಾಜುಗೆ ಬೀಳ್ಕೊಡುಗೆ

ಕೋಲಾರ,ಜು.೩೧- ತಾಲೂಕಿನ ಶಿಳ್ಳಂಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಿಳ್ಳಂಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದಿಂದ ದೈಹಿಕ ಶಿಕ್ಷಕರಾಗಿ ೩೯ ವರ್ಷಗಳ ಕಾಲ ಅದೇ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ದೈಹಿಕ ಶಿಕ್ಷಕ ಕೆ. ಮುನಿರಾಜು ಅವರಿಗೆ ಇಂದು ಬೀಳ್ಕೊಡುಗೆ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿತ್ತು.
ದೈಹಿಕ ಶಿಕ್ಷಕರಾಗಿ ಆಯ್ಕೆಯಾಗಿ ೧೯೮೫ ರಲ್ಲಿ ಶಿಳ್ಳೆಂಗೆರೆ ಶಾಲೆಯಲ್ಲಿ ಕೆಲಸಕ್ಕೆ ಸೇರಿದರು. ಕೆಲಸಕ್ಕೆ ಸೇರಿ ಒಂದೇ ಶಾಲೆಯಲ್ಲಿ ಸತತ ೩೯ ವರ್ಷಗಳು ಸೇವೆ ಸಲ್ಲಿಸಿ ಅದೇ ಶಾಲೆಯಲ್ಲಿ ನಿವೃತ್ತಿಯಾಗಿರುವುದು ಈ ಜಿಲ್ಲೆಯಲ್ಲಿ ಎಲ್ಲಿಯೂ ಇಲ್ಲ ಎಂಬುದು ಒಂದು ಇತಿಹಾಸವಾಗಿದೆ.
ಶಿಳ್ಳೆಂಗೆರೆ, ಭಟ್ರಹಳ್ಳಿ, ಕಳ್ಳೀಪುರ, ಕೆಂಚಾಪುರ, ಕುರುಬರಹಳ್ಳಿ ಈ ಗ್ರಾಮಗಳಲ್ಲಿ ಇವರಿಗೆ ಸಾವಿರಾರು ಶಿಷ್ಯರು ಇದ್ದಾರೆ. ಇವರು ಈ ಶಾಲೆಗೆ ಬಂದಾಗ ಯಾವುದೇ ವಾಹನಗಳ ಸೌಲಭ್ಯ ಈ ಗ್ರಾಮಕ್ಕೆ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಕೋಲಾರದಿಂದ ನಡೆದುಕೊಂಡೇ ಶಾಲೆಗೆ ಬರುತ್ತಿದ್ದರು.
ಕೋಲಾರ ಜಿಲ್ಲೆಯಲ್ಲಿ ಖೋ-ಖೋ ಆಟ ಎಂದರೆ ಶಿಳ್ಳೇಂಗೆರೆ ಶಾಲೆ, ಶಿಳ್ಳೇಂಗೆರೆ ಶಾಲೆ ಎಂದರೆ ಖೋ-ಖೋ ಆಟ ಎನ್ನುವಷ್ಟರ ಮಟ್ಟಿಗೆ ಶಾಲೆಗೆ ಕೀರ್ತಿಯನ್ನು ತಂದಿದ್ದರು.
ದೈಹಿಕ ಶಿಕ್ಷಕರಾಗಿ ಇವರ ಸಾಧನೆಗಳು ಖೋ-ಖೋ ಆಟದಲ್ಲಿ ೨೦ ಸಲ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕೀರ್ತಿ ಇವರಿಗೆ ಸಲ್ಲುತ್ತದೆ, ಎರಡು ಸಲ ರಾಜ್ಯ ಮಟ್ಟದಲ್ಲಿ ಖೋ-ಖೋ ಆಟದಲ್ಲಿ ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದ ಕೀರ್ತಿ ಇವರಿಗೆ ಸಲ್ಲುತ್ತದೆ, ಖೋ-ಖೋ ಆಟದಲ್ಲಿ ೨ ಸಲ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕೀರ್ತಿ ಇವರಿಗೆ ಸಲ್ಲುತ್ತದೆ,