ದೈಹಿಕ ಬಲದೊಂದಿಗೆ ಮನೋಬಲ ಬೆಳೆಸಿಕೊಳ್ಳಿ: ಕೆ.ವಿ ರಾಜೇಂದ್ರ

ಸಂಜೆವಾಣಿ ನ್ಯೂಸ್
ಮೈಸೂರು : ಸೆ.28:- ಆತ್ಮ ರಕ್ಷಣೆ ಮಾಡಿಕೊಳ್ಳಲು ದೈಹಿಕ ಬಲದೊಂದಿಗೆ ಮಾನಸಿಕ ಬಲವೂ ಮುಖ್ಯ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಅಧ್ಯಕ್ಷರಾದ ಡಾ.ಕೆ ವಿ ರಾಜೇಂದ್ರ ಅವರು ತಿಳಿಸಿದರು.
ಜಿಲ್ಲಾಡಳಿತ, ಪೆÇಲೀಸ್ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ವತಿಯಿಂದ ನಗರದ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ, ಬಾಲ ಕಾರ್ಮಿಕ, ಕಿಶೋರ ಕಾರ್ಮಿಕತೆ ನಿಷೇಧ ಹಾಗೂ ನಿಯಂತ್ರಣ, ಮಾನವ ಕಳ್ಳ ಸಾಗಾಣಿಕೆ, ಭಿಕ್ಷಾಟನೆ ಕುರಿತು ಕಾನೂನು ಅರಿವು ಕಾರ್ಯಕ್ರಮ ಹಾಗೂ ಸ್ವಯಂ ರಕ್ಷಣಾ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚು ಶಕ್ತಿ ಇದೆ. ಅವರು ಪುರುಷರಿಗಿಂತ ಹೆಚ್ಚು. ಹೊಸ ಜೀವವನ್ನು ಸೃಷ್ಟಿ ಮಾಡುವ ಶಕ್ತಿ ಹೆಣ್ಣಿಗಿದೆ. ಮಾನಸಿಕವಾಗಿ ಹೆಣ್ಣಿನಷ್ಟು ಸದೃಢವಾಗಿ ಪುರುಷನಿರುವುದಿಲ್ಲ. ಹಾಗೆಂದ ಮಾತ್ರಕ್ಕೆ ಹೆಣ್ಣು ಮಕ್ಕಳು ದೈಹಿಕವಾಗಿ ದುರ್ಬಲರಲ್ಲ, ಬದಲಾಗಿ ಅವರ ದೇಹ ಫ್ಲೆಕ್ಸಿಬಲ್ ಆಗಿರುತ್ತದೆ. ಕೆಲವೊಂದು ಬಾರಿ ದೈಹಿಕ ಶಕ್ತಿಗಿಂತ ಮಾನಸಿಕ ಶಕ್ತಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ತಮ್ಮ ಶಕ್ತಿಗಿಂತ ಯುಕ್ತಿಯಿಂದಲೇ ಕಠಿಣ ಸನ್ನಿವೇಶಗಳನ್ನು ನಿಭಾಯಿಸಬಹುದು. ಸ್ವಯಂ ರಕ್ಷಣೆಗಾಗಿ ಕರಾಟೆ ಅಥವಾ ರಕ್ಷಣಾ ತಂತ್ರಗಳನ್ನು ಕಲಿಯಿರಿ. ಜೊತೆಗೆ ಮಾನಸಿಕವಾಗಿ ಇಂತಹ ಸನ್ನಿವೇಶಗಳನ್ನು ಎದುರಿಸಲು ಸದೃಢರಾಗಿ ಎಂದು ಕಿವಿಮಾತು ಹೇಳಿದರು.
ಯಾವುದೇ ದುಶ್ಚಟಗಳಿಗೆ ಬಲಿಯಾಗದೆ, ಯಾರೋ ನಮ್ಮನ್ನು ಕಾಪಾಡುತ್ತಾರೆಂಬ ನಿರೀಕ್ಷೆ ಬೇಡ. ಹೆಣ್ಣು ಎಂದಾಕ್ಷಣ ಕೇವಲ ಅಡುಗೆ ಮನೆ ಹಾಗೂ ಬ್ಯೂಟಿ ಪಾರ್ಲರ್ ಮಾತ್ರ ಅಲ್ಲ. ಬದಲಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಕಲಿಯಲು ನಿಮಗೆ ಮುಕ್ತ ಅವಕಾಶವಿದೆ. ಸಮಾಜದಲ್ಲಿ ಇಂದಿಗೂ ಸಮಾಜಘಾತಕರು ಇರುವುದರಿಂದ ಹೆಣ್ಣು ಮಕ್ಕಳು ಎಚ್ಚರವಹಿಸುವುದು ಉತ್ತಮ ಎಂದರು.
ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಉಪ ಪೆÇಲೀಸ್ ಆಯುಕ್ತರಾದ ಮುತ್ತುರಾಜ್ ಎಂ ಅವರು ಮಾತನಾಡಿ, ಯಾವ ವ್ಯಕ್ತಿಗೆ ಸ್ವಯಂ ರಕ್ಷಣೆ ಮಾಡಿಕೊಳ್ಳಲು ಆಗುವುದಿಲ್ಲವೋ ಆತ ಬೇರೆಯವರನ್ನು ರಕ್ಷಿಸಲು ಸಾಧ್ಯವಿಲ್ಲ ಬೇರೆಯವರು ನಮ್ಮನ್ನು ರಕ್ಷಿಸಲು ಇದ್ದಾಗ ಸ್ವಯಂ ರಕ್ಷಣೆ ಮಾಡಿಕೊಳ್ಳುವುದನ್ನು ನಾವು ಕಲಿಯುವುದರಿಂದ ದೂರ ಉಳಿಯುತ್ತೇವೆ. ಹಿಂದೆ ನಾಯಿಗಳು ಮನುಷ್ಯನನ್ನು ನೋಡಿದರೆ ಹಿಂದೆ ಓಡುತ್ತಿದ್ದವು ಆದರೆ ಈಗ ಮನುಷ್ಯ ನಾಯಿಯನ್ನು ನೋಡಿ ಓಡಿ ಹೋಗುವ ಸಂದರ್ಭ ಬಂದಿದೆ. ಯಾರು ನಮ್ಮನ್ನು ಹೆದರಿಸುತ್ತಾರೆ ತೊಂದರೆ ಕೊಡುತ್ತಾರೆ ಎಂದು ಭಯಪಡಬಾರದು. ಯಶಸ್ಸನ್ನು ಬರಿ ಅಸ್ತ್ರಗಳಿಂದ ಮಾತ್ರ ಪಡೆಯಲಾಗುವುದಿಲ್ಲ. ಕೆಲವೊಂದು ಬಾರಿ ತಂತ್ರ ಮತ್ತು ಬುದ್ಧಿಶಕ್ತಿಯ ಅವಶ್ಯಕತೆ ಕೂಡ ಇರುತ್ತದೆ. ಜೊತೆಗೆ ಮನೋಬಲ ಹಾಗೂ ಆತ್ಮಬಲವೂ ಮುಖ್ಯ. ಈ ರೀತಿಯ ಕೌಶಲ್ಯಗಳು ನಿಮಗೇಕೆ ಎಂದು ಮನೆಗಳಲ್ಲಿ ಕಡೆಗಣಿಸುತ್ತಾರೆ. ಆದರೆ ನೀವು ತಲೆಕೆಡಿಸಿಕೊಳ್ಳದೆ ಇಂತಹ ತರಬೇತಿಗಳ ಸದುಪಯೋಗ ಪಡೆದುಕೊಳ್ಳಿ ಎಂದರು.
ಮೊಬೈಲ್ ಬಳಕೆ ಮಾಡುವಾಗ ಜಾಗರೂಕರಾಗಿರಿ. ಇತ್ತೀಚೆಗೆ ಸೈಬರ್ ಕ್ರೈಂ ಹೆಚ್ಚುತ್ತಿದೆ. ಮೊಬೈಲ್ ನಲ್ಲಿ ಯಾವುದೇ ಅಪ್ಲಿಕೇಶನ್ ಡೌನ್ಲೋಡ್ ಮಾಡುವಾಗ ನಿಮ್ಮ ವೈಯಕ್ತಿಕ ವಿಚಾರಗಳನ್ನು ಮೊಬೈಲ್ ನಲ್ಲಿ ಅಪೆÇ್ಲೀಡ್ ಮಾಡುವಾಗ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ. ಗುಡ್ ಟಚ್ ಹಾಗೂ ಬ್ಯಾಡ್ ಟಚ್ ಬಗ್ಗೆ ಅರಿವಿರಲಿ. ನಿಮ್ಮ ಅನುಮತಿ ಇಲ್ಲದೆ ನಿಮ್ಮ ದೇಹವನ್ನು ಸ್ಪರ್ಶಿಸುವ ಅಧಿಕಾರ ಯಾರಿಗೂ ಇಲ್ಲ. ಡ್ರಗ್ಸ್ ಬಗ್ಗೆ ಎಚ್ಚರವಿರಲಿ. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯಾರಾದರೂ ನಿಮ್ಮನ್ನು ಡ್ರಗ್ಸ್ ತೆಗೆದುಕೊಳ್ಳಲು ಪ್ರಚೋದಿಸಿದರೆ ಅದನ್ನು ವಿರೋಧಿಸಿ ಹಾಗೂ ಪೆÇಲೀಸರಿಗೆ ದೂರು ನೀಡಿ. ನಿಮ್ಮ ರಕ್ಷಣೆಗೆ ಸಂಬoಧಿಸಿದoತೆ ಯಾವುದೇ ಸಮಸ್ಯೆಗಳಲ್ಲಿ ಸಿಕ್ಕಿಕೊಂಡಾಗ ಪೆÇೀಲಿಸ್ ಸಹಾಯವಾಣಿ 112 ಗೆ ಕರೆ ಮಾಡಿ. ಕರೆ ಬಂದ 5 ನಿಮಿಷಗಳಲ್ಲಿ ಪೆÇಲೀಸ್ ನಿಮ್ಮ ಸಹಾಯಕ್ಕಾಗಿ ಧಾವಿಸುತ್ತಾರೆ ಎಂದು ಮಾಹಿತಿ ನೀಡಿದರು.
ಅಪರಾಧ ಹಾಗೂ ಸಂಚಾರ ವಿಭಾಗದ ಉಪ ಪೆÇಲೀಸ್ ಆಯುಕ್ತರಾದ ಎಸ್ ಜಾನ್ಹವಿ ಅವರು ಮಾತನಾಡಿ, ಕಾಯಿಲೆ ಬಂದ ಮೇಲೆ ವಾಸಿ ಮಾಡುವುದಕ್ಕಿಂತ ಕಾಯಿಲೆ ಬರದಂತೆ ಎಚ್ಚರವಹಿಸುವುದು ಉತ್ತಮ. ಹಾಗೆಯೇ ಅಪರಾಧ ಜರುಗಿದ ಮೇಲೆ ಚಿಂತಿಸುವುದಕ್ಕಿoತ ಅಪರಾಧ ಜರುಗದಂತೆ ಮುನ್ನೆಚ್ಚರಿಕೆವಹಿಸುವುದು ಉತ್ತಮ. ನಿಮ್ಮ ಕಣ್ಣೆದುರಿಗೆ ಅಪರಾಧ ನಡೆಯುತ್ತಿದ್ದರೆ ಆದಷ್ಟು ಪ್ರತಿಕ್ರಿಯಿಸಿ, ವಿರೋಧಿಸಿ.
ನಿಮಗೆ ಏನಾದರೂ ಸಮಸ್ಯೆ ಸಂಭವಿಸಿದರೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಆದಷ್ಟು ಅದನ್ನು ತಡೆಯಲು ಪ್ರಯತ್ನಿಸಿ. ಟ್ರಾಫಿಕ್ ರೂಲ್ಸ್ ಗಳನ್ನು ಕಡ್ಡಾಯವಾಗಿ ಪಾಲಿಸಿ. ಹೆಲ್ಮೆಟ್ ಧರಿಸದೆ ಒಬ್ಬ ಪೆÇಲೀಸ್‍ಗೆ ನೀವು ಮೋಸ ಮಾಡಬಹುದು ಆದರೆ ಮುಂದೆ ಸಂಭವಿಸಬಹುದಾದ ಅಪಘಾತಕ್ಕೆ ನೀವೇ ಹೊಣೆಗಾರರಾಗಿರುತ್ತೀರಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಕಾರ್ಮಿಕ ಆಯುಕ್ತರು ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಸದಸ್ಯ ಕಾರ್ಯದರ್ಶಿಗಳು ಆದ ನಾಜಿಯಾ ಸುಲ್ತಾನ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಯೋಗೇಶ್, ಯೋಧ ಮಾರ್ಷಲ್ ಆರ್ಟ್ಸ್ ಅಕಾಡೆಮಿಯ ಸಂಸ್ಥಾಪಕರಾದ ರಾಕೇಶ್ ಯಾದವ್ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲರಾದ ಸೋಮಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.