ದೈಹಿಕ – ಮಾನಸಿಕ ಆರೋಗ್ಯ ಪರಸ್ಪರ ಪೂರಕ- ಪ್ರೊ.ಚನ್ನಪ್ಪ ಪಲ್ಲಾಗಟ್ಟೆ

ಸಂಜೆವಾಣಿ ವಾರ್ತೆ

 ದಾವಣಗೆರೆ.ಜ.೧೯; ದೈಹಿಕ ಆರೋಗ್ಯವನ್ನು ಕಾಪಾಡಿಕೊಂಡರೆ ಮಾನಸಿಕವಾಗಿಯೂ ಆರೋಗ್ಯವಂತರಾಗಿರಬಹುದು.  ಜೀವನದಲ್ಲಿ ಒಳ್ಳೆಯ ಅಭ್ಯಾಸಗಳನ್ನು  ರೂಢಿಸಿಕೊಂಡು ಇತರರಿಗೆ ಮಾದರಿಯಾಗಬೇಕು. ಜೀವನದಲ್ಲಿ ಸನ್ಮಾರ್ಗ ಅನುಸರಿಸಿ ಸಮಾಜದ ಆರೋಗ್ಯ ಕಾಪಾಡುವ ಹೊಣೆ ನಮ್ಮೆಲ್ಲರದಾಗಿರುತ್ತದೆ, ಆ ದಿಶೆಯಲ್ಲಿ ನಡೆಯಲು ಎಲ್ಲರೂ ಪ್ರಯತ್ನಿಸಿ ಮುಂದಿನ ಯುವ ಪೀಳಿಗೆಗೆ ಮಾರ್ಗ ದರ್ಶಿಯಾಗೋಣ ಎಂದು ಭಾರತ ಸೇವಾದಳ ದಾವಣಗೆರೆ ಜಿಲ್ಲಾಧ್ಯಕ್ಷರಾದ  ಪ್ರೊ.ಚನ್ನಪ್ಪ ಪಲ್ಲಾಗಟ್ಟೆ  ಕರೆಕೊಟ್ಟರು.ಅವರು ಸೇವಾದಳ ಜಿಲ್ಲಾ ಸಮಿತಿ ದಾವಣಗೆರೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳವರ ಕಛೇರಿ,  ತಾಲೂಕ ಸಮಿತಿ ಭಾರತ ಸೇವಾದಳ ಉತ್ತರ ವಲಯ ದಾವಣಗೆರೆ ಹಾಗೂ ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಭಾರತ ಸೇವಾದಳ ಭವನದಲ್ಲಿ ಆಯೋಜಿಸಿದ್ದ ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಾಗಾರ ಹಾಗೂ ಮಾನಸಿಕ ಆರೋಗ್ಯ ತರಬೇತಿ ಮತ್ತು  ರಾಷ್ಟ್ರಧ್ವಜ ಮಾಹಿತಿ ಶಿಬಿರ ಇದರ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಮುಂದುವರಿದು ಮಾತನಾಡಿ, ದೈಹಿಕ ಶಿಕ್ಷಕರು ರಾಷ್ಟ್ರಧ್ವಜ ದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ತಮ್ಮ ಶಾಲೆಯ ಜೊತೆಗೆ ಗ್ರಾಮ ಪಂಚಾಯಿತಿ, ತಾಲೂಕ ಪಂಚಾಯಿತಿ, ಜಿಲ್ಲಾ ಪಂಚಾಯ್ತಿ,  ಮಹಾ ನಗರ ಪಾಲಿಕೆ, ಜಿಲ್ಲಾಡಳಿತದ ಕಾರ್ಯಕ್ರಮ ಗಳಲ್ಲಿ ಭಾಗವಹಿಸಿ ಧ್ವಜಾರೋಹಣ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಿಕೊಡಲು ಕರೆಯಿತ್ತರು. ಭಾರತ ಸೇವಾದಳ ರಾಷ್ಟ್ರೀಯ ಕಾರ್ಯಕ್ರಮ ಗಳಲ್ಲಿ ಸದಾ ತೊಡಗಿಸಿಕೊಂಡು ರಾಷ್ಟ್ರಕ್ಕೆ ಗೌರವ ಸಲ್ಲಿಸಬೇಕು. ಹಿಂದಿನ ದಿನಗಳಲ್ಲಿ ಇಂತಹ ಘನ ಕಾರ್ಯಗಳಲ್ಲಿ ತೊಡಗಿಕೊಂಡು ಸಕ್ರಿಯವಾಗಿದ್ದು, ಇತ್ತೀಚಿನ ಕೆಲ ವರ್ಷಗಳಿಂದ ನಿಷ್ಕ್ರಿಯತೆಯ  ಮನೋಭಾವ ನಮಗೆ ನೋವು ತಂದಿದೆ, ಆದರೆ ನೀವುಗಳು ಈ ಕೊರತೆಯನ್ನು ನೀಗಿಸಿ ದಾವಣಗೆರೆ ಜಿಲ್ಲೆ ಭಾರತ ಸೇವಾದಳದಕ್ಕೆ ಒಳ್ಳೆಯ ಹೆಸರನ್ನು ತರಬೇಕಾಗಿ ಕರೆ ಕೊಟ್ಟರು.    ಕಾರ್ಯಕ್ರಮದಲ್ಲಿ‌   ಅರವಿಂದ್ ಕೊಲಂಬಿ, ಹಾಸಬಾವಿ  ಕರಿಬಸಪ್ಪ,ಡಾ.ಸಂತೋಷ ಕುಮಾರ,.ಡಾ. ಮೃತ್ಯುಂಜಯ, ಬಿ ಯುವರಾಜ್ ,  ಹುಸೇನ್ ಪೀರ್,   ಹಾಲೇಶ್ವರಯ್ಯ, ಷಡಕ್ಷರಿ, ಪಕ್ಕೀ ರಗೌಡ ಹಳೆಮನಿ ಮತ್ತಿತರರಿದ್ದರು.