ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆ ಅತ್ಯವಶ್ಯ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಡಿ.24  ಜೀವನದ ಒತ್ತಡದಿಂದ ಹೊರಬರಲು ಕ್ರೀಡೆ ಒಂದು ಪೂರಕವಾಗಿದೆ ಎಂದು ಜಿಲ್ಲಾ ಆರೋಗ್ಯಧಿಕಾರಿ ಡಾ.ಶಂಕರ ನಾಯ್ಕ್ ಹೇಳಿದರು 
ಪಟ್ಟಣದ ಗಂ ಭೀ  ಪದವಿಪೂರ್ವ ಕಾಲೇಜ್ ಮೈದಾನದಲ್ಲಿ ಶನಿವಾರ ಅರೋಗ್ಯ ಇಲಾಖೆ , 
ವತಿಯಿಂದ ಎರಡು ದಿನಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು ಒಂದು ಕುಟುಂಬದ ರೀತಿ ಆರೋಗ್ಯ ಇಲಾಖೆಯ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ದೈಹಿಕ ಸಾಮರ್ಥ್ಯ ಮತ್ತು ಮುಖದಲ್ಲಿ ಮಂದಹಾಸವನ್ನು ಮೂಡಿಸಿಕೊಳ್ಳಬೇಕು. ನಾವು ಸದೃಢವಾಗಿದ್ದರೆ ಏನೇ ಬಂದರೂ ಎದುರಿಸಲು ಸಿದ್ದರಾಗಿರುತ್ತೇವೆ. ನಾವು ಚೆನ್ನಾಗಿದ್ದರೆ ರೋಗಿಯನ್ನು ಚೆನ್ನಾಗಿ ನೋಡಿಕೊಳ್ಳಲು  ಸಾಧ್ಯ ಎಂದರು.
 ಕಾರ್ಯಕ್ರಮದ ಪ್ರಸ್ತಾವಿಕವಾಗಿ ತಾಲೂಕ ವೈದ್ಯಾಧಿಕಾರಿ ಡಾ.ಶಿವರಾಜ್  ಮಾತನಾಡಿ ಆರೋಗ್ಯ ಇಲಾಖೆಯ ಸಿಬ್ಬಂದಿ ಒಂದು ಕಡೆ ಸೇರಿ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಆರೋಗ್ಯ ಮತ್ತು ನೆಮ್ಮದಿ ಸಿಗುವಂತಾಗುತ್ತದೆ. ಕೆಲಸದಲ್ಲಿ ಆಸಕ್ತಿ ಕೂಡ ದೊರೆಯುತ್ತದೆ. ಕೋವಿಡ್ ಸಂದರ್ಭದಲ್ಲಿ ಎಷ್ಟೇ ತೊಂದರೆಗಳು ಇದ್ದರು ಕೆಲಸ ಮಾಡುತ್ತೇವೆ ಎಂಬ ಭರವಸೆ ಮೂಡುತ್ತದೆ. ನಮ್ಮ ಆರೋಗ್ಯದ ಜೊತೆಗೆ ಬೇರೆಯವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಾಧ್ಯ ಎಂದರು.
 ಕ್ರೀಡೆಯಲ್ಲಿ 9 ತಂಡಗಳು ಭಾಗವಹಿಸುವ ಮೂಲಕ ಸಂಭ್ರಮಿಸಿದರು
 ಈ ಸಂರ್ಭದಲಿ ಜಿಲ್ಲಾ RCH ಅಧಿಕಾರಿಗಳು ಡಾ. ಜಂಬಯ್ಯ, ಡಾ.ವಿನಯ್  , ಡಾ. ಪ್ರವೀಣ್, ತಾಲೂಕು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಗಳು ಡಾ.ಅಚ್ಚುತರಾಯ್, ಮಕ್ಕಳ ತಜ್ಞರು  ಡಾಕ್ಟರ್ ತಿಪ್ಪೇಸ್ವಾಮಿ, ದೈಹಿಕ ಶಿಕ್ಷಣಾಧಿಕಾರಿ ಸಿ. ಕೊಟ್ರೇಶ್ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆಡಳಿತ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು ಹಾಗು ಹೆಚ್ ಶ್ರೀನಿವಾಸ ರೆಡ್ಡಿ    ಮತ್ತು ಈದಿನದ ಎಲ್ಲಾ ಸಿಬ್ಬಂದಿಗೆ ಊಟದ ವ್ಯವಸ್ಥೆ  ಎಸ್ ಬಿ ಎಸ್   ಶಂಬಣ್ಣ ವಹಿಸಿದ್ದರು