ದೈಹಿಕ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ

ಹನೂರು: ಆ.01:- ತಾಲ್ಲೂಕಿನ ಮಂಗಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತಿ ಹೊಂದಿದ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಕೆ.ಮರಯ್ಯ ರವರಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದತ್ತು,
ಮಂಗಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಶಿಕ್ಷಕರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೆ ಮರಯ್ಯರವರಿಗೆ ಸನ್ಮಾನಿಸಿ ಗೌರವಿಸಿದ್ದರು.
ಈ ಸಂಧರ್ಭದಲ್ಲಿ ಮಕ್ಕಳ ಜೊತೆ ವಿಷ್ಣು ಸೇನಾ ಸಿನಿಮಾ ಹಾಡಿಗೆ ಹೆಜ್ಜೆ ನೃತ್ಯ ಮಾಡಿ ಖುಷಿ ಪಟ್ಟರು ಈ ಸಮಯದಲ್ಲಿ ಗುರು ಹಿರಿಯರನ್ನ ಸ್ಮರಿಸಿ ಮಕ್ಕಳಿಗೆ ಭವಿಷ್ಯದ ಬಗ್ಗೆ ಹಿತನುಡಿಗಳನ್ನ ತಿಳಿಸಿದ್ದರು.
ಈ ಸಂಧರ್ಭದಲ್ಲಿ ಹನೂರು ತಾಲ್ಲೂಕಿನ ಶಿಕ್ಷಣಾಧಿಕಾರಿಗಳು ಟಿ ಆರ್ ಸ್ವಾಮಿ ಶಿಕ್ಷಣಾ ಸಂಯೋಜಕ ಕಂದವೇಲು, ಮಹೇಶ್, ಶಿಕ್ಷಣ ಅಧಿಕಾರಿ ಮಹಾದೇವ ನೌಕರರ ಸಂಘದ ಸದಸ್ಯರಾದ ಶಿವು,ಮಲ್ಲು, ಸಿ.ಆರ್.ಪಿ ರಮೇಶ್, ಶಿಕ್ಷಕರಾದ ಶಿವಕುಮಾರ್ ಚಿನ್ನರಾಜು ಮಹಾಲಕ್ಷ್ಮಿ, ಇನ್ನಿತ್ತರು ಇದ್ದರು.