ದೈಹಿಕ ನಿರ್ದೇಶಕ ಡಾ. ಅಶೋಕ ಜಾಧವ ನಿವೃತ್ತಿ ನಿಮಿತ್ಯ ಸನ್ಮಾನ

ದೇವರಹಿಪ್ಪರಗಿ:ಜೂ.1:ಡಾ. ಅಶೋಕ ಜಾಧವ ಅತ್ಯಂತ ಕ್ರೀಡಾಸಂಘಟಕರಾಗಿದ್ದು, ಇವರ ಕೈಯಲ್ಲಿ ರಾಷ್ಟ್ರೀಯ, ಅಂತರಾರಷ್ಟಿಯ ಸಾಧಕರನ್ನು ಸಿದ್ಧಪಡಿಸಿದ ಕೀರ್ತಿ ಸಲ್ಲುತ್ತದೆ. ಇವರ ನಿವೃತ್ತಿ ಜೀವನ ಸುಖಮಯವಾಗಲಿ ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು.
ಶುಕ್ರವಾರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿ ವೃತ್ತಿಯಿಂದ ನಿವೃತ್ತಿಯಾದ ಡಾ. ಅಶೋಕ ಜಾಧವ ಅವರ ಶುಭಕೋರುವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಾ. ಅಶೋಕ ಜಾಧವ ಅವರು, ವೃತ್ತಿಯುದ್ದಕ್ಕೂ ಕ್ರೀಯಾಶೀಲರಾಗಿ ಕಾರ್ಯ ನಿರ್ವಹಿಸಿದ್ದಾರೆ. ವಿಶ್ವವಿದ್ಯಾನಿಲಯಗಳಲ್ಲಿ ಕ್ರೀಡಾಕೂಟಗಳನ್ನು ಸಂಘಟನೆ ಮೂಲಕ ಮನೆ ಮಾತಾಗಿದ್ದಾರೆ. ಇವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಶುಭ ಹರಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಡಾ. ಪ್ರಭುಗೌಡ ಲಿಂಗದಳ್ಳಿ ಮಾತನಾಡಿ, ಡಾ. ಅಶೋಕ ಜಾಧವ ಶಿಕ್ಷಣ ಕ್ಷೇತ್ರದ ಅನಘ್ರ್ಯರತ್ನವಾಗಿದ್ದಾರೆ. ಇವರ ಕೈಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ತಮ್ಮ ಬಾಳು ಬೆಳಗಿಸಿಕೊಂಡಿದ್ದಾರೆ. ಇಂತಹ ಮಹಾನ್ ಸಾಧಕರು ಇಂದು ನಿವೃತ್ತಿಯಾಗುತ್ತಿದ್ದಾರೆ. ಇವರ ಮುಂದಿನ ನಿವೃತ್ತಿ ಜೀವನ ಆರೋಗ್ಯದಾಯಕವಾಗಿರಲಿ ಎಂದು ಶುಭ ಹಾರೈಸಿದರು. ವೃತ್ತಿಯಿಂದ ನಿವೃತ್ತಿ ಹೊಂದಿ ಡಾ. ಅಶೋಕ ಜಾಧವ ಮಾತನಾಡಿದರು. ನಿವೃತ್ತಿಯಾದ ನಿಮಿತ್ಯ ಹಲವಾರು ಜನ ಸನ್ಮಾನ ಮಾಡಿ ಗೌರವಿಸಿದರು. ವೇದಿಕೆ ಮೇಲೆ ಪ್ರಾಚಾರ್ಯ ಪೆÇ್ರೀ. ಅಶೋಕ ಹೆಗಡೆ, ಪೆÇ್ರೀ. ವಿ ಕೆ ಪಾಟೀಲ, ಐ ಎಸ್ ನುರಾಣಿ,ಡಾ. ರಾಜಕುಮಾರ ಮಾಲಿಪಾಟೀಲ,ಎಸ್ ಎಸ್ ಚೋರಗಿ, ಬಾಬು ಭಗತ್, ಎಚ್ ಎ ಕಲಾದಗಿ, ನಿಂಗಪ್ಪ ಚವ್ಹಾಣ, ಕಾಂಗ್ರೆಸ್ ಮುಖಂಡರಾದ ಡಾ. ಬಾಬುರಾಜೇಂದ್ರ ನಾಯಿಕ, ಫಯಾಜ್ ಕಲಾದಗಿ, ಸುರೇಶ ಶೆಡಶ್ಯಾಳ, ರಮೇಶ ಮಸಬಿನಾಳ, ಶ್ರೀಧರ ನಾಡಗೌಡ, ಮುನ್ನಾ ಮಳಖೇಡ, ಮಕಬುಲ್ ಬಾಗವಾನ, ಪ್ರಕಾಶ ಮಲ್ಹಾರಿ, ನಾಗರಾಜ ಸಂಗಣ್ಣವರ, ಸೇರಿದಂತೆ ಡಾ. ಅಶೋಕ ಜಾಧವ ಅವರ ಹಿತೈಸಿಗಳು, ಅಭಿಮಾನಿಗಳು ವಿದ್ಯಾರ್ಥಿಗಳು ಸಾರ್ವಜನಿಕರು ಪಾಲ್ಗೊಂಡಿದ್ದರು.