
ಗದಗ, ಏ.3: ಪೆÇೀಲಿಸ್ ಇಲಾಖೆಯಲ್ಲಿ ಕಾರ್ಯನಿರತ ಪೆÇೀಲಿಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ನಿರಂತರವಾಗಿ ದೈಹಿಕ ಚಟುವಟಿಕೆ ಹಾಗೂ ಮಾನಸಿಕ ನೆಮ್ಮದಿಗಾಗಿ ಧ್ಯಾನ ಮಾಡುವ ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳಬೇಕೆಂದು ನಿವೃತ್ತ ಎ.ಎಸ್.ಐ. ಡಿ.ಎಮ್.ಮ್ಯಾಗೇರಿ ಸಲಹೆ ನೀಡಿದರು.
ಅವರು ಗದಗ ಪೆÇಲೀಸ್ ಇಲಾಖೆಯು ಜಿಲ್ಲಾ ಸಶಸ್ತ್ರ ಮೀಸಲು ಪೆÇಲೀಸ್ ಪಡೆಯ ಕವಾಯತು ಮೈದಾನದಲ್ಲಿ ಪೆÇಲೀಸ್ ಧ್ವಜ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ನಿವೃತ್ತರ ಸೇವಾ ಸುಸ್ಮರಣೆ ಮತ್ತು ಗೌರವ ಸಮರ್ಪಣಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಇಲಾಖೆಯಲ್ಲಿ ಪ್ರತಿದಿನ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಎಲ್ಲ ನೌಕರರು ಮಾನಸಿಕ ಹಾಗೂ ದೈಹಿಕವಾಗಿ ಸಧೃಡವಾಗಿರುವದು ಅತ್ಯಗತ್ಯ ಇಲಾಖೆಯ ಮೇಲಾಧಿಕಾರಿಗಳ ಆದೇಶವನ್ನು ಪಾಲಿಸುವ ಮೂಲಕ ಪೆÇೀಲಿಸ್ ಇಲಾಖೆಗೆ ಹಾಗೂ ಮೇಲಾಧಿಕಾರಿಗಳಿಗೆ ಇನ್ನೂ ಹೆಚ್ಚಿನ ಗೌರವ ತರುವ ಕಾರ್ಯ ಮಾಡೋಣ ಎಂದರು.
2014 ರಿಂದ ಜನಸ್ನೇಹಿ ಹಾಗೂ ಸ್ಮಾರ್ಟ ಪೆÇೀಲಿಸ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇದೂ ಹೆಚ್ಚು ಜನಪ್ರಿಯತೆ ಪಡೆಯುತ್ತಾ ಸಾಗಿದ್ದು ಪೆÇೀಲಿಸ್ ಇಲಾಖೆಯ ಎಲ್ಲ ನೌಕರರು ಜನಸ್ನೇಹಿ ಹಾಗೂ ಸ್ಮಾರ್ಟ ಪೆÇೀಲಿಸ್ ವ್ಯವಸ್ಥೆಯ ಭಾಗವಾಗಿ ಕಾರ್ಯನಿರ್ವಹಿಸಬೇಕು. ಇಲಾಖೆಗೆ ಸೇರಿದ ಪ್ರತಿಯೊಬ್ಬರು ಆಯ್.ಪಿ.ಸಿ ಕಾಯ್ದೆ ಹಾಗೂ ನೀಡಲಾದ ಆಯುಧಗಳ ಬಳಕೆ ಕುರಿತು ಸಂಪೂರ್ಣ ಅರಿವು ಹೊಂದಿರಬೇಕು. ಇಲಾಖೆಯಲ್ಲಿ ಇದ್ದುಕೊಂಡು ಅಸಹಾಯಕರಿಗೆ ನ್ಯಾಯ ಕೊಡಿಸುವ ಕಾರ್ಯ ನಿರಂತರವಾಗಿ ಮುಂದುವರೆಸಬೇಕೆಂದರು.
ಜಿಲ್ಲಾ ಪೆÇೀಲಿಸ್ ಅಧೀಕ್ಷಕ ಬಿ.ಎಸ್.ನೇಮಗೌಡ ಮಾತನಾಡಿ 1965 ರ ಎಪ್ರೀಲ್ 2 ರಂದು ಪ್ರತಿವರ್ಷ ಪೆÇೀಲಿಸ್ ಧ್ವಜ ದಿನಾಚರಣೆ ಕಾರ್ಯಕ್ರಮ ಮಾಡಲಾಗುತ್ತಿದೆ. ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರನ್ನು ಗುರುತಿಸಿ ಪ್ರೀತಿಯಿಂದ ಗೌರವ ಸಲ್ಲಿಸುವ ಕಾರ್ಯಕ್ರಮ ಇದಾಗಿದೆ. ಜೊತೆಗೆ ನಿವೃತ್ತ ಪೆÇೀಲಿಸ್ ಅಧಿಕಾರಿ ಸಿಬ್ಬಂದಿಗಳ ಜೊತೆ ಪೆÇೀಲಿಸ್ ಇಲಾಖೆ ನಿರಂತರವಾಗಿ ಇರಲಿದೆ ಎಂದರು. ಪೆÇೀಲಿಸ್ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದ ಅವರು ಪೆÇೀಲಿಸ್ ಕಲ್ಯಾಣ ನಿಧಿ ಸಂಗ್ರಹಿಸಿ ಅದರಲ್ಲಿ ಶೇ.50 ರಷ್ಟು ಕೇಂದ್ರ ನಿವೃತ್ತ ಪೆÇೀಲಿಸ್ ಕಲ್ಯಾಣ ನಿಧಿಗೆ ನೀಡಲಾಗುತ್ತದೆ. ಶೇ. 50 ರಷ್ಟು ನಿವೃತ್ತ ಪೆÇೀಲಿಸ್ ಅಧಿಕಾರಿ ಸಿಬ್ಬಂದಿಗಳಿಗೆ ವಿತರಿಸಲಾಗುವದು. ಏಪ್ರೀಲ 2022 ರಿಂದ ಈವರೆಗೆ ಒಟ್ಟು 80.80 ಲಕ್ಷ ಪರಿಹಾರವನ್ನು ಪೆÇೀಲಿಸ್ ಕಲ್ಯಾಣ ನಿಧಿಯಿಂದ ವಿತರಿಸಲಾಗಿದೆ. 1.40 ಲಕ್ಷ ಮೊತ್ತದ ಪರಿಹಾರವನ್ನು ಮರಣ ಹೊಂದಿದ ನೌಕರರಿಗೆ ವಿತರಿಸಿದೆ ಎಂದರು.
ಆಕರ್ಷಕ ಪಥಸಂಚಲನ: ಪರೇಡ್ ಕಮಾಂಡರ್ ಶಂಕರಗೌಡ ಚೌದರಿ ನೇತೃತ್ವದಲ್ಲಿ ಪರೇಡ್ ನಡೆಯಿತು. ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ನಾಗರಿಕ ಪೆÇೀಲಿಸ್ ಪಡೆ, ಮಹಿಳಾ ಪೆÇೀಲಿಸ್ ಪಡೆಗಳು ಆಕರ್ಷಕವಾಗಿ ಪಥ ಸಂಚಲನ ನಡೆಸಿದವು.
ಕಾರ್ಯಕ್ರಮದಲ್ಲಿ ಡಿ.ವೈ.ಎಸ್.ಪಿ ಗಳಾದ ಎಂ.ಬಿ.ಸಂಕದ, ವಾಯ್.ಎಸ್.ಎಗನಗೌಡರ, ಡಿ.ಆರ್.ಡಿ.ವಾಯ್.ಎಸ್.ಪಿ ಶಿವಾನಂದ ಚನ್ನಪ್ಪ ಸೇರಿದಂತೆ ವಿವಿಧ ಹಂತದ ಪೆÇೀಲಿಸ್ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು. ಬಾಬಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.
ನಿವೃತ್ತ ಪೆÇಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಗೌರವ ಸನ್ಮಾನ: ಪಿ.ಎಸ್.ಐ ವಿ.ವೈ.ಹುಲ್ಲೂರ, ಡಿ.ಎ.ಆರ್. ಎರ್ಫ.ವೈ.ಸಂದಿಮನಿ, ಎ.ಎಸ್.ಐ.ಗಳಾದ ಡಿ.ಎಮ್.ಮ್ಯಾಗೇರಿ, ಎಚ್.ವೈ.ಕಂಪ್ಲಿ, ಎಸ್.ಎಚ್.ಬೆಟಗೇರಿ, ವಿ.ಎನ್.ಕೌಜರಲಗಿ, ಬಿ.ಆರ್.ಸೊರಟೂರ, ಎಂ.ಬಿ.ಸಲಗಾರ, ಮುಖ್ಯ ಪೆÇೀಲಿಸ್ ಪೇದೆಗಳಾದ ಎಸ್.ಎ.ಶಿವನಗೌಡ್ರ, ಆರ್.ಎಂ.ಬಂಡಿ,ಎಸ್.ವಿ.ಮೇಟಿ ಅವರ ಸೇವೆಯನ್ನು ಸ್ಮರಿಸಿ, ಆತ್ಮೀಯವಾಗಿ ಗೌರವಿಸಲಾಯಿತು.